
ದುಬೈ ಗೆ ಹಾರಿದ ಸಾಂಗ್ಲಿ ಜಿಲ್ಲೆಯ ತಡಾಸರ್ ರೈತರು ಬೆಳೆದ ಡ್ರ್ಯಾಗನ್ ಹಣ್ಣುಗಳು
Team Udayavani, Jun 28, 2021, 2:54 PM IST

ಮುಂಬಯಿ,: ಹಣ್ಣಿನ ರಫ್ತಿಗೆ ಪ್ರಮುಖ ಉತ್ತೇಜನ ನೀಡುವಂತೆ ಕಮಲಂ ಎಂದೂ ಕರೆಯಲ್ಪಡುವ ಫೈಬರ್ ಮತ್ತು ಖನಿಜ ಸಮೃದ್ಧ ಡ್ರ್ಯಾಗನ್ ಹಣ್ಣುಗಳನ್ನು ದುಬೈ ಗೆ ರಫ್ತು ಮಾಡಲಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ. ಡ್ರ್ಯಾಗನ್ ಹಣ್ಣುಗಳನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ತಡಾಸರ್ ಗ್ರಾಮದ ರೈತರಿಂದ ಪಡೆಯಲಾಗಿದೆ ಮತ್ತು ಇದನ್ನು ಎಪಿಇಡಿಎ ಮಾನ್ಯತೆ ಪಡೆದ ರಫ್ತುದಾರ-ಕೇ ಬೀ ಯಲ್ಲಿ ಸಂಸ್ಕರಿಸಿ ಪ್ಯಾಕ್ ಮಾಡಲಾಗಿದೆ ಎಂದು ಸಚಿವಾಲಯ ಹೇಳಿದೆ.
ವೈಜ್ಞಾನಿಕವಾಗಿ ಹೈಲೋಸೆರುಸುಂಡಾಟಸ್ ಎಂದು ಕರೆಯಲ್ಪಡುವ ಡ್ರ್ಯಾಗನ್ ಹಣ್ಣನ್ನು ಮಲೇಷ್ಯಾ, ಥೈಲ್ಯಾಂಡ್, ಫಿಲಿಪೈನ್ಸ್, ಯುಎಸ್‌ಎ ಮತ್ತು ವಿಯೆಟ್ನಾಂನಂತಹ ದೇಶಗಳಲ್ಲಿ ಬೆಳೆಯಲಾಗುತ್ತದೆ. ಡ್ರ್ಯಾಗನ್ ಹಣ್ಣು ಉತ್ಪಾದನೆಯು 1990ರ ದಶಕದ ಆರಂಭದಲ್ಲಿ ಭಾರತದಲ್ಲಿ ಪ್ರಾರಂಭವಾಗಿದ್ದು, ಮನೆ ತೋಟಗಳಾಗಿ ಬೆಳೆಸಲಾಯಿತು. ಡ್ರ್ಯಾಗನ್ ಹಣ್ಣು ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗಿದೆ. ಇದನ್ನು ವಿವಿಧ ರಾಜ್ಯಗಳ ರೈತರು ಕೃಷಿ ಮಾದರಿಯಲ್ಲೇ ಬೆಳೆಸಿಕೊಂಡಿದ್ದಾರೆ.
ಪ್ರಸ್ತುತ ಡ್ರ್ಯಾಗನ್ ಹಣ್ಣನ್ನು ಹೆಚ್ಚಾಗಿ ಕರ್ನಾಟಕ, ಕೇರಳ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಪಶ್ಚಿಮ ಬಂಗಾಲ, ಆಂಧ್ರಪ್ರದೇಶ ಮತ್ತು ಅಂಡಮಾನ್ ನಿಕೋಬಾರ್‌ನಲ್ಲಿ ಬೆಳೆಯಲಾಗುತ್ತದೆ. ಈ ಹಣ್ಣಿನ ಕೃಷಿಗೆ ಕಡಿಮೆ ನೀರು ಬೇಕಾಗುತ್ತದೆ ಮತ್ತು ವಿವಿಧ ರೀತಿಯ ಮಣ್ಣಿನಲ್ಲಿ ಬೆಳೆಯಬಹುದು. ಹಣ್ಣಿನಲ್ಲಿ ಮೂರು ಪ್ರಮುಖ ಪ್ರಭೇದಗಳಿವೆ.
ಪ್ರಧಾನಿ ನರೇಂದ್ರ ಮೋದಿ ಅವರು 2020ರ ಜುಲೈಯಲ್ಲಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಗುಜರಾತ್‌ನ ಶುಷ್ಕ ಕಚ್ ಪ್ರದೇಶದಲ್ಲಿ ಡ್ರಾÂಗನ್ ಹಣ್ಣು ಬೆಳೆಸುವ ಬಗ್ಗೆ ಪ್ರಸ್ತಾವಿಸಿದ್ದರು. ಉತ್ಪಾದನೆಯಲ್ಲಿ ಭಾರತದ ಸ್ವಾವಲಂಬನೆ ಖಾತ್ರಿಪಡಿಸಿದ್ದಕ್ಕಾಗಿ ಹಣ್ಣಿನ ಕೃಷಿ ಮಾಡಿದ ಕಚ್ ರೈತರನ್ನು ಅವರು ಅಭಿನಂದಿಸಿದ್ದರು. ಹಣ್ಣಿನಲ್ಲಿ ಫೈಬರ್, ವಿಟಮಿನ್, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳು ಇರುತ್ತವೆ. ಇದು ಆಕ್ಸಿಡೇಟಿವ್ ಒತ್ತಡದಿಂದ ಉಂಟಾಗುವ ಜೀವಕೋಶದ ಹಾನಿಯನ್ನು ಸರಿಪಡಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುವುದಲ್ಲದೆ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಈ ಹಣ್ಣಿನಲ್ಲಿ ಕಮಲವನ್ನು ಹೋಲುವ ಸ್ಪೆçಕ್‌ಗಳು ಮತ್ತು ದಳಗಳು ಇರುವುದರಿಂದ ಇದನ್ನು ಕಮಲಂ ಎಂದೂ ಕರೆಯಲಾಗುತ್ತದೆ.
ಮೂಲ ಸೌಕರ್ಯ ಅಭಿವೃದ್ಧಿ, ಗುಣಮಟ್ಟ ಅಭಿವೃದ್ಧಿ ಮತ್ತು ಮಾರುಕಟ್ಟೆ ಅಭಿವೃದ್ಧಿ ಮೊದಲಾದ ವಿವಿಧ ಘಟಕಗಳ ಅಡಿಯಲ್ಲಿ ರಫ್ತುದಾರರಿಗೆ ನೆರವು ನೀಡುವ ಮೂಲಕ ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತುಗಳನ್ನು ಎಪಿಇಡಿಎ ಉತ್ತೇಜಿಸುತ್ತದೆ. ಇದಲ್ಲದೆ ವಾಣಿಜ್ಯ ಇಲಾಖೆಯು ರಫ್ತು ಯೋಜನೆಗಾಗಿ ವ್ಯಾಪಾರ ಮೂಲ ಸೌಕರ್ಯ, ಮಾರುಕಟ್ಟೆ ಪ್ರವೇಶ ಉಪಕ್ರಮ ಮೊದಲಾದ ವಿವಿಧ ಯೋಜನೆಗಳ ಮೂಲಕ ರಫ್ತಿಗೆ ಸಹಕರಿಸಲಾಗುತ್ತದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Belthangady: ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿ ಹೃದಯಾಘಾತದಿಂದ ನಿಧನ

Road mishap: ಕಾರು – ಟ್ರ್ಯಾಕ್ಟರ್ ಟ್ರಾಲಿ ಅಪಘಾತ; ಸಚಿವರ ತಲೆಗೆ ತೀವ್ರಗಾಯ

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟಿದ್ದ ಶತಾಬ್ದಿ ರೈಲು ಮೂರೂವರೆ ಗಂಟೆ ತಡ

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

ರಾತ್ರೋ ರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ