ಉದ್ಯೋಗವಕಾಶ ಕಲ್ಪಿಸಲು ಮುಂದಾದ ಝೊಮ್ಯಾಟೊ; 800 ಹುದ್ದೆ ಭರ್ತಿಗೆ ನಿರ್ಧಾರ
Team Udayavani, Jan 25, 2023, 7:35 AM IST
ನವದೆಹಲಿ: ಗೂಗಲ್, ಅಮೆಜಾನ್ ಸೇರಿದಂತೆ ಹಲವಾರು ಸಂಸ್ಥೆಗಳು ಜಾಗತಿಕವಾಗಿ ಉದ್ಯೋಗ ಕಡಿತಕ್ಕೆ ಮುಂದಾಗಿರುವ ನಡುವೆಯೇ, ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಝೊಮ್ಯಾಟೊ ಉದ್ಯೋಗವಕಾಶ ಕಲ್ಪಿಸಲು ಮುಂದಾಗಿದೆ. 800 ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಪ್ರಕಟಿಸಿದೆ.
ಸಾಫ್ಟವೇರ್ ಡೆವಲಪ್‌ಮೆಂಟ್ ಇಂಜಿನಿಯರ್, ಪ್ರೊಡಕ್ಟ್ ಮ್ಯಾನೇಜರ್, ಗ್ರೋಥ್ ಮ್ಯಾನೇಜರ್, ಸ್ಟಾಫ್ ಚೀಫ್ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದ್ದು,ಅರ್ಹ ಉದ್ಯೋಗಕಾಂಕ್ಷಿಗಳಿಗೆ ಝೊಮ್ಯಾಟೊ ಅವಕಾಶ ಒದಗಿಸಲಿದೆ ಎಂದು ಸಂಸ್ಥೆ ಸಿಇಒ ದೀಪಿಂದರ್ ಗೋಯೆಲ್ ಹೇಳಿದ್ದಾರೆ.
5 ಪ್ರದೇಶಗಳಲ್ಲಿ ಸಂಸ್ಥೆಯಲ್ಲಿ ಉದ್ಯೋಗಗಳು ಖಾಲಿ ಇದ್ದು,ಹೆಚ್ಚಿನ ವಿವರಕ್ಕಾಗಿ ಮೇಲ್ ಮಾಡುವಂತೆ ಲಿಂಕ್ಡ್ಇನ್‌ನಲ್ಲಿ ಗೋಯೆಲ್ ಪೋಸ್ಟ್ ಮಾಡಿದ್ದಾರೆ.