ಸಾಂಸ್ಕೃತಿಕ ನಗರಿಯಲ್ಲಿ ಹೊಟೇಲ್‌ ಉದ್ಯಮಕ್ಕೆ ಕೋವಿಡ್ ಪೆಟ್ಟು

ಹೊಟೇಲಿಗರ ಆಶಾಕಿರಣ ಪುಣೆ ರೆಸ್ಟೋರೆಂಟ್‌ ಆ್ಯಂಡ್‌ ಹೊಟೇಲಿಯರ್ ಅಸೋಸಿಯೇಶನ್‌

Team Udayavani, Oct 12, 2020, 6:28 PM IST

mumbai-tdy-1

ಸಾಂದರ್ಭಿಕ ಚಿತ್ರ

ಮುಂಬಯಿ, ಅ. 11:  ಕೋವಿಡ್ ಲಾಕ್‌ಡೌನ್‌ನಿಂದಾಗಿ ಎಲ್ಲ ಉದ್ಯಮಗಳು ನಷ್ಟ ಅನುಭವಿಸಿದ್ದು, ಅದರಲ್ಲೂ ಸಾಂಸ್ಕೃತಿಕ ನಗರಿ ಪುಣೆಯ ಹೊಟೇಲ್‌ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಪುಣೆಯಲ್ಲಿ ಸುಮಾರು ಎರಡೂವರೆ ಸಾವಿರಕ್ಕಿಂತಲೂ ಹೆಚ್ಚು ತುಳು-ಕನ್ನಡಿಗರ ಹೊಟೇಲ್‌ಗ‌ಳಿದ್ದು. ಹೊಟೇಲ್‌ ನಡೆಸುವವರ ಪಾಡು ಅಧೋಗತಿಗಿಳಿದಿದೆ. ಹೊಟೇಲ್‌ ನಡೆಸುವವರು ಹಾಕಿದ ಬಂಡವಾಳ ಕಳೆದುಕೊಂಡಿರುವುದಲ್ಲದೆ, ಲಾಕ್‌ಡೌನ್‌ ಸಮಯದಲ್ಲೂ ಮಾಲಕರು ಬಾಡಿಗೆಗಾಗಿ ಪಟ್ಟು ಹಿಡಿದಿದ್ದರಿಂದ ಹೊಟೇಲ್‌ಗ‌ಳ ಠೇವಣಿ ಕಳೆದುಕೊಂಡು ಉದ್ಯಮಕ್ಕೆ ತಿಲಾಂಜಲಿ ಇಟ್ಟಿದ್ದಾರೆ.

3 ಸಾವಿರ ಕೋಟಿ ರೂ. ನಷ್ಟ :

ಕಳೆದ ಆರೇಳು ತಿಂಗಳುಗಳಿಂದ ಸುಮಾರು ಮೂರು ಸಾವಿರ ಕೋ. ರೂ. ಗಳಷ್ಟು ವ್ಯವಹಾರ ನಷ್ಟಗೊಂಡಿರುವುದಲ್ಲದೆ, ಎರಡೂವರೆ ಲಕ್ಷ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಹೊಟೇಲ್‌ ವ್ಯವ ಹಾರಕ್ಕೆ ಸಂಬಂಧಪಟ್ಟ  ಸುಮಾರು 25ಕ್ಕೂ ಹೆಚ್ಚು ಇತರ ರೀತಿಯ ವ್ಯಾಪಾರಿಗಳೂ ನಷ್ಟ ಅನುಭವಿಸಿದ್ದಾರೆ. ಹೊಟೇಲ್‌  ಬಂದ್‌ ಇದ್ದರೂ  ಸರಕಾರ ಅಬಕಾರಿ ಶುಲ್ಕ ಭರಿಸಲು ಹೇಳುತ್ತಿರುವುದರಿಂದ ಹೊಟೇಲಿಗರು ಕಂಗಾಲಾಗಿದ್ದಾರೆ. ಸರ್ವಸ್ವ  ಕಳಕೊಂಡ ಹಲವು ಮಂದಿ ತುಳು, ಕನ್ನಡಿಗರು ಸಾಲದ ಸುಳಿಯಲ್ಲಿ ಸಿಕ್ಕಿ  ಕಷ್ಟ ಅನುಭವಿಸುತ್ತಿದ್ದರೆ, ಇನ್ನೊಂದೆಡೆ ನಗರದ ಇಬ್ಬರು ಪ್ರಸಿದ್ಧ ಹೊಟೇಲ್‌ ಉದ್ಯಮಿಗಳು ಆತ್ಮಹತ್ಯೆಗೆ ಶರಣಾಗಿರುವುದು ಹೊಟೇಲ್‌ ಉದ್ಯಮದ ದುರಂತ ಕತೆಗೆ ಸಾಕ್ಷಿಯಾಗಿದೆ.

ನೆಲ ಕಚ್ಚಿದ ಕ್ಯಾಂಟೀನ್‌ ಉದ್ಯಮ : ರಾಜ್ಯದಲ್ಲಿ ಪುಣೆಯು ಕಂಪೆನಿಗಳು ಮತ್ತು ಕೈಗಾರಿಕೆಗಳಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಹೆಚ್ಚಿನ ಕಂಪೆನಿಗಳ ಕ್ಯಾಂಟೀನ್‌ಗಳು ಕನ್ನಡಿಗರಲ್ಲಿದೆ. ಕಂಪೆನಿಗಳು  ಬಾಗಿಲು ಮುಚ್ಚಿದ್ದರಿಂದ ಕಾಂಟ್ರಾಕ್ಟ್ ದಾರರು ಪರದಾಡುವಂತಾಗಿದೆ. ಐಟಿ ಕಂಪೆನಿಗಳ ಉದ್ಯೋಗಿಗಳು ಮನೆಯಲ್ಲಿ ಕೆಲಸ ಮಾಡುತ್ತಿದ್ದು,  ಡಿಸೆಂಬರ್‌ವರೆಗೂ ತೆರೆಯುವುದು ಅನುಮಾನ. ತೆರೆದರೂ ಮೊದಲಿನಂತೆ ಕ್ಯಾಂಟೀನ್‌ ಉದ್ಯಮ ಸರಿಹೊಂದಲು ಹಲವಾರು ತಿಂಗಳುಗಳೇ ಬೇಕಾಗಬಹುದು. ಶಾಲಾ-ಕಾಲೇಜು, ಹಾಸ್ಟೆಲ್‌ಗ‌ಳು ಈ ವರ್ಷ ತೆರೆಯುವಂತಿಲ್ಲ, ಈ ಎಲ್ಲ ರೀತಿಯ ಉದ್ಯಮದಲ್ಲಿ ತುಳು – ಕನ್ನಡಿಗರು ಒಂದಲ್ಲ ಒಂದು ರೀತಿಯಲ್ಲಿ  ನಷ್ಟವನ್ನು ಅನುಭವಿಸಿದ್ದಾರೆ. ಹೊಟೇಲ್‌ ಕಾರ್ಮಿಕರು  ಲಾಕ್‌ಡೌನ್‌ ಸಮಯದಲ್ಲಿ ಊರಿನ ದಾರಿ ಹಿಡಿದಿದ್ದು, ಕಾರ್ಮಿಕರ ಸಮಸ್ಯೆ ಎದುರಾಗಿದ್ದು, ಪ್ರಸ್ತುತ  ಶೇ. 10 ರಷ್ಟು ಕಾರ್ಮಿಕರು ಮಾತ್ರ ಲಭ್ಯರಿದ್ದಾರೆ.

3 ತಿಂಗಳಿನಿಂದ ಸತತ ಪ್ರಯತ್ನ : ಹೊಟೇಲ್‌ ಉದ್ಯಮವನ್ನು ಮರು ಪ್ರಾರಂಭಿಸುವಂತೆ ಸುಮಾರು ಮೂರು ತಿಂಗಳಿನಿಂದ ಪುಣೆ ರೆಸ್ಟೋರೆಂಟ್‌ ಆ್ಯಂಡ್‌  ಹೊಟೇಲಿಯರ್ ಅಸೋಸಿಯೇಶನ್‌ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಅಧ್ಯಕ್ಷ ಗಣೇಶ್‌ ಶೆಟ್ಟಿ ತಿಳಿಸಿದ್ದಾರೆ.  ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಅಬಕಾರಿ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಬಂಧ‌ಪಟ್ಟ ಅಧಿಕಾರಿ ಗಳನ್ನು ಸಂಪರ್ಕಿಸಿ ಸಭೆ ನಡೆಸಿ  ಚರ್ಚಿಸಿ ಒತ್ತಡವನ್ನು ಹಾಕಿದ್ದೇವೆ.

ಇದೀಗ ಶೇ. 50ರಷ್ಟು ಉದ್ಯಮ ಪ್ರಾರಂಭಿಸುವುದಕ್ಕೆ ಅನುಮತಿ  ನೀಡಿರುವ ಸರಕಾರದ ನಡೆಯನ್ನು ಸ್ವಾಗತಿಸುತ್ತೇವೆ. ಸರಕಾರದ ಮಾರ್ಗ ಸೂಚಿಗಳು ಕಠಿನವಾಗಿದ್ದು, ಅದನ್ನು ಪಾಲಿಸುವುದು ಹೊಟೇಲಿಗರ ಕರ್ತವ್ಯ ವಾಗಿದೆ ಎಂದು ಗಣೇಶ್‌ ಶೆಟ್ಟಿ  ಅವರು ತಿಳಿಸಿದ್ದಾರೆ.

ಆರೋಗ್ಯದೆಡೆಗೆ ಎಚ್ಚರ ಅಗತ್ಯ :  ಈ ಹಿಂದೆ ಶೇ.  15ರಷ್ಟು ಹೊಟೇಲ್‌ಗ‌ಳು ಪಾರ್ಸೆಲ್‌ ವ್ಯವಹಾರ ಮಾಡುತ್ತಿದ್ದವು. ಪ್ರಸ್ತುತ ಹೊಟೇಲ್‌ ಪ್ರಾರಂಭ ಮಾಡಿದರೂ ಹೊಟೇಲಿಗರಿಗೆ ಲಾಭವಿಲ್ಲ. ವ್ಯಾಪಾರ ಆಗಬಹುದು ಎಂಬ ಭರವಸೆಯೂ ಇಲ್ಲ. ಕೆಲವು ಕಾರ್ಮಿಕರಿಗೆ ಕೆಲಸ  ಸಿಗಬಹುದು. ಆದರೆ ಹೊಟೇಲ್‌  ಉದ್ಯಮಿಗಳು ತಮ್ಮ ವ್ಯಾಪಾರ ವಹಿವಾಟಿನಲ್ಲಿ ಸರಿಯಾಗಿ ಹೊಂದಿಕೊಳ್ಳಲು ಇನ್ನೆಷ್ಟು ದಿನಗಳು ಹೋಗಬಹುದು  ಎಂದು ಹೇಳುವಂತಿಲ್ಲ. ನಮ್ಮ ಆರೋಗ್ಯದ ಜತೆಗೆ, ಕಾರ್ಮಿಕರ ಆರೋಗ್ಯ ಮತ್ತು  ಗ್ರಾಹಕರ ಅರೋಗ್ಯದೆಡೆಗೆ ಕೂಡ ಎಚ್ಚರ ವಹಿಸಬೇಕಾಗಿದೆ. ಸಮಸ್ಯೆಗಳ  ನಡುವೆ ಹೊಟೇಲ್‌ ಪ್ರಾರಂಭಿಸುವುದನ್ನು ಬಿಟ್ಟರೆ ಬೇರೆ ದಾರಿಯಿಲ್ಲ ಎಂದು ಗಣೇಶ್‌ ಶೆಟ್ಟಿ  ಅಭಿಪ್ರಾಯಪಟ್ಟಿದ್ದಾರೆ.

ಅಸೋಸಿಯೇಶನ್‌ ಹೊಟೇಲಿಗರ ಸಮಸ್ಯೆಗಳಿಗೆ ಸ್ಪಂದಿಸು ತ್ತಿದೆ. ಅದಕ್ಕಾಗಿ ಕಳೆದ ಮೂರು-ನಾಲ್ಕು ತಿಂಗಳುಗಳಿಂದ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿದೆ. ಅಬಕಾರಿ ಶುಲ್ಕ, ಪುಣೆ ಮಹಾನಗರ ಪಾಲಿಕೆಯ ವಿವಿಧ ಲೈಸೆನ್ಸ್‌ಗಳ ಶುಲ್ಕ ಮನ್ನಾ ಅಥವಾ ಕಡಿತಗೊಳಿಸುವಂತೆ ಮನವಿ ಮಾಡಿದ್ದೇವೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ.  ಹೊಟೇಲ್‌ ಉದ್ಯಮ ಮತ್ತೆ ಹಳಿಯೇರಲು ಸ್ವಲ್ಪ ಸಮಯ ಹಿಡಿಯಬಹುದು. ಅಲ್ಲಿಯವರೆಗೆ  ತಾಳ್ಮೆ  ಮುಖ್ಯ. ಸಮಸ್ಯೆಗಳಿದ್ದರೆ   ಅಸೋಸಿಯೇಶನ್‌ ಮುಖಾಂತರ ಪರಿಹರಿಸೋಣ.  -ಗಣೇಶ್‌ ಶೆಟ್ಟಿ  ಅಧ್ಯಕ್ಷರು, ಪುಣೆ ರೆಸ್ಟೋರೆಂಟ್‌ ಆ್ಯಂಡ್‌  ಹೊಟೇಲಿಯರ್  ಅಸೋಸಿಯೇಶನ್‌

ಟಾಪ್ ನ್ಯೂಸ್

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

10

ದರ್ಶನ್‌ ನನ್ನ ಮೇಲೆ ಹಲ್ಲೆ ನಡೆಸಿಲ್ಲ.. ನಾನು ಅವರ ದೊಡ್ಡ ಅಭಿಮಾನಿ: ಪವಿತ್ರಾ ಮಾಜಿ ಪತಿ  

10-mng

Umrahಕ್ಕೆ ತೆರಳಿದ್ದವರ ಟ್ರಾಲಿ ಬ್ಯಾಗ್ ನಿಂದ ಹಣ ಕಳವು; ವಿಮಾನಯಾನ ಸಂಸ್ಥೆಯ ಮೇಲೆ ಆರೋಪ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

ರೇಣುಕಾಸ್ವಾಮಿ ಮರಣೋತ್ತರ ಪರೀಕ್ಷೆ ವರದಿ ತಿರುಚುವ ಪ್ರಯತ್ನದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

Assam: ಪತ್ನಿ ಸಾವನ್ನಪ್ಪಿದ ICU ಒಳಗೆ ಗುಂಡು ಹೊಡೆದುಕೊಂಡು ಕೊನೆಯುಸಿರೆಳೆದ ಪತಿ!

9-hunsur

Hunsur: ನಾಗರಹೊಳೆ ಉದ್ಯಾನದಲ್ಲಿ ಕಾಡಾನೆ ಶವ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

Dubai ಕನ್ನಡ ಸಂಘ: ಹಾದಿಯ ಮಂಡ್ಯ ಅಧ್ಯಕ್ಷೆ, ವರದರಾಜ್‌ ಕೋಲಾರ ಪ್ರ.ಕಾರ್ಯದರ್ಶಿ

Dubai ಕನ್ನಡ ಸಂಘ: ಹಾದಿಯ ಮಂಡ್ಯ ಅಧ್ಯಕ್ಷೆ, ವರದರಾಜ್‌ ಕೋಲಾರ ಪ್ರ.ಕಾರ್ಯದರ್ಶಿ

Desi Swara: ಕತಾರ್‌ ಕರ್ನಾಟಕ ಸಂಘಕ್ಕೆ ನೂತನ ಸಾರಥ್ಯ

Desi Swara: ಕತಾರ್‌ ಕರ್ನಾಟಕ ಸಂಘಕ್ಕೆ ನೂತನ ಸಾರಥ್ಯ

Desi Swara-ದೋಹಾ: ಮಾವಿನ ರುಚಿಗೆ ಮಾರುಹೋದ ಸಾವಿರಾರು ಮಂದಿ

Desi Swara-ದೋಹಾ: ಮಾವಿನ ರುಚಿಗೆ ಮಾರುಹೋದ ಸಾವಿರಾರು ಮಂದಿ

1-asdasdas

Mango fair; ಕೊಲ್ಲಿ ರಾಷ್ಟ್ರದಲ್ಲಿ ಹಣ್ಣಿನ ರಾಜನ ಹಿರಿಮೆ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

Actor Pratham: ಬಿಗ್‌ ಬಾಸ್‌ ಖ್ಯಾತಿಯ ನಟ ಪ್ರಥಮ್‌ಗೆ ಜೀವ ಬೆದರಿಕೆ; ದೂರು ದಾಖಲು

11-yellapur

Yellapur: ನಿಯಂತ್ರಣ ತಪ್ಪಿ ಕಾರು ಪಲ್ಟಿ; ಪ್ರಯಾಣಿಕರು ಪಾರು

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

Bengaluru: ಅಮೆಜಾನ್‌ ಪಾರ್ಸೆಲ್‌ ನೊಳಗೆ ವಿಷಕಾರಿ ಹಾವು-ಮಹಿಳೆ ಬಚಾವ್!‌ Watch

10

ದರ್ಶನ್‌ ನನ್ನ ಮೇಲೆ ಹಲ್ಲೆ ನಡೆಸಿಲ್ಲ.. ನಾನು ಅವರ ದೊಡ್ಡ ಅಭಿಮಾನಿ: ಪವಿತ್ರಾ ಮಾಜಿ ಪತಿ  

Cow

Chikkaballapura: ಮುಂಗಾರು ಬೆನ್ನಲ್ಲೇ ಹೈನೋದ್ಯಮಕ್ಕೆ ಜೀವಕಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.