ಚಳಿ ಚಳಿ ತಾಳೆನು..ಉತ್ತರ ಭಾರತದಲ್ಲಿ ತೀವ್ರಗೊಂಡ ಚಳಿಗಾಳಿ
ರಾಜಸ್ಥಾನ, ಉತ್ತರಾಖಂಡಕ್ಕೆ ಆರೆಂಜ್ ಅಲರ್ಟ್
Team Udayavani, Dec 19, 2021, 6:30 AM IST
ಉತ್ತರ ಭಾರತದಾದ್ಯಂತ ತೀವ್ರ ಚಳಿಗಾಳಿ ಬೀಸುತ್ತಿದ್ದು, ಜನರನ್ನು ಥರಗುಟ್ಟುವಂತೆ ಮಾಡಿದೆ. ದಿಲ್ಲಿಯಲ್ಲಿ ಶನಿವಾರ 6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದರೆ, ರಾಜಸ್ಥಾನ ಮತ್ತು ಉತ್ತರಾಖಂಡಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. “ವಾಯವ್ಯ ಭಾರತದಲ್ಲಿ ಹಗಲಿನ ಹೊತ್ತಿನ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಿದ್ದು, ಚಳಿಗಾಳಿಯು ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯುವ ಲಕ್ಷಣ ಗೋಚರಿಸಿದೆ. ಡಿ.21ರ ವರೆಗೂ ಇದೇ ಸ್ಥಿತಿ ಇರಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.
ಎಲ್ಲೆಲ್ಲಿ ತೀವ್ರ ಚಳಿ?
ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರಪ್ರದೇಶ, ಗುಜರಾತ್ ಮತ್ತು ಉತ್ತರ ರಾಜಸ್ಥಾನದ ಕೆಲವು ಭಾಗಗಳಲ್ಲಿ ಮುಂದಿನ 5 ದಿನಗಳ ಕಾಲ ಚಳಿಗಾಳಿ ಬೀಸಲಿದೆ. ವಾಯವ್ಯ ಭಾರತದ ಬಹುತೇಕ ಭಾಗಗಳಲ್ಲಿ ತಾಪಮಾನವು 2ರಿಂದ 4 ಡಿ.ಸೆ.ನಷ್ಟು ಇಳಿಯಲಿದೆ ಎಂದೂ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಇದನ್ನೂ ಓದಿ:ರೋಹಿಣಿ ಕೋರ್ಟ್ ಸ್ಫೋಟ: ಡಿಆರ್‌ಡಿಓ ವಿಜ್ಞಾನಿ ಬಂಧನ
ಶ್ರೀನಗರದಲ್ಲಿ ಮೈನಸ್ 6 ಡಿಗ್ರಿ ಸೆ.
ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್‌ನ ಬಹುತೇಕ ಭಾಗಗಳಲ್ಲಿ ಚಳಿಗಾಳಿಯ ತೀವ್ರತೆ ಹೆಚ್ಚಾಗಿದ್ದು, ಶ್ರೀನಗರದಲ್ಲಿ ಶುಕ್ರವಾರ ರಾತ್ರಿ ಮೈನಸ್ 6 ಡಿ.ಸೆ. ತಾಪಮಾನ ದಾಖಲಾಗಿದೆ. ಈ ಋತುವಿನಲ್ಲಿ ಇಷ್ಟೊಂದು ಕನಿಷ್ಠ ತಾಪಮಾನ ದಾಖಲಾಗಿದ್ದು ಇದೇ ಮೊದಲು. ಕಳೆದ 10 ವರ್ಷಗಳಲ್ಲಿ ತಾಪಮಾನವು ಮೈನಸ್ 6 ಡಿ.ಸೆ.ಗೆ ತಲುಪಿದ್ದು ಇದು 4ನೇ ಬಾರಿ. ಶೀತಗಾಳಿಯಿಂದಾಗಿ ನೀರಿನ ಪೈಪ್‌ಲೆನ್‌ಗಳಲ್ಲಿ ನೀರು ಹೆಪ್ಪುಗಟ್ಟಿದ್ದು, ಜನಜೀವನ ಅಸ್ತವ್ಯಸ್ತವಾಗತೊಡಗಿದೆ. ಸರೋವರಗಳ ನೀರು ಕೂಡ ಮಂಜುಗಡ್ಡೆಯ ರೂಪ ತಾಳುತ್ತಿದೆ.