ಮೇ 8ರಿಂದ ಡೊಂಬಿವಲಿಯಲ್ಲಿ ಜಗದ್ಗುರು ಆದಿಶಂಕರಾಚಾರ್ಯ ಜಯಂತ್ಯುತ್ಸವ

Team Udayavani, May 8, 2019, 2:22 PM IST

ಮುಂಬಯಿ: ಅದ್ವೈತ ಸಿದ್ಧಾಂತದ ಮಹಾನ್‌ ಸಾಧಕ ಜಗದ್ಗುರು ಶ್ರೀ ಆದಿಶಂಕರಾಚಾರ್ಯ ಜಯಂತ್ಯುತ್ಸವವು ಮೇ 8ರಿಂದ ಮೇ 10ರವರೆಗೆ ಡೊಂಬಿವಲಿ ಪೂರ್ವದ ಮಾನಾ³ಡಾ ರಸ್ತೆಯಲ್ಲಿಯ ಅಗರ್‌ವಾಲ್‌ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಮೇ 8ರಿಂದ ಸಂಜೆ 6.30ರಿಂದ ಶ್ರೀಗಳ ಉತ್ಸವ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಅನಂತರ ಪ್ರತಿಷ್ಠಾಪನೆ ಜರಗಲಿದೆ. ಮೇ 9ರಂದು ಶ್ರೀ ಕೂಡ್ಲಿ ಶೃಂಗೇರಿಯ ಜಗದ್ಗುರು ಶಂಕರಾಚಾರ್ಯ ಶ್ರೀ ವಿದ್ಯಾಭಿನವ ಶಂಕರ ಭಾರತಿ ಸ್ವಾಮಿಗಳ ಉಪಸ್ಥಿತಿಯಲ್ಲಿ ರುದ್ರಾಭಿಷೇಕ, ಸಾಮೂಹಿಕ ಉಪನಯನ, ಆಶೀರ್ವಚನ, ಮಹಾಪ್ರಸಾದ ವಿತರಣೆಯನ್ನು ಆಯೋಜಿಸಲಾಗಿದೆ. ಸಂಜೆ ಶ್ರೀಮದ್‌ ಭಗವದ್ಗೀತಾ ಪಠಣ, ಶ್ರೀ ಶಂಕರ ಪುರೋಹಿತ ಇವರಿಂದ ಸಂಗೀತ ಕಾರ್ಯಕ್ರಮ ನೆರವೇರಲಿದೆ.

ಮೇ 10ರಂದು ಬೆಳಗ್ಗೆಯಿಂದ ಕಾಕಡಾರತಿ, ರುದ್ರಾಸ್ವಾಹಕಾರ ಯಜ್ಞ ಹಾಗೂ ಸ್ವಾಮೀಜಿಗಳಿಂದ ಪೂರ್ಣಾಹುತಿ ಹಾಗೂ ಆಶೀರ್ವಚನ ನಡೆಯಲಿದ್ದು, ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಆದಿ ಶಂಕರಾಚಾರ್ಯ ಸೇವಾ ಸಮಿತಿ ಡೊಂಬಿವಲಿಯ ಪ್ರಮುಖರಾದ ಅಜಿತ್‌ ಉಮಾರಾಣಿ, ಶ್ರೀಕಾಂತ್‌ ಹಾಗೂ ಮಹಿಳಾ ವಿಭಾಗದ ಎ. ಎ. ಉಮಾರಾಣಿ, ವಿ. ವಿ. ಕುಲಕರ್ಣಿ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ