ಭಾರತ್‌ ಬ್ಯಾಂಕ್‌ನ ಘೋಡ್‌ಬಂದರ್‌ ರೋಡ್‌ ಸ್ಥಳಾಂತರಿತ ಶಾಖೆ ಶುಭಾರಂಭ


Team Udayavani, Oct 31, 2018, 1:26 PM IST

2910mum03a.jpg

ಮುಂಬಯಿ: ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಇದರ ಸ್ಥಳಾಂತರಿತ ಘೋಡ್‌ಬಂದರ್‌ ರೋಡ್‌ ಶಾಖೆಯನ್ನು ಸ್ಥಾನೀಯ ಮಾನಾ³ಡ ಚಿತಲ್‌ಸಾರ್‌ನ ದೋಸ್ತಿ ಇಂಪೇರಿಯಾ ಕಟ್ಟಡದ ತಳ ಮಹಡಿಯಲ್ಲಿ ಅ. 29 ರಂದು ಬೆಳಗ್ಗೆ ಶುಭಾರಂಭಗೊಳಿಸಲಾಯಿತು.

ಥಾಣೆ ಮೇಯರ್‌ ಮೀನಾಕ್ಷಿ ರಾಜೇಂದ್ರ ಶಿಂಧೆ ಪೂಜಾರಿ ಅವರು  ರಿಬ್ಬನ್‌ ಬಿಡಿಸಿ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಕನಿಷ್ಠಾವಧಿಯಲ್ಲಿ ಗರಿಷ್ಠ ಸಾಧನೆಗೈದ ಭಾರತ್‌ ಬ್ಯಾಂಕ್‌ ಭದ್ರತೆಯ ದ್ಯೋತಕವಾಗಿದೆ. ಪ್ರಗತಿಯ ಶೋಧದ ಪಥದಲ್ಲಿ ಮುನ್ನಡೆಯುವ ಈ ಬ್ಯಾಂಕ್‌ ನಮ್ಮ ಪರಿಸರದಲ್ಲಿ ಸೇವಾ ನಿರತವಾಗಿರುವುದು ಇಲ್ಲಿನ ತುಳು-ಕನ್ನಡಿಗರ ಹಾಗೂ ಅನ್ಯಭಾಷಿಗರ ಹಿರಿಮೆಯಾಗಿದೆ. ಬ್ಯಾಂಕಿನ ಸಾರ್ವಜನಿಕ ಕೊಡುಗೆ ಅನುಪಮವಾಗಿದೆ ಎಂದು ನುಡಿದು ಶುಭಹಾರೈಸಿದರು.

ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ,  ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರ ಉಪಸ್ಥಿತಿಯಲ್ಲಿ  ಸ್ಥಾನೀಯ ಉದ್ಯಮಿ ಅಶೋಕ್‌ಕುಮಾರ್‌ ಹೆಗ್ಡೆ ಅವರು ದೀಪ ಬೆಳಸಿ ಶಾಖೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಜಯ ಸಿ. ಸುವರ್ಣ ಅವರು ಸೇಫ್‌ ಲಾಕರ್‌ ಸೇವೆಗೆ ಚಾಲನೆ ನೀಡಿದರೆ, ಬ್ಯಾಂಕಿನ ಉಪ ಕಾರ್ಯಾಧ್ಯಕ್ಷೆ ನ್ಯಾಯವಾದಿ ರೋಹಿಣಿ ಜೆ. ಸಾಲ್ಯಾನ್‌ ಎಟಿಎಂ ಸೇವೆ ಉದ್ಘಾಟಿಸಿ ಶುಭಹಾರೈಸಿದರು.

ಉದ್ಯಮಿ ಗಣೇಶ್‌ ಆರ್‌. ಪೂಜಾರಿ, ಪ್ರಮೀಳಾ ಜಿ. ಪೂಜಾರಿ, ಡಾ| ಸಂಜಯ್‌ ವಾಲಂಜ್‌, ಸದಾನಂದ್‌ ಆರ್‌. ಪೂಜಾರಿ, ಅನಿಲ್‌ ತಿವಾರಿ, ರಾಘವ ಕೆ. ಕುಂದರ್‌ ವಿಕ್ರೋಲಿ, ರವಿ ಆರ್‌. ಪೂಜಾರಿ, ಹರೀಶ್‌ ಡಿ. ಸಾಲ್ಯಾನ್‌ ಬಜಗೋಳಿ, ಶಂಕರ್‌ ಪೂಜಾರಿ, ಜಯಂತಿ ಆರ್‌. ಪೂಜಾರಿ, ಪ್ರೇಮಾನಂದ್‌ ಆರ್‌. ಕುಕ್ಯಾನ್‌, ಜಸ್ಮಿàನ್‌ ಜತ್ತನ್ನ, ವಿಜಯಾಕೃಷ್ಣ ಪೂಜಾರಿ, ಶಂಕರ್‌ ಕೆ. ಸುವರ್ಣ ಖಾರ್‌, ಜಗನ್ನಾಥ್‌ ಅಮೀನ್‌ ಉಪ್ಪಳ  ಮತ್ತಿತರ ಗಣ್ಯರು ಉಪಸ್ಥಿತರಿದ್ದು ಶುಭಹಾರೈಸಿದರು.
ಭಾರತ್‌ ಬ್ಯಾಂಕ್‌ನ ನಿರ್ದೇಶಕರುಗಳಾದ ಜ್ಯೋತಿ ಕೆ. ಸುವರ್ಣ, ಭಾಸ್ಕರ್‌ ಎಂ. ಸಾಲ್ಯಾನ್‌, ಗಂಗಾಧರ್‌ ಜೆ. ಪೂಜಾರಿ, ಸೂರ್ಯಕಾಂತ್‌ ಜೆ. ಸುವರ್ಣ, ನ್ಯಾಯವಾದಿ ರಾಜಾ ವಿ. ಸಾಲ್ಯಾನ್‌, ಶಾರದಾ ಸೂರು ಕರ್ಕೇರ, ದಾಮೋದರ ಸಿ. ಕುಂದರ್‌, ಪುರುಷೋತ್ತಮ ಎಸ್‌. ಕೋಟ್ಯಾನ್‌, ಪ್ರೇಮನಾಥ್‌ ಪಿ. ಕೋಟ್ಯಾನ್‌, ಮೋಹನ್‌ದಾಸ್‌ ಎ. ಪೂಜಾರಿ, ಸಿಇಒ ಮತ್ತು ಆಡಳಿತ ನಿರ್ದೇಶಕ ಸಿ. ಆರ್‌. ಮೂಲ್ಕಿ, ಮಾಜಿ ನಿರ್ದೇಶಕರಾದ ಎನ್‌. ಎಂ. ಸನೀಲ್‌, ಹರೀಶ್ಚಂದ್ರ ಮೂಲ್ಕಿ, ಅಶೋಕ್‌ ಎಂ. ಕೋಟ್ಯಾನ್‌, ಕೆ. ಜಿ. ರಘವೇಂದ್ರ ಉಪಸ್ಥಿತರಿದ್ದು ಬ್ಯಾಂಕ್‌ನ ಸರ್ವೋನ್ನತಿಗೆ ಶುಭಕೋರಿದರು.

ಶೇಖರ ಶಾಂತಿ ಉಳ್ಳೂರು ತಮ್ಮ ಪೌರೋಹಿತ್ಯದಲ್ಲಿ ಗಣಹೋಮ, ಸತ್ಯನಾರಾಯಣ ಮಹಾಪೂಜೆ, ವಾಸ್ತು ಪೂಜೆ, ನೆರವೇರಿಸಿ ಆಶೀರ್ವಚನಗೈದರು. ಗಂಗಾಧರ ಕಲ್ಲಾಡಿ ತೀರ್ಥಪ್ರಸಾದ ವಿತರಿಸಿದರು. 

ಪವಿತ್ರ ಜೆ. ಪೂಜಾರಿ ಮತ್ತು ಜಿತೇಶ್‌ ಪೂಜಾರಿ ದಂಪತಿ ಹಾಗೂ ಸಿದ್ಧಾಂತ್‌ ಜಾಧವ್‌ ಪೂಜೆಯ ಯಜಮಾನತ್ವ ವಹಿಸಿದ್ದರು. ಬ್ಯಾಂಕ್‌ನ ಪ್ರಧಾನ ಪ್ರಬಂಧಕ ನಿತ್ಯಾನಂದ ಎಸ್‌. ಕಿರೋಡಿಯನ್‌, ಉಪ ಪ್ರಧಾನ ಪ್ರಬಂಧಕರಾದ ಪ್ರಭಾಕರ್‌ ಜಿ. ಸುವರ್ಣ, ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ಸುನೀಲ್‌ ಎ. ಗುಜರನ್‌, ವಿಜಯ್‌ ಪಾಲನ್‌, ವಿವಿಧ ಶಾಖೆಗಳ ಮುಖ್ಯಸ್ಥರುಗಳಾದ ಜನಾರ್ಧನ್‌ ಅಮೀನ್‌ ಥಾಣೆ, ರವಿ ಎಸ್‌. ಕೋಟ್ಯಾನ್‌ ಭಾಂಡೂಪ್‌, ರತ್ನಾಕರ್‌ ಬಿ. ಪೂಜಾರಿ ಭಿವಂಡಿ, ರತ್ನಾಕರ್‌ ಆರ್‌. ಸಾಲ್ಯಾನ್‌ ಕಲೀನಾ, ಅರ್ಚನಾ ಯು. ಸುವರ್ಣ ಕಲ್ವಾ,  ಶಾಖಾ ಸಹಾಯಕ ವ್ಯವಸ್ಥಾಪಕಿ ಕಾಂತಿ ಕರ್ಕೇರ, ಗ್ರಾಹಕರು, ಹಿತೈಷಿಗಳು  ಹಾಜರಿದ್ದರು. ಬ್ಯಾಂಕಿನ ಪ್ರಧಾನ ಪ್ರಬಂಧಕ, ಅಭಿವೃದ್ಧಿ ಇಲಾಖಾ ಮುಖ್ಯಸ್ಥರಾದ ದಿನೇಶ್‌ ಬಿ. ಸಾಲ್ಯಾನ್‌ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ಕೌಶಿಕ್‌ ಸಾಲ್ಯಾನ್‌ ಪ್ರಸ್ತಾವನೆಗೈದರು. ಕು| ನೇಹಾ ಅಮೀನ್‌ ಕಾರ್ಯಕ್ರಮ ನಿರೂಪಿಸಿದರು. ಶಾಖೆಯ ಮುಖ್ಯಸ್ಥ ಮಹೇಶ್‌ ಬಿ. ಅಮೀನ್‌ ವಂದಿಸಿದರು.

ಹಣಕಾಸು ಸಂಸ್ಥೆಯ ಸ್ಥಳಾಂತರ ಅಂದರೆ ಅಭಿವೃದ್ಧಿಯ ಸಂಕೇತ. ಇದೀಗಲೇ 102 ಶಾಖೆ ಮೂಲಕ  ಸೇವಾ ನಿರತ ಭಾರತ್‌ ಬ್ಯಾಂಕ್‌ ಕೇವಲ ಬಿಲ್ಲವರ ಮಾತ್ರವಲ್ಲ  ಭಾರತೀಯರ ಹೆಮ್ಮೆಯ ಸಹಕಾರಿ ಸಂಸ್ಥೆಯಾಗಿದೆ. ಸಾವಿರಾರು ಶಾಖೆಗಳನ್ನು ತೆರೆದು ಇನ್ನೂ ಹೆಮ್ಮರವಾಗಿ ಬೆಳೆದು ಗ್ರಾಹಕರ ಪಾಲಿನ ಕಲ್ಪವೃಕ್ಷವಾಗಲಿ .
–  ಚಂದ್ರಶೇಖರ ಪೂಜಾರಿ, ಅಧ್ಯಕ್ಷರು, ಬಿಲ್ಲವರ ಅಸೋ. ಮುಂಬಯಿ

ನಾನು ಅನಿವಾಸಿ ಭಾರತೀಯನಾಗಿದ್ದು ಬ್ಯಾಂಕಿಂ ಗ್‌ ಬಗ್ಗೆ ಅರಿತಿದ್ದರೂ ಭಾರತ್‌ ಬ್ಯಾಂಕಿನ ಕಾರ್ಯ ವೈಖರಿ ಅದ್ಭುತವಾದುದು. ರಾಷ್ಟ್ರೀಕೃತ ಬ್ಯಾಂಕ್‌ಗಳಷ್ಟೇ ಸಮಾನ ಸೇವೆ ಒಂದು ಸಹಕಾರಿ ಬ್ಯಾಂಕ್‌ ನೀಡುತ್ತಿದ್ದರೆ ಅದು ಭಾರತ್‌ ಬ್ಯಾಂಕ್‌ ಎನ್ನುವುದೇ ಅಭಿಮಾನದಿಂದ ತಿಳಿಸಬಲ್ಲೆನು.
 – ಅಶೋಕ್‌ ಕುಮಾರ್‌ ಹೆಗ್ಡೆ, ಸ್ಥಳೀಯ ಉದ್ಯಮಿ

ಹೊಸರೂಪ ಪಡೆದು ಸೇವೆಗೆ ಸಜ್ಜಾಗಿ ನಿಂತ ಭಾರತ್‌ ಬ್ಯಾಂಕ್‌ ಗ್ರಾಹಕರ ಪಾಲಿನ ವಿಶ್ವಸನೀಯ ಸಂಸ್ಥೆಯಾಗಿದೆ. ತುಳು-ಕನ್ನಡಿಗರ ಸಾರಥ್ಯದ ಬೃಹತ್‌ ಬ್ಯಾಂಕ್‌ ಇದಾಗಿದ್ದು,  ಸೇವೆಯಲ್ಲಿ ಮುನ್ನಡೆದು ರಾಷ್ಟ್ರ ವ್ಯಾಪಿಯಾಗಿ ವಿಸ್ತ¤ರಿಸಿ ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವಂತಾಗಲಿ.
– ಗಣೇಶ್‌ ಪೂಜಾರಿ, ಸ್ಥಳೀಯ ಉದ್ಯಮಿ
  ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

horocospe

ಈ ರಾಶಿಯವರಿಗಿಂದು ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕ

ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕ

7 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ; 20 ಮಂದಿ ಕಣದಿಂದ ಹಿಂದಕ್ಕೆ

7 ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ; 20 ಮಂದಿ ಕಣದಿಂದ ಹಿಂದಕ್ಕೆ

ಕುಸುಮ್‌ ಯೋಜನೆ: ರೈತರ ಪಂಪ್‌ಸೆಟ್‌ಗೆ ಸೌರವಿದ್ಯುತ್‌

ಕುಸುಮ್‌ ಯೋಜನೆ: ರೈತರ ಪಂಪ್‌ಸೆಟ್‌ಗೆ ಸೌರವಿದ್ಯುತ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತುಳುನಾಡಿನ ಸಂಸ್ಕೃತಿ ಮೇಳೈಸುವ ಗುರಿ: ಕಾವೂರುಗುತ್ತು ಹೇಮಂತ್‌ ಶೆಟ್ಟಿ

ತುಳುನಾಡಿನ ಸಂಸ್ಕೃತಿ ಮೇಳೈಸುವ ಗುರಿ: ಕಾವೂರುಗುತ್ತು ಹೇಮಂತ್‌ ಶೆಟ್ಟಿ

ಸಂಘದ ಯೋಜನೆಗಳ ಕಾರ್ಯರೂಪಕ್ಕೆ ಎಲ್ಲರ ಸಹಕಾರ ಅಗತ್ಯ: ಜಗದೀಶ್‌ ಹೆಗ್ಡೆ

ಸಂಘದ ಯೋಜನೆಗಳ ಕಾರ್ಯರೂಪಕ್ಕೆ ಎಲ್ಲರ ಸಹಕಾರ ಅಗತ್ಯ: ಜಗದೀಶ್‌ ಹೆಗ್ಡೆ

ರ‍್ಯಾಲಿ ಆಯೋಜಕರ ತನಿಖೆಯಾಗಲಿ: ಫಡ್ನವೀಸ್‌

ರ‍್ಯಾಲಿ ಆಯೋಜಕರ ತನಿಖೆಯಾಗಲಿ: ಫಡ್ನವೀಸ್‌

ಕಲಾಜಗತ್ತು ಸಂಸ್ಥೆ ರೂಪಾಂತರದೊಂದಿಗೆ ಸಶಕ್ತವಾಗಿ ಬೆಳೆದಿದೆ: ಶಶಿಧರ ಕೆ. ಶೆಟ್ಟಿ ಇನ್ನಂಜೆ

ಕಲಾಜಗತ್ತು ಸಂಸ್ಥೆ ರೂಪಾಂತರದೊಂದಿಗೆ ಸಶಕ್ತವಾಗಿ ಬೆಳೆದಿದೆ: ಶಶಿಧರ ಕೆ. ಶೆಟ್ಟಿ ಇನ್ನಂಜೆ

ಸ್ವಂತ ಕಚೇರಿಗಳಿಂದ ಸಂಘಟನೆ ಬಲಗೊಳ್ಳಲು ಸಾಧ್ಯ: ಮಹೇಶ್‌ ಎಸ್‌. ಶೆಟ್ಟಿ

ಸ್ವಂತ ಕಚೇರಿಗಳಿಂದ ಸಂಘಟನೆ ಬಲಗೊಳ್ಳಲು ಸಾಧ್ಯ: ಮಹೇಶ್‌ ಎಸ್‌. ಶೆಟ್ಟಿ

MUST WATCH

udayavani youtube

ಯುವಕ ಮತ್ತು ಮಹಿಳೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಮನ ಬಂದಂತೆ ಹಲ್ಲೆ

udayavani youtube

ಇಡೀ ವರ್ಷದ ಪಾಠ ಕೇವಲ 199 ರೂಪಾಯಿಗಳಿಗೆ !

udayavani youtube

ಕೃಷಿ ಬಿಕ್ಕಟ್ಟನ್ನು ಹೇಗೆ ಎದುರಿಸಬೇಕು ?

udayavani youtube

ಕಂಗನಾಗೆ ದೆಹಲಿ ವಿಧಾನಸಭೆ ಸಮಿತಿ ಸಮನ್ಸ್‌

udayavani youtube

ಮಾಜಿ ಶಾಸಕರ ಕಾಂಪ್ಲೆಕ್ಸ್ ನಲ್ಲಿ ಲಕ್ಷಾಂತರ ರೂ. ಕಳ್ಳತನ: ಸಿಸಿ ಟಿವಿಯಲ್ಲಿ ಸೆರೆ

ಹೊಸ ಸೇರ್ಪಡೆ

horocospe

ಈ ರಾಶಿಯವರಿಗಿಂದು ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಅಭಿವೃದ್ಧಿ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ತಮಿಳುನಾಡಿನಲ್ಲಿ ನ. 30ರ ವರೆಗೆ ಮಳೆ

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಸರಕಾರಿ ಹಾಸ್ಟೆಲ್‌ಗೆ ಅಧಿಕಾರಿಗಳೇ ಮಾರ್ಗದರ್ಶಕರು

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಬಿಹಾರವೇ ಬಡ ರಾಜ್ಯ! ನೀತಿ ಆಯೋಗದ ಬಡತನ ಸೂಚ್ಯಂಕ ವರದಿ ಬಿಡುಗಡೆ

ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕ

ಹಲವು ದೇಶಗಳಲ್ಲಿ ಕಟ್ಟೆಚ್ಚರ; ಹೊಸ ರೂಪಾಂತರಿಯಿಂದ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.