
ಮುಖಗವಸು ಧರಿಸದವರ ವಿರುದ್ಧ ದಂಡ
Team Udayavani, Sep 11, 2020, 8:22 PM IST

ಸಾಂದರ್ಭಿಕ ಚಿತ್ರ
ಮುಂಬಯಿ ಸೆ. 10: ಕೋವಿಡ್ ಸೋಂಕು ಹರಡುವಿಕೆ ತಡೆಗಟ್ಟುವ ಹಿನ್ನೆಲೆ ಮುಂಬಯಿ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಈಗಾಗಲೇ ಮುಖಗವಸು ಧರಿಸದೆ ಬೀದಿಗಿಳಿಯುವ ವಿರುದ್ಧ ದಂಡನಾತ್ಮಕಕ್ರಮ ಕೈಗೊಂಡಿದೆ. ಆದರೆ ಇದರಲ್ಲಿ ಭ್ರಷ್ಟಾಚಾರ ತಡೆಯಲು ಈ ಹಿಂದಿನ ದಂಡ ಮೊತ್ತ 1,000 ರೂ.ರಿಂದ 200 ರೂ. ಗೆ ಇರಿಸಲು ನಿರ್ಧರಿಸಿ ಅಧಿಕಾರಿಗಳಿಗೆ ಆದೇಶಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರು ಮುಖಗವಸು ಧರಿಸುವುದು ಕಡ್ಡಾಯವಾಗಿದೆ. ಮುಖಗವಸು ಬಳಸದವರಿಗೆ 1,000 ರೂ.ಗಳ ದಂಡ ವಿಧಿಸುವಂತೆ ಆಡಳಿತವು ಘನತ್ಯಾಜ್ಯ ನಿರ್ವಹಣಾ ಇಲಾಖೆಗೆ ಆದೇಶಿಸಿತ್ತು. ಅದರಂತೆ ಎಪ್ರಿಲ್ 9ರಿಂದ ಮುಂಬಯಿಯಲ್ಲಿ ದಂಡನಾತ್ಮಕ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕುರಿತು ನಾಗರಿಕರು ಬಿಎಂಸಿ ಹೆಚ್ಚಿನ ಮೊತ್ತವನ್ನು ದಂಡದ ರೂಪದಲ್ಲಿ ವಸೂಲಿ ಮಾಡುತ್ತಿವೆ ಎಂಬ ಆರೋಪಕಗಳು ವ್ಯಕ್ತವಾಗುತ್ತಿವೆ. ದಂಡದ ಪ್ರಮಾಣ ಹೆಚ್ಚಾಗಿದ್ದರಿಂದ
ಅಲ್ಪ ಮೊತ್ತವನ್ನು ಪಾವತಿಸಿ ನಿಯಮಗಳನ್ನು ಮುರಿಯುವ ಸಾಧ್ಯತೆ ಹೆಚ್ಚುತ್ತದೆ. ಅದಲ್ಲದೆ ಸೋಂಕು ತಡೆಗಟ್ಟುವುದು ಮನಪಾದ ಮೂಲ ಉದ್ದೇಶವಾಗಿದೆ. ಆದ್ದರಿಂದ ದಂಡವನ್ನು 200 ರೂ.ಗೆ ಇರಿಸಲು ನಿರ್ಧರಿಸಿದೆ. ಈ ದಂಡ ವಸೂಲಿಗಾಗಿ ಪುರಸಭೆ ನೌಕರರನ್ನು ಮಾರ್ಷಲ್ಸ್ ಆಗಿ ನೇಮಿಸಲಾಗಿದೆ.
ದಂಡವನ್ನು ಕಡಿಮೆ ಮಾಡಲಾಗಿದೆ ಆದರೂ ಪುರಸಭೆಯು ತನ್ನ ರಶೀದಿ ಗಳನ್ನು ಸಿದ್ಧಪಡಿಸಿಲ್ಲ. ಅವಸರದ ನಿರ್ಧಾರದಿಂದಾಗಿ ರಶೀದಿಗಳನ್ನು ಮುದ್ರಿಸಲು ಸಮಯವಿಲ್ಲ ಆದ್ದರಿಂದ ಹಳೆಯ ರಶೀದಿಗಳ ಮೂಲಕ ದಂಡ ವನ್ನು ವಸೂಲಿ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
