Udayavni Special

ತುಳುವ ಜಾಲ್ಡ್‌ ಕೃಷ್ಣ ಪಾರ್ದನ ಇಂದು ಸಮಾರೋಪ

Team Udayavani, Jun 18, 2021, 1:21 PM IST

anivasi kannadiga

ಮುಂಬಯಿ: ಮುಂಬಯಿ ತುಳು, ಕನ್ನಡಿಗರನ್ನು ಒಳಗೊಂಡ ಐಲೇಸಾ ದಿ ವಾಯ್ಸ ಆಫ್‌ ಓಶಿಯನ್‌ ಮತ್ತು ಇಸ್ಕಾನ್‌ ಬೆಂಗಳೂರು ಸೌತ್‌ ಸಂಯು ಕ್ತವಾಗಿ ಕಳೆದ ರವಿವಾರದಿಂದ ನಿರಂತರ

ವಾಗಿ 6 ದಿನಗಳಿಂದ ತುಳುವಿನಲ್ಲಿ ಭಗವದ್ಗೀತೆಯ ಸಾರ ಕಾರ್ಯಕ್ರಮ ವನ್ನು (ತುಳುವ ಜಾಲ್ಡ್‌ ಕೃಷ್ಣ ಪಾರ್ದನ) ಯಶಸ್ವಿಯಾಗಿ ನಡೆಸಿದ್ದು, ಇದೀಗಲೇ ಸುಮಾರು 31 ರಾಷ್ಟ್ರಗಳಲ್ಲಿ ನೆಲೆಸಿರುವ ತುಳು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ.

ತುಳು ವಿಶ್ವ ಸಮ್ಮೇಳನ ಯಶಸ್ವಿ ರೂವಾರಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಬುಧಾಬಿಯ ಸಂಘಟಕ ಸರ್ವೋತ್ತಮ ಶೆಟ್ಟಿ ಕಾರ್ಯಕ್ರ ಮವನ್ನು ಉದ್ಘಾಟಿಸಿ, ಪ್ರಸಾದೇಶ್ವರ ಕೃಷ್ಣದಾಸ ಸ್ವಾಮೀಜಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಜೂ. 18ರಂದು ಸಂಜೆ ವಿಶ್ವ ತುಳು ಸಮ್ಮೇಳನದ ಪ್ರಧಾನ ರೂವಾರಿ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾ

ಧಿಕಾರಿ ಡಾ| ಡಿ. ವೀರೇಂದ್ರ  ಹೆಗ್ಗಡೆ ಅವರ ಶುಭಾಶಂಸನೆ ಯೊಂದಿಗೆ ಸರ್ವೋತ್ತಮ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ಸಮಾರೋಪ ನಡೆಯಲಿದೆ.

ನಿರಂತರವಾಗಿ 6 ದಿನಗಳ ಕಾಲ ಪ್ರತೀದಿನ ರಾತ್ರಿ 7ರಿಂದ 8.15ರ ವರೆಗೆ ನಡೆಸಲ್ಪಟ್ಟ ಈ ಕಾರ್ಯಕ್ರಮದಲ್ಲಿ ಈಗಾಗಲೇ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವತೀ ರ್ಥ ಸ್ವಾಮೀಜಿ, ಉಡುಪಿ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಉಡುಪಿ ಅದಮಾರು ಮಠಾಧೀಶ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ, ಉಡುಪಿ ಶ್ರೀ ಪರ್ಯಾ ಯ ಅದಮಾರು ಮಠಾಧೀಶ ಶ್ರೀ ಈಶಪ್ರಿಯಾ ತೀರ್ಥ ಶ್ರೀಪಾದರು, ಕೇಮಾರು ಸಾಂದೀಪನೀ ಸಾಧನಾಶ್ರ ಮದ ಶ್ರೀ ಈಶ ವಿಟuಲದಾಸ ಸ್ವಾಮೀಜಿ,

ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನ್‌ದಾಸ್‌ ಪರಮಹಂಸ ಸ್ವಾಮೀಜಿ, ಕಾಸರಗೋ ಡು ಉಪ್ಪಳದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಶ್ರೀ ಸುಂದರ್‌ ದಾಸ್‌ ಪ್ರಭುಜಿ ಬೃಂದಾವನ್‌ ಅವರು ಐಲೇಸಾ ಕಾರ್ಯಕ್ರಮಕ್ಕೆ ಆಶೀರ್ವಚನ ನೀಡಿ ಹರಸಿದ್ದಾರೆ. ಆರ್‌ಎಸ್‌ಎಸ್‌ ಧುರೀಣ ಡಾ| ಪ್ರಭಾಕರ್‌ ಭಟ್‌ ಕಲ್ಲಡ್ಕ, ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಸಹಿತ ಹಲವಾರು ಗಣ್ಯರು ಶುಭಾಶಂಸನೆಗೈದಿದ್ದಾರೆ.

ಒಂಬತ್ತು ತಿಂಗಳ ಐಲೇಸಾ ದಿ ವಾಯ್ಸ ಆಫ್‌ ಓಶಿಯನ್‌ ಮೊದಲ ಬಾರಿಗೆ ಭಗವದ್ಗೀತೆಯನ್ನು ತುಳುವಿನಲ್ಲಿ ತುಳುವ ಜಾಲ್ಡ್‌ ಕೃಷ್ಣ ಪಾರ್ದನ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಕೊನೆಯ ದಿನವಾದ ಶುಕ್ರವಾರ ಒಡಿಯೂರು ಮಠಾಧೀಶ ಶ್ರೀ ಗುರು ದೇವಾನಂದ ಸ್ವಾಮೀಜಿ ಮತ್ತು ಕೇಮಾರು ಶ್ರೀ ಈಶ ವಿಟuಲದಾಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಉಭಯ ಸಂಸ್ಥೆಗಳು ತುಳು ಭಾಷೆಗಾಗಿ ಸಂಸ್ಕೃತಿಯ ಉಳಿವಿಗಾಗಿ ಕೈಗೊಂಡ ಈ ಭಕ್ತಿ ಸಾರ ಕಾರ್ಯಕ್ರಮವು ಭಕ್ತರಿಗೆ ಮನೆಯಲ್ಲಿದ್ದೇ ಆನ್‌ಲೈನ್‌ ಮೂಲಕ ನೋಡಿ ಕೇಳಿ ದೇವರ ಕೃಪೆಗೆ ಪಾತ್ರರಾಗಲು ನೂತನ ಯೋಚನೆ, ಅನುಭವ ಮತ್ತು ಪ್ರಯತ್ನವಾಗಿದೆ. ವಿಶ್ವದ ಇನ್ನಷ್ಟು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕಾಗಿ ಟೀಮ್‌ ಐಲೇಸಾ ತಂಡದ ಪ್ರಧಾನ ರೂವಾರಿ, ಗಾಯಕ ರಮೇಶ್ಚಂದ್ರ ಮತ್ತು ಸುರೇಂದ್ರಕುಮಾರ್‌ ಮಾರ್ನಾಡ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

ಒಂದು ಗಂಟೆಯೊಳಗೆ ಮೂರು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆ!

ಒಂದು ಗಂಟೆಯೊಳಗೆ ಮೂರು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆ!

ಪ್ರತ್ಯೇಕ ಉತ್ತರ ಕರ್ನಾಟಕದ ರಾಜ್ಯ ಕೂಗಿಗೆ ಬಸವರಾಜ ಬೊಮ್ಮಾಯಿ ಬೀಗ?

ಪ್ರತ್ಯೇಕ ಉತ್ತರ ಕರ್ನಾಟಕದ ರಾಜ್ಯ ಕೂಗಿಗೆ ಬಸವರಾಜ ಬೊಮ್ಮಾಯಿ ಬೀಗ?

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

Untitled-1

ದೀರ್ಘ‌ಕಾಲೀನ ಹೆಪಟೈಟಿಸ್‌: ಸದ್ದಿಲ್ಲದೆ ಕೊಲ್ಲುವ ಕಾಯಿಲೆ

Untitled-1

ಕ್ಯಾನ್ಸರ್‌ಗೆ 6 ಬಾರಿ ಸಿಕ್ಸರ್‌ ಹೊಡೆದ ಜೇಮ್ಸ್‌ ಬಾಂಡ್‌ ಜಯಂತ್‌!

Untitled-1

ಶಿರಾಡಿ ಘಾಟಿ ಸುರಂಗ ಮಾರ್ಗ ಅನಿವಾರ್ಯ 

ಆಗಸ್ಟ್‌ 4ರಿಂದ ಪದವಿ ಪ್ರವೇಶ ಆರಂಭ 

ಆಗಸ್ಟ್‌ 4ರಿಂದ ಪದವಿ ಪ್ರವೇಶ ಆರಂಭ ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Doctor

ವೈದ್ಯರ ವೃತ್ತಿಯಲ್ಲಿ ನೈತಿಕತೆ ಇರಲಿ: ಕೋಶ್ಯಾರಿ

Meera-road

ಜು. 31: ಶ್ರೀ ಶನಿ ಮಹಾಪೂಜೆ, ಯಕಗಾನ ತರಬೇತಿ ಕೇಂದ್ರ ಉದ್ಘಾಟನೆ

Billava

ಬಿಲವರ ಅಸೋಸಿಯೇಶನ್‌ ಡೊಂಬಿವಲಿ ಸ್ಥಳೀಯ ಕಚೇರಿ: ಗುರುಪೂರ್ಣಿಮೆ ಆಚರಣೆ

ನೂತನ ಕಾರ್ಯಾಧ್ಯಕ್ಷರಾಗಿ ಜೋನ್‌ ಡಿ’ಸಿಲ್ವಾ ಕಾರ್ಕಳ ಆಯ್ಕೆ

ನೂತನ ಕಾರ್ಯಾಧ್ಯಕ್ಷರಾಗಿ ಜೋನ್‌ ಡಿ’ಸಿಲ್ವಾ ಕಾರ್ಕಳ ಆಯ್ಕೆ

Mumbai

ವೀರ ತಾಯಂದಿರ ಧೈರ್ಯದಿಂದಾಗಿ ದೇಶ ಸುರಕ್ಷಿತ: ಕೋಶ್ಯಾರಿ

MUST WATCH

udayavani youtube

ಕೋವಿಡ್ ಹೆಚ್ಚಳಕ್ಕೆ ಪರೋಕ್ಷವಾಗಿ ಜನರೇ ಕಾರಣರಾಗುತ್ತಿದ್ದಾರೆ : ಜಿಲ್ಲಾಧಿಕಾರಿ ಜಿ. ಜಗದೀಶ್

udayavani youtube

ಅತಿವೃಷ್ಟಿ ಹೊಡೆತಕ್ಕೆ ನಲುಗಿದ ರೈತರು

udayavani youtube

ಮನೆಯ ದೀಪ ಆರಿಸಿದವನಿಗೆ ಶಿಕ್ಷೆ ಆಗಲೇ ಬೇಕು: ಅಜೇಂದ್ರ ಶೆಟ್ಟಿ ತಂದೆ ಹೇಳಿಕೆ

udayavani youtube

ಅದು ಹೇಳಿದ್ರೆ ಅವರಿಗೂ , ನನಗೂ ಒಳ್ಳೇದಲ್ಲ !

udayavani youtube

ಸತತ 4ನೇ ದಿನವೂ ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚಳ

ಹೊಸ ಸೇರ್ಪಡೆ

ಒಂದು ಗಂಟೆಯೊಳಗೆ ಮೂರು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆ!

ಒಂದು ಗಂಟೆಯೊಳಗೆ ಮೂರು ಸಂಶಯಾತ್ಮಕ ಡ್ರೋನ್ ಗಳ ಹಾರಾಟ ಪತ್ತೆ!

ಪ್ರತ್ಯೇಕ ಉತ್ತರ ಕರ್ನಾಟಕದ ರಾಜ್ಯ ಕೂಗಿಗೆ ಬಸವರಾಜ ಬೊಮ್ಮಾಯಿ ಬೀಗ?

ಪ್ರತ್ಯೇಕ ಉತ್ತರ ಕರ್ನಾಟಕದ ರಾಜ್ಯ ಕೂಗಿಗೆ ಬಸವರಾಜ ಬೊಮ್ಮಾಯಿ ಬೀಗ?

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

ಇಂದಿನ ದಿನ ಭವಿಷ್ಯ: ಈ ರಾಶಿಯವರಿಗಿಂದು ದಾಂಪತ್ಯದಲ್ಲಿ ತಾಳ್ಮೆ ಅಗತ್ಯ!

Untitled-1

ದೀರ್ಘ‌ಕಾಲೀನ ಹೆಪಟೈಟಿಸ್‌: ಸದ್ದಿಲ್ಲದೆ ಕೊಲ್ಲುವ ಕಾಯಿಲೆ

Untitled-1

ಕ್ಯಾನ್ಸರ್‌ಗೆ 6 ಬಾರಿ ಸಿಕ್ಸರ್‌ ಹೊಡೆದ ಜೇಮ್ಸ್‌ ಬಾಂಡ್‌ ಜಯಂತ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.