Udayavni Special

ಹರ್ಷಿತಾ ಎಚ್‌. ಶೆಟ್ಟಿಗೆ 2 ಚಿನ್ನದ ಪದಕ


Team Udayavani, Jun 18, 2021, 1:13 PM IST

Gold Medal

ಪುಣೆ: ವೈದ್ಯಕೀಯ ಅಂತಿಮ ವರ್ಷದ ಎಂಬಿಬಿಎಸ್‌ ಪರೀಕ್ಷೆಯಲ್ಲಿ ಪುಣೆಯ ಬಿ.ಜೆ. ಮೆಡಿಕಲ್‌ ಕಾಲೇಜ್‌ನ ವಿದ್ಯಾರ್ಥಿನಿ ಡಾ| ಹರ್ಷಿತಾ ಶೆಟ್ಟಿ ಕಾಲೇಜ್‌ಗೆ ಅತೀ ಹೆಚ್ಚು ಅಂಕಗಳನ್ನು ಪಡೆದು ಡಾ| ಎ.ವಿ. ಉಮರ್ಕರ್‌ ಸ್ಮರಣಾರ್ಥ ಕೊಡಮಾಡುವ ಚಿನ್ನದ ಪದಕವನ್ನು ಪಡೆದಿದ್ದಾರೆ.

ಪುಣೆಯ ತುಳು, ಕನ್ನಡಿಗ, ಹೊಟೇಲ್‌ ಉದ್ಯಮಿ, ಧನಕವಾಡಿ ನಿವಾಸಿ

ಮೂಲತಃ ಶಿರ್ವ ಪಂಜಿಮಾರ್‌ ದೊಡ್ಡಮನೆ ಹರೀಶ್‌ ಎನ್‌. ಶೆಟ್ಟಿ  ಮತ್ತು ಉಡುಪಿ ಕಬ್ಯಾಡಿ ತಟ್ಟೂರು ಮನೆ ವಾರಿಜಾ ಶೆಟ್ಟಿ ದಂಪತಿ ಪುತ್ರಿಯಾದ ಇವರು ಮಹಾರಾಷ್ಟ್ರ ಯುನಿವರ್ಸಿಟಿ ಆಫ್‌ ಹೆಲ್ತ್ ಸೈನ್ಸ್‌ ನಾಸಿಕ್‌ ವಲಯದ ಮಹಿಳಾ ಪರೀಕ್ಷಾರ್ಥಿಗಳಲ್ಲಿ ಮೆಡಿಸಿನ್‌ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆ ದು ದಿ| ಶ್ರೀಮತಿ ವಿಜಯದೇವಿ ಫಡ್ತಾರೆ ಸ್ಮರಣಾರ್ಥ ಕೊಡಮಾಡುವ ಚಿನ್ನದ ಪದಕವನ್ನೂ ಮುಡಿಗೆರಿಸಿಕೊಂಡಿದ್ದಾರೆ.

ಕೊರೊನಾ ನಿಯಮಾನುಸಾರ ಮಹಾರಾಷ್ಟ್ರ ರಾಜ್ಯಮಟ್ಟದಲ್ಲಿ ಆನ್‌ಲೈನ್‌ ಮೂಲಕ ನಡೆದ ಈ ಸಮಾವೇಶದಲ್ಲಿ ರಾಜ್ಯಪಾಲ ಭಗತ್‌ ಸಿಂಗ್‌ ಕೊಶ್ಯಾರಿ ಅವರು ಉಪಸ್ಥಿತರಿದ್ದು, ಮಹಾರಾಷ್ಟ್ರ ಯುನಿವರ್ಸಿಟಿ ಆಫ್‌ ಹೆಲ್ತ್ ಸೈನ್ಸ್‌  ನಾಸಿಕ್‌ ಇದರ ಪರೀûಾ ಪರಿವಿಕ್ಷಕ, ನಿಯಂತ್ರಕ ಡಾ| ಅಜಿತ್‌ ಪಾಠಕ್‌ ಅವರು ಈ ಚಿನ್ನದ ಪದಕವನ್ನು ಡಾ| ಹರ್ಷಿತಾ ಶೆಟ್ಟಿ ಅವರಿಗೆ ಪ್ರದಾನ ಮಾಡಿ ಅಭಿನಂದಿಸಿದರು.

ಅಂತಿಮ ವರ್ಷದ ಎಂಬಿಬಿಎಸ್‌ ಪರೀಕ್ಷೆಯಲ್ಲಿ 2 ಚಿನ್ನದ ಪದಕವನ್ನು ಪಡೆದ ಡಾ| ಹರ್ಷಿತಾ ಶೆಟ್ಟಿ ಅವರು ಈ ಮೊದಲು ಮೂರನೇ ವರ್ಷದ ಎಂಬಿಬಿಎಸ್‌ ಪರೀಕ್ಷೆಯ  OPHTHALMOLOGY ವಿಭಾಗದಲ್ಲಿ ಕೂಡ ಚಿನ್ನದ ಪದಕವನ್ನು ಪಡೆದಿದ್ದರು. ಪ್ರಾಥಮಿಕ, ಫ್ರೌಢ ಮತ್ತು ಪದವಿಯನ್ನು ಶ್ರೇಷ್ಟ ಶ್ರೇಣಿಯಲ್ಲಿ ಮುಗಿಸಿರುವ ಇವರು 2015 -2016ರಲ್ಲಿ ಎಂಎಸ್‌ಸಿಇಟಿ ಪರೀಕ್ಷೆಯಲ್ಲಿ ಇನ್ನೂರಕ್ಕೆ ಇನ್ನೂರು ಅಂಕಗಳನ್ನು ಪಡೆದು ಮಹಾರಾಷ್ಟ್ರಕ್ಕೆ ಮೊದಲಿಗರಾಗಿ ಉತ್ತೀರ್ಣರಾಗಿದ್ದರು. ಇವರನ್ನು ಬಂಟರ ಸಂಘ ಪುಣೆ, ಶ್ರೀ ಅಯ್ಯಪ್ಪ ಸೇವಾ ಸಂಘ ಕಾತ್ರಜ್‌ ಪುಣೆ, ಬಂಟ್ಸ್‌ ಅಸೋಸಿಯೇಶನ್‌ ಪುಣೆ, ಶ್ರೀ ಗುರುದೇವ ಸೇವಾ ಬಳಗ ಪುಣೆ, ತುಳು ಕೂಟ ಪುಣೆ ಹಾಗೂ ವಿವಿದ ಸಂಘ ಸಂಸ್ಥೆಗಳು ಅಧ್ಯಕ್ಷರು, ಪದಾಧಿಕಾರಿಗಳು ಅಭಿನಂದಿಸಿದ್ದಾರೆ.

ಟಾಪ್ ನ್ಯೂಸ್

Ramesh

ನಳಿನ್‌ ಕುಮಾರ್‌ ಕಟೀಲ್‌ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ

Pegasus

ಪೆಗಾಸಸ್‌ ಬೇಹು ನಿಜವಾದಲ್ಲಿ, ಅದು ಗಂಭೀರ ವಿಚಾರ: ಸುಪ್ರೀಂ

drone-rules

ಹೊಸ ಡ್ರೋನ್‌ ನಿಯಮಗಳು ಜಾರಿ

Swiggy

ವಿದ್ಯುಚ್‌ ಚಾಲಿತ ವಾಹನ: ಆರ್‌ಬಿಎಂಎಲ್‌- ಸ್ವಿಗ್ಗಿ ಒಪ್ಪಂದ

Dhriti-Banerjee

ಜೆಡ್‌ಎಸ್‌ಐಗೆ ಮೊದಲ ಮಹಿಳಾ ನಿರ್ದೇಶಕಿ

Prajwal-Revann

ಮೇಕೆದಾಟು ಯೋಜನೆ ರಾಜ್ಯದ ಹಕ್ಕು

american-president-Biden

ಕಾನೂನಾತ್ಮಕ ವಲಸಿಗರಿಗೆ ಸಿಗಲಿದೆಯೇ ಅಮೆರಿಕದ ಪೌರತ್ವ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yakshagana

ಜನಪ್ರಿಯ ಯಕ್ಷಗಾನ ಮಂಡಳಿ ಮುಂಬಯಿ: ನವೀಕೃತ ಕಚೇರಿಯ ಉದ್ಘಾಟನೆ

Online-Class

“ಆನ್‌ಲೈನ್‌ನಲ್ಲಿ ಭಾಷೆಯ ಬೋಧನೆ ಸವಾಲಿನ ಕೆಲಸ’

vadetti

ಪ್ರಕೃತಿ ವಿಕೋಪ ಎದುರಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಕೆ: ವಾಡೆಟ್ಟಿವಾರ್‌

“ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರ ಸ್ಥಾನ’

“ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಮಹತ್ತರ ಸ್ಥಾನ’

Doctor

ವೈದ್ಯರ ವೃತ್ತಿಯಲ್ಲಿ ನೈತಿಕತೆ ಇರಲಿ: ಕೋಶ್ಯಾರಿ

MUST WATCH

udayavani youtube

ಕೋವಿಡ್‌ ನಿಯಮ ಉಲ್ಲಂಘಿಸಿದ ತಹಶೀಲ್ದಾರ್

udayavani youtube

ಉತ್ತರ ಭಾರತದ ಮಖಾನ ಉತ್ಪನ್ನಗಳು ಕರ್ನಾಟಕದ ಈ ಊರಲ್ಲಿ ತಯಾರಾಗುತ್ತಿದೆ !

udayavani youtube

ಸಂತ್ರಸ್ತೆಯ ಪೋಷಕರೊಂದಿಗಿನ ಫೋಟೋ ಹಂಚಿಕೊಂಡ ರಾಹುಲ್ ಮೇಲೆ FIR

udayavani youtube

ಖುದ್ದು ಪ್ರಧಾನಿ ಮೋದಿ ದೂರವಾಣಿ ಕರೆ ಮಾಡಿದ್ರು

udayavani youtube

ಹೆದ್ದಾರಿ ಬದಿಯಲ್ಲಿ 1000ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಬೆಳೆಸುವ ಯೋಜನೆಗೆ

ಹೊಸ ಸೇರ್ಪಡೆ

ಪಚ್ಚನಾಡಿ ಪಾರಂಪರಿಕ ತ್ಯಾಜ್ಯ ಕರಗಿಸಲು “ಬಯೋ ಮೈನಿಂಗ್‌’ ವ್ಯವಸ್ಥೆ

ಪಚ್ಚನಾಡಿ ಪಾರಂಪರಿಕ ತ್ಯಾಜ್ಯ ಕರಗಿಸಲು “ಬಯೋ ಮೈನಿಂಗ್‌’ ವ್ಯವಸ್ಥೆ

ಕೊಡ್ಮಾಣ್‌ : ರಸ್ತೆ ಸಮಸ್ಯೆಗಳೇ ಗ್ರಾಮದ ಸವಾಲು

ಕೊಡ್ಮಾಣ್‌ : ರಸ್ತೆ ಸಮಸ್ಯೆಗಳೇ ಗ್ರಾಮದ ಸವಾಲು

ವಸತಿ ಯೋಜನೆಗೆ ಹಿಡಿದ ಗ್ರಹಣ 

ವಸತಿ ಯೋಜನೆಗೆ ಹಿಡಿದ ಗ್ರಹಣ 

ಸಾಂಪ್ರದಾಯಿಕ ಮೀನುಗಾರಿಕೆಗೆ ಧಕ್ಕೆ: ಅಗತ್ಯ ಕ್ರಮಕ್ಕೆ ಆಗ್ರಹ

ಸಾಂಪ್ರದಾಯಿಕ ಮೀನುಗಾರಿಕೆಗೆ ಧಕ್ಕೆ: ಅಗತ್ಯ ಕ್ರಮಕ್ಕೆ ಆಗ್ರಹ

ಗದ್ದೆಯಂತಾದ ಕನ್ನಡಕುದ್ರು ಸಂಪರ್ಕಿಸುವ ಮುಖ್ಯ ರಸ್ತೆ

ಗದ್ದೆಯಂತಾದ ಕನ್ನಡಕುದ್ರು ಸಂಪರ್ಕಿಸುವ ಮುಖ್ಯ ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.