ಹೊನ್ನಾವರ ಸಿರಿಧಾನ್ಯ ಗ್ರಾಮ; ಆರೋಗ್ಯ ವೃದ್ಧಿಗೆ ಯೋಜನೆ

ಬೊಜ್ಜು ನಿವಾರಣೆಗೆ, ಹಾರ್ಮೊನ್‌ ಸಮಸ್ಯೆಗೆ, ಪ್ರತ್ಯೇಕ ಉತ್ಪನ್ನಗಳಿವೆ.

Team Udayavani, May 16, 2023, 4:39 PM IST

ಹೊನ್ನಾವರ ಸಿರಿಧಾನ್ಯ ಗ್ರಾಮ; ಆರೋಗ್ಯ ವೃದ್ಧಿಗೆ ಯೋಜನೆ

ಹೊನ್ನಾವರ: ದೇಶದಲ್ಲಿ, ರಾಜ್ಯದಲ್ಲಿ ಪ್ರಪ್ರಥಮವಾಗಿ ಹೊನ್ನಾವರ ತಾಲೂಕನ್ನು ಸಿರಿಧಾನ್ಯ ಗ್ರಾಮವನ್ನಾಗಿ ಮಾಡುವ
ಕೆಲಸವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಿರಿಧಾನ್ಯ ಘಟಕ ಆರಂಭಿಸಿದ್ದು ತಾಲೂಕಿನ ಬಹುಪಾಲು ಜನ ತಮ್ಮ ಆಹಾರದಲ್ಲಿ ಸಿರಿಧಾನ್ಯವನ್ನು ಪ್ರಮುಖವಾಗಿ ಬಳಸಿ ಆರೋಗ್ಯ ಕಾಪಾಡಿಕೊಳ್ಳಲು ಜನರನ್ನು ಸಿದ್ಧಗೊಳಿಸುವ ಯೋಜನೆ ಇದಾಗಿದ್ದು ವೀರೇಂದ್ರ ಹೆಗ್ಗಡೆಯವರು ಮತ್ತು ಶ್ರೀ ಹೇಮಾವತಿ ಅಮ್ಮನವರು ಹೊನ್ನಾವರವನ್ನು ಆಯ್ಕೆಮಾಡಲು
ಪ್ರೇರಣೆಯಾಗಿದ್ದಾರೆ.

ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಸಿರಿಧಾನ್ಯವನ್ನು ಅಧಿಕೃತವಾಗಿ ಘೋಷಿಸಿದ್ದು ಈ ವರ್ಷವನ್ನು ಸಿರಿಧಾನ್ಯ ವರ್ಷವನ್ನಾಗಿ ಆಚರಿಸಲು ತೀರ್ಮಾನಿಸಿದೆ. ಬಯಲುಸೀಮೆಯ ಬರಗಾಲದ ಬೆಳೆಯಾಗಿದ್ದ ಸಿರಿಧಾನ್ಯದ ವೈಶಿಷ್ಟ್ಯ ವನ್ನು ಗುರುತಿಸಿದ ಡಾ| ಖಾದರ್‌ ಅದನ್ನು ಜನಪ್ರಿಯಗೊಳಿಸಿದರು.

ವೀರೇಂದ್ರ ಹೆಗ್ಗಡೆಯವರು ಸಿರಿಧಾನ್ಯ ಬೆಳೆಯುವ ಬಯಲುಸೀಮೆಯ ರೈತರಿಗೆ ಎಲ್ಲ ರೀತಿಯ ನೆರವನ್ನು ನೀಡಿದ್ದಲ್ಲದೆ ಹುಬ್ಬಳ್ಳಿಯಲ್ಲಿ ಸಿರಿಧಾನ್ಯ ಸಂಸ್ಕರಣಾ ಘಟಕವನ್ನು, ಸಂಶೋಧನಾ ಕೇಂದ್ರವನ್ನು, ಸಿರಿಧಾನ್ಯದ ಸಿದ್ಧ ಆಹಾರದ ಘಟಕವನ್ನು ಬಹುಕೋಟಿ ವೆಚ್ಚದಲ್ಲಿ ಸ್ಥಾಪಿಸಿದ್ದು ಧರ್ಮಸ್ಥಳ ಬ್ರಾಂಡಿನ ಸಿರಿಧಾನ್ಯಗಳು ರಾಜ್ಯಾದ್ಯಂತ ಸಿಗುತ್ತಿವೆ. ಧರ್ಮಸ್ಥಳ ಯೋಜನೆ 7 ವಲಯಗಳನ್ನಾಗಿ ತಾಲೂಕನ್ನು ವಿಂಗಡಿಸಿ ತನ್ನ ಇತರ ಚಟುವಟಿಕೆ ನಡೆಸಿದ್ದು ಪ್ರಾಯೋಗಿಕವಾಗಿ ಹೊನ್ನಾವರ ನಗರ, ಕರ್ಕಿ, ಹೊಸಾಕುಳಿಯನ್ನೊಳಗೊಂಡ ವಲಯದಲ್ಲಿ ಈಗಾಗಲೇ ಮನೆಮನೆಗೆ ಸಿರಿಧಾನ್ಯ ಪ್ರಚಾರ, ಮಾರಾಟ ನಡೆಸಿದ್ದು ಹತ್ತು ಜನ ಗೈಡ್‌ಗಳನ್ನು ನೇಮಿಸಲಾಗಿದೆ.

ಸಿರಿಧಾನ್ಯದ 36 ವಿವಿಧ ಸಿದ್ಧ ಆಹಾರದ ಉತ್ಪನ್ನಗಳನ್ನು ಮನೆಮನೆಗೆ ಪರಿಚಯಿಸಲಾಗುತ್ತಿದೆ. ಆರೋಗ್ಯ ವರ್ಧನೆ,
ಆರೋಗ್ಯ ರಕ್ಷಣೆ, ರುಚಿಕರ ತಿನಿಸುಗಳಿಗಾಗಿ, ಸಾವಯವ ಪ್ರಮಾಣೀಕೃತ ಸಿರಿಧಾನ್ಯ ಬಳಸಿ ಸಿದ್ಧಪಡಿಸಲಾಗಿದ್ದು ಮಧುಮೇಹಿಗಳಿಗೆ, ಬೊಜ್ಜು ನಿವಾರಣೆಗೆ, ಹಾರ್ಮೊನ್‌ ಸಮಸ್ಯೆಗೆ, ಪ್ರತ್ಯೇಕ ಉತ್ಪನ್ನಗಳಿವೆ.

ಇದಕ್ಕಾಗಿಯೇ ನಾಗರಾಜ ನಾಯ್ಕ ಕವಲಕ್ಕಿ ಇವರ ಗುರುಶಕ್ತಿ ಎಂಟರ್‌ಪ್ರೈಸಸ್‌ನ್ನು ಸಿರಿಧಾನ್ಯ ಉತ್ಪನ್ನಗಳ ಪ್ರತಿನಿಧಿ ಯಾಗಿ ನೇಮಿಸಲಾಗಿದ್ದು ಅವರಲ್ಲಿ ಎಲ್ಲ ಉತ್ಪನ್ನಗಳು ಲಭ್ಯವಿದೆ. ಹೊನ್ನಾವರ ತಾಲೂಕಿನ ಜನ ನಮ್ಮ ಯೋಜನೆಯ ಸಿರಿಧಾನ್ಯ ಗೈಡ್‌ಗಳು ತಮ್ಮಲ್ಲಿಗೆ ಬಂದಾಗ ಅವರಿಂದ ಮಾಹಿತಿ ಪಡೆದು ಸಿರಿಧಾನ್ಯ ಬಳಸಿನೋಡಿ ಪ್ರಯೋಜನ ಪಡೆಯಬೇಕು ಎಂದು ಹೊನ್ನಾವರ ಯೋಜನಾಧಿಕಾರಿ ವಾಸಂತಿ ಅಮೀನ್‌ ಕೋರಿದ್ದಾರೆ. ಈಗಾಗಲೇ ತಾಲೂಕಿನಲ್ಲಿ ಸುಮಾರು ಸಾವಿರ ಜನ ಸಿರಿಧಾನ್ಯಗಳನ್ನು ಬಳಸುತ್ತಿದ್ದು ಹೆಗ್ಗಡೆಯವರು ಪ್ರಥಮವಾಗಿ ಹೊನ್ನಾವರವನ್ನು ಆಯ್ಕೆ ಮಾಡಿದ್ದಕ್ಕಾಗಿ ಅಭಿನಂದಿಸಿದ್ದಾರೆ.

*ಜೀಯು

ಟಾಪ್ ನ್ಯೂಸ್

MOSSAD 4

ಪುಟ್ಟ ದೇಶದ ಈ ಇಂಟೆಲಿಜೆನ್ಸ್‌ ಏಜೆನ್ಸಿ ಭಾರತದ ʻರಾʼ ಗಿಂತಲೂ ಪವರ್‌ಫುಲ್‌..!

ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ: ಸಿಎಂ ಸಿದ್ದರಾಮಯ್ಯ

ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ: ಸಿಎಂ ಸಿದ್ದರಾಮಯ್ಯ

tdy-18

AsianGames: ಒಂದು ಮೊಬೈಲ್‌ಗಾಗಿ ಸಾವಿರಾರು ಕಸದಬ್ಯಾಗ್‌ ಹುಡುಕಾಡಿದ ಸಿಬ್ಬಂದಿ: ಆಗಿದ್ದೇನು?

Haryana ಬೈಕ್‌ನಲ್ಲೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

Haryana ಬೈಕ್‌ನಲ್ಲೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

Kalaburagi; ಡಿವೈಡರ್ ಗೆ ಬೈಕ್ ಡಿಕ್ಕಿ; ಇಬ್ಬರು ವಿದ್ಯಾರ್ಥಿಗಳ ಸಾವು

Kalaburagi; ಡಿವೈಡರ್ ಗೆ ಬೈಕ್ ಡಿಕ್ಕಿ; ಇಬ್ಬರು ವಿದ್ಯಾರ್ಥಿಗಳ ಸಾವು

delta

Goa: ಕ್ಯಾಸಿನೊ ಆಪರೇಟರ್ ಡೆಲ್ಟಾ ಕಾರ್ಪ್‍ಗೆ GST ಬಾಕಿ ಕುರಿತು ನೋಟಿಸ್

Politics: 32 ಎಎಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಪ್ರತಾಪ್ ಸಿಂಗ್ ಬಾಜ್ವಾ

Politics: 32 ಆಪ್ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಕೇಜ್ರಿವಾಲ್ ಗೆ ಬಾಜ್ವಾ ಸಂದೇಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdsad

Kannada in UK ; ಲಂಡನ್ ನಲ್ಲಿ ಮೊಳಗಲಿರುವ ಕನ್ನಡ ಬಳಗದ ಡಿಂಡಿಮ

1—adsad

Goa; ಮಾಪ್ಸಾದಲ್ಲಿ ಕನ್ನಡ ಸಂಘದ ಕನ್ನಡ ಗಣಪನ ಪ್ರತಿಷ್ಠಾಪನೆ

ಆನ್‌ಲೈನ್‌ ಗಣೇಶನ ಆರಾಧನೆ….!

ಆನ್‌ಲೈನ್‌ ಗಣೇಶನ ಆರಾಧನೆ….!

Desi Swara: ಕರಿಮಾಯಿ ಎಂಬ ಅದ್ಭುತ ರಸಾನುಭವ! ಭಾವಕೋಶದಲ್ಲಿ ಅಳಿಯದ ನೆನಪನ್ನಿತ್ತ ಕ್ಷಣ

Desi Swara: ಕರಿಮಾಯಿ ಎಂಬ ಅದ್ಭುತ ರಸಾನುಭವ! ಭಾವಕೋಶದಲ್ಲಿ ಅಳಿಯದ ನೆನಪನ್ನಿತ್ತ ಕ್ಷಣ

Head phone; ಬಿಡುವಿಲ್ಲದ ಕಿವಿಗಳಿಗೆ ಗುಟ್ಟೊಂದ ಹೇಳಬೇಕು…!

Head phone; ಬಿಡುವಿಲ್ಲದ ಕಿವಿಗಳಿಗೆ ಗುಟ್ಟೊಂದ ಹೇಳಬೇಕು…!

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

MOSSAD 4

ಪುಟ್ಟ ದೇಶದ ಈ ಇಂಟೆಲಿಜೆನ್ಸ್‌ ಏಜೆನ್ಸಿ ಭಾರತದ ʻರಾʼ ಗಿಂತಲೂ ಪವರ್‌ಫುಲ್‌..!

ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ: ಸಿಎಂ ಸಿದ್ದರಾಮಯ್ಯ

ಪ್ರತಿಯೊಬ್ಬರ ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ: ಸಿಎಂ ಸಿದ್ದರಾಮಯ್ಯ

puttakkana makkalu team outing

ಪುಟ್ಟಕ್ಕನ ಮಕ್ಕಳ ಔಟಿಂಗ್

tdy-18

AsianGames: ಒಂದು ಮೊಬೈಲ್‌ಗಾಗಿ ಸಾವಿರಾರು ಕಸದಬ್ಯಾಗ್‌ ಹುಡುಕಾಡಿದ ಸಿಬ್ಬಂದಿ: ಆಗಿದ್ದೇನು?

Haryana ಬೈಕ್‌ನಲ್ಲೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

Haryana ಬೈಕ್‌ನಲ್ಲೇ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸಿದ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.