Udayavni Special

ಕೆ. ಡಿ. ಶೆಟ್ಟಿ ಅವರ ಸಮಾಜ ಸೇವೆ ಅನುಕರಣೀಯ: ಧರ್ಮಪಾಲ ದೇವಾಡಿಗ


Team Udayavani, Dec 8, 2020, 6:39 PM IST

ಕೆ. ಡಿ. ಶೆಟ್ಟಿ ಅವರ ಸಮಾಜ ಸೇವೆ ಅನುಕರಣೀಯ: ಧರ್ಮಪಾಲ ದೇವಾಡಿಗ

ಮುಂಬಯಿ, ಡಿ. 7: ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯೊಬ್ಬ ಸಾಧನೆ ಮತ್ತು ಛಲದದೊಂದಿಗೆ ಎತ್ತರಕ್ಕೇರಬಹುದು ಎಂಬುದಕ್ಕೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ. ಡಿ. ಶೆಟ್ಟಿ ಅವರು ಉದಾಹರಣೆಯಾಗಿದ್ದಾರೆ. ನಿರಂತರ ಪರಿಶ್ರಮದಿಂದ ಸ್ವಂತ ಉದ್ಯಮ ವನ್ನು ಪ್ರಾರಂಭಿಸಿ ಅಸಹಾಯಕರಿಗೆ ಸಹಾಯ ಮಾಡುವ ಉದ್ದೇಶದಿಂದ ತನ್ನ ಮಾತೃಶ್ರೀಯರ ಹೆಸರಲ್ಲಿ ಭವಾನಿ ಫೌಂಡೇಶನ್‌ ಸಂಸ್ಥೆಯನ್ನು ಸ್ಥಾಪಿಸಿ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿನ ಜನಸಾಮಾನ್ಯರಿಗೆ ಸಹಾಯ ಮಾಡುತ್ತಿರು ವುದನ್ನು ಕರ್ನಾಟಕ ಸರಕಾರ ಗುರುತಿಸಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಮುಂದಿನ ದಿನಗಳಲ್ಲಿ ಇವರ ಸೇವಾಕಾರ್ಯವನ್ನು ದೇಶ ಗುರುತಿಸು ವಂತಾಗಲಿ ಎಂದು ಭವಾನಿ ಫೌಂಡೇಷನ್‌ನ ಟ್ರಸ್ಟಿ ಹಾಗೂ ಅಖೀಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ತಿಳಿಸಿದರು.

ಡಿ. 5ರಂದು ನವಿಮುಂಬಯಿಯ ಸಿಬಿಡಿಯಲ್ಲಿನ ಭವಾನಿ ಫೌಂಡೇಶನ್‌ ಕಾರ್ಯಾಲಯದಲ್ಲಿ ನಡೆದ ವಿಶೇಷ ಸಭೆಯಲ್ಲಿ ಭವಾನಿ ಫೌಂಡೇಶನ್‌ ವತಿಯಿಂದ ಕೆ. ಡಿ. ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿ, ಕೆ. ಡಿ. ಶೆಟ್ಟಿಯವರ ಸಾಧನೆ ಅನುಕರಣೀ ಯವಾಗಿದೆ. ಅವರಿಂದ ಇನ್ನಷ್ಟು ಸಮಾಜಪರ ಸೇವೆಗಳು ಮಾಡುವಂತಾ ಗಬೇಕು. ಅದಕ್ಕಾಗಿ ಅವರೊಂದಿಗೆ ಎಲ್ಲರೂ ಕೈಜೋಡಿಸುವ ಅಗತ್ಯವಿದೆ ಎಂದರು.

ಇಂಡಿಯನ್‌ ಎಕ್ಸ್‌ಪ್ರೆಸ್‌ ಪತ್ರಿಕೆಯ ಪತ್ರಕರ್ತ, ಭವಾನಿ ಪೌಂಡೇಶನ್‌ ಟ್ರಸ್ಟಿ ದಿನೇಶ್‌ ಶೆಟ್ಟಿ  ಮಾತನಾಡಿ, ಕೆ. ಡಿ. ಶೆಟ್ಟಿಯ ಸಾಧನೆ ಹಾಗೂ ಜನ ಸಾಮಾನ್ಯರ ಸೇವೆಯನ್ನು ಮಹಾರಾಷ್ಟ್ರ ಸರಕಾರವೂ ಗುರುತಿಸಿ ಅವರನ್ನು ಗೌರವಿಸುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮವನ್ನು ನಿರ್ವಹಿಸಿದ ಭವಾನಿ ಫೌಂಡೇಶನ್‌ನ ಟ್ರಸ್ಟಿ ಕಲಾ ಸಂಘಟಕ ಕರ್ನೂರು ಮೋಹನ್‌ ರೈ ಮಾತನಾಡಿ. ಕಳೆದ ಹಲವಾರು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯವಾಗಿ ಸಹಕರಿಸುವುದರೊಂದಿಗೆ ಮಹಾರಾಷ್ಟ್ರದ ಆದಿವಾಸಿ ಜನರಿಗೆ ಸಹಾಯ ಮಾಡುತ್ತಾ ಬಂದಿರುವ ಭವಾನಿ ಫೌಂಡೇಶನ್‌ನ ಸೇವಾ ಕಾರ್ಯವನ್ನು ಕರ್ನಾಟಕ ಸರಕಾರ ಗುರುತಿಸಿರುವುದು ಅಭಿನಂದನೀಯ. ಈ ಸೇವೆಯು ನಿರಂತರವಾಗಿ ಮುಂದುವರಿ ಯಲಿದೆ ಎಂದರು.

ಕೆ. ಡಿ. ಶೆಟ್ಟಿಯವರ ಪುತ್ರಿ ಮತ್ತು ಭವಾನಿ ಫೌಂಡೇಶನ್‌ನ ಟ್ರಸ್ಟಿ ಶಿಖಾ ಕೆ. ಶೆಟ್ಟಿ  ಮಾತನಾಡಿ, ತಂದೆಯವರಿಗೆ ಸಿಕ್ಕಿದ ಪ್ರಶಸ್ತಿ ಬಗ್ಗೆ ನನಗೆ ತುಂಬಾ ಅಭಿಮಾನವಿದೆ. ಅವರು ಮಾಡಿದ ಸೇವೆಯನ್ನು ಸರಕಾರವು ಗುರುತಿಸಿ ಗೌರವಿಸಿದೆ. ಸಮಾಜ ಸೇವೆಯು ಅವರ ರಕ್ತದ ಕಣದಲ್ಲಿದೆ. ನಾವು ಯಾವಾಗಲೂ ಅವರೊಂದಿಗಿದ್ದೇವೆ. ಇನ್ನೊಬ್ಬರ ಕಷ್ಟದ ಬಗ್ಗೆ ಚಿಂತಿಸುವವರು ಅವರು ಎಂದರು.

ಕಾರ್ಯಕ್ರಮದಲ್ಲಿ ಫೌಂಡೇಶನ್‌ನ ಟ್ರಸ್ಟಿಗಳು ಕೆ. ಡಿ. ಶೆಟ್ಟಿ ಅವರನ್ನು ಶಾಲು ಹೊದೆಸಿ, ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು. ಫೌಂಡೇಶನ್‌ನ ಪದಾಧಿಕಾರಿ ರವಿ ಉಚ್ಚಿಲ್‌ ಹಾಗೂ ಇತರರು ಅಭಿನಂದಿಸಿದರು. ಭವಾನಿ ಫೌಂಡೇಶನ್‌ನ ಟ್ರಸ್ಟಿ ಪ್ರೇಮನಾಥ ಶೆಟ್ಟಿ ಮುಂಡ್ಕೂರು ವಂದಿಸಿದರು.

ಹೊರನಾಡ ಕನ್ನಡಿಗರ ಪರವಾಗಿ ಪ್ರಶಸ್ತಿ ಸ್ವಿಕಾರ: ಕೆ. ಡಿ. ಶೆಟ್ಟಿ : ಅಸಹಾಯಕರಿಗೆ ಸಹಾಯ ಮಾಡುವುದು ನಮ್ಮ ಗುರಿಯಾಗಿರಲಿ.  ನಾವೆಲ್ಲರೂ ಜಾತಿ ಭೇದ ಮರೆತು ತುಳು ಕನ್ನಡಿಗರಾಗಿ ಕನ್ನಡ ಶಾಲೆಗಳಿಗೆ  ಹಾಗೂ ಶಿಕ್ಷಣದಲ್ಲಿ ವಂಚಿತ ರಾಗುವವರಿಗೆ ಸಹಕರಿಸೋಣ. ರಾಜ್ಯೋತ್ಸವ ಪ್ರಶಸ್ತಿಯು ನನಗೆ ಸಿಕ್ಕಿದೆ ಅನ್ನುದರ ಬದಲು ಮಹಾರಾಷ್ಟ್ರದಲ್ಲಿನ ಎಲ್ಲ  ತುಳು ಕನ್ನಡಿಗರ ಪರವಾಗಿ ಸ್ವೀಕರಿಸಿದ್ದೇನೆ ಎನ್ನಬಹುದು. ಇದೀಗ ನನ್ನ  ಜವಾಬ್ದಾರಿ ಹೆಚ್ಚಾಗಿದೆ. ಸಂಪಾದನೆಯಲ್ಲಿ ಕೆಲವಂಶ ವನ್ನಾದರೂ ದಾನ  ಧರ್ಮದಲ್ಲಿ ವಿನಿಯೋಗಿಸಬೇಕು ಎಂಬುದೇ ನನ್ನ ಕನಸು. ಸಮಾಜಸೇವೆ  ನನ್ನ ರಕ್ತದಲ್ಲಿದೆ. ರಾತ್ರಿ ಶಾಲೆಯಲ್ಲಿ ಕಲಿತು ಬಡವರ ಕಣ್ಣೀರೊರಸುವ ಕೆಲಸವನ್ನು ಮಾಡುವ ಭಾಗ್ಯ ನನಗೆ ದೊರಕಿದೆ. -ಕೆ. ಡಿ. ಶೆಟ್ಟಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

tdy-2

ಮುಂಬೈ : ಬಾಯ್‌ಫ್ರೆಂಡ್‌ ಜತೆ ಪತ್ನಿ ಪರಾರಿ: ಪತಿ ದೂರು

ಚಿಕ್ಕಬಳ್ಳಾಪುರ : ದ್ವಿತೀಯ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭ- 2358 ಫಲಾನುಭವಿಗಳಿಗೆ

ಚಿಕ್ಕಬಳ್ಳಾಪುರ : ದ್ವಿತೀಯ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭ- 2358 ಫಲಾನುಭವಿಗಳಿಗೆ

ರಸ್ತೆ ನಿರ್ಮಾಣ ವಿಚಾರ : ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ : ಹಲವರಿಗೆ ಗಾಯ

ರಸ್ತೆ ನಿರ್ಮಾಣ ವಿಚಾರ : ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ : ಹಲವರಿಗೆ ಗಾಯ

tdy-1

ರಕ್ಷಣಾ ‌ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ .ಜ.20 ರಂದು ಕಾರವಾರ ನೌಕಾನೆಲೆಗೆ ಭೇಟಿ

ಹುದ್ದೆ ನೇಮಕಾತಿಗೆ ವ್ಯಕ್ತಿಯಿಂದ ಹಣ ಸ್ವೀಕರಿಸುತ್ತಿದ್ದ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

ಹುದ್ದೆ ನೇಮಕಾತಿಗೆ ವ್ಯಕ್ತಿಯಿಂದ ಹಣ ಸ್ವೀಕರಿಸುತ್ತಿದ್ದ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

ಭೀಕರ ರಸ್ತೆ ಅಪಘಾತ ; ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವು

ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು

ಮುಂದಿನ ಐಪಿಎಲ್‌ನಲ್ಲಿ ಒಂದು ತಂಡ ಮಾತ್ರ ಹೆಚ್ಚಳ?

ಮುಂದಿನ ಐಪಿಎಲ್‌ನಲ್ಲಿ ಒಂದು ತಂಡ ಮಾತ್ರ ಹೆಚ್ಚಳ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ashok’s golden choice as vice president

ಮೊಗವೀರ ವ್ಯವಸ್ಥಾಪಕ ಮಂಡಳಿ: ಉಪಾಧ್ಯಕರಾಗಿ ಅಶೋಕ್‌ ಸುವರ್ಣ ಆಯ್ಕೆ

Kannadiga Durgappa Kotiyawar Awarded Outstanding Teacher Award -2020

ಕನ್ನಡಿಗ ದುರ್ಗ‍ಪ್ಪ ಕೋಟಿಯವರ್‌ ಅವರಿಗೆ ಶ್ರೇಷ್ಠ ಶಿಕ್ಷಕ ಪ್ರಶಸ್ತಿ-2020 ಪ್ರಶಸ್ತಿ ಪ್ರಧಾನ

26th Annual Sri Ayyappa Mahapooja

26ನೇ ವಾರ್ಷಿಕ ಶ್ರೀ ಅಯ್ಯಪ್ಪ ಮಹಾಪೂಜೆ ಸಂಪನ್ನ

shabharimala

ಶಬರಿಮಲೆ ಕ್ಷೇತ್ರ ಎಲ್ಲಾ ಧರ್ಮೀಯರ ಭಕ್ತಿಯ ತಾಣ: ರಾಮಣ್ಣ ದೇವಾಡಿಗ

Cricket tournament

ಕ್ರಿಕೆಟ್‌ ಪಂದ್ಯಾಟ: ಸಾಧಕ ಕ್ರೀಡಾಳುಗಳಿಗೆ ಗೌರವ

MUST WATCH

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

udayavani youtube

ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

udayavani youtube

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

udayavani youtube

ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು

ಹೊಸ ಸೇರ್ಪಡೆ

ಸಿಎಂಗೆ ಪತ್ರ ಬರೆದಿಟ್ಟು ಆತ್ಮಹತ್ಯೆ

ಸಿಎಂಗೆ ಪತ್ರ ಬರೆದಿಟ್ಟು ಆತ್ಮಹತ್ಯೆ

tdy-2

ಮುಂಬೈ : ಬಾಯ್‌ಫ್ರೆಂಡ್‌ ಜತೆ ಪತ್ನಿ ಪರಾರಿ: ಪತಿ ದೂರು

ಚಿಕ್ಕಬಳ್ಳಾಪುರ : ದ್ವಿತೀಯ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭ- 2358 ಫಲಾನುಭವಿಗಳಿಗೆ

ಚಿಕ್ಕಬಳ್ಳಾಪುರ : ದ್ವಿತೀಯ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭ- 2358 ಫಲಾನುಭವಿಗಳಿಗೆ

ರಸ್ತೆ ನಿರ್ಮಾಣ ವಿಚಾರ : ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ : ಹಲವರಿಗೆ ಗಾಯ

ರಸ್ತೆ ನಿರ್ಮಾಣ ವಿಚಾರ : ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ : ಹಲವರಿಗೆ ಗಾಯ

tdy-1

ರಕ್ಷಣಾ ‌ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ .ಜ.20 ರಂದು ಕಾರವಾರ ನೌಕಾನೆಲೆಗೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.