ಸೇವಾನಿವೃತ್ತ ಭಾರತ್‌ ಬ್ಯಾಂಕ್‌ನ ಸನತ್‌ ಪೂಜಾರಿ ಅವರಿಗೆ ಗೌರವಾರ್ಪಣೆ

Team Udayavani, May 8, 2019, 2:13 PM IST

ಮುಂಬಯಿ: ಭಾರತ್‌ ಕೋ ಆಪರೇಟಿವ್‌ ಬ್ಯಾಂಕ್‌ ಲಿಮಿಟೆಡ್‌ನ‌ ಅಧಿಕಾರಿ ಸನತ್‌ ಡಿ. ಪೂಜಾರಿ ಅವರು 29 ವರ್ಷಗಳ ಸುದೀರ್ಘ‌ ಸೇವೆ ಸಲ್ಲಿಸಿ ಎ. 30ರಂದು ಸೇವಾ ನಿವೃತ್ತರಾಗಿದ್ದು, ನಿವೃತ್ತಿ ಸಮಯದಲ್ಲಿ ಭಾಂಡೂಪ್‌ ವಿಲೇಜ್‌ರೋಡ್‌ ಶಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ಅವರ ಬೀಳ್ಕೊಡುಗೆ ಮತ್ತು ಅಭಿನಂದನ ಕಾರ್ಯಕ್ರಮವು ಗೋರೆಗಾಂವ್‌ರ ಭಾರತ್‌ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ಜರಗಿತು. ಇದೇ ಸಂದರ್ಭ ಬ್ಯಾಂಕ್‌ ವತಿಯಿಂದ ಅವರನ್ನು ಶಾಲು ಹೊದೆಸಿ, ಸ್ಮರಣಿಕೆಯನ್ನಿತ್ತು ಗೌರವಿಸ ಲಾಯಿತು. ಈ ಸಂದರ್ಭ ಮಹಾ ಪ್ರಬಂಧಕ
ರಾದ ದಿನೇಶ್‌ ಬಿ. ಸಾಲ್ಯಾನ್‌, ವಿದ್ಯಾನಂದ ಎಸ್‌. ಕರ್ಕೇರ, ಸುರೇಶ್‌ ಎಸ್‌. ಸಾಲ್ಯಾನ್‌, ನಿತ್ಯಾನಂದ ಎಸ್‌. ಕಿರೋಡಿಯನ್‌ ಶುಭ ಹಾರೈಸಿದರು.

ಬ್ಯಾಂಕಿನ ಮಹಾಪ್ರಬಂಧಕರು, ಸಹಾಯಕ ಪ್ರಬಂಧಕರು, ಸಿಬಂದಿಗಳು, ಯೂನಿಯನ್‌ಪ್ರತಿನಿಧಿಗಳು, ಭಾರತ್‌ ಬ್ಯಾಂಕ್‌ ವೆಲ್ಫೆàರ್‌ ಅಸೋಸಿಯೇಶನ್‌ ಪ್ರತಿನಿಧಿಗಳು ಉಪಸ್ಥಿತರಿದ್ದು ನಿವೃತ್ತರಿಗೆ ಶುಭ ಹಾರೈಸಿದರು. ಸನತ್‌ ಡಿ. ಪೂಜಾರಿ ಅವರು ಮಾತನಾಡಿ, ತಮ್ಮ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ