ಮಲಾಡ್‌ ಶ್ರೀ ಶನಿಮಹಾತ್ಮ ಪೂಜಾ ಸಮಿತಿ:62ನೇ ವಾರ್ಷಿಕ ಮಹಾಪೂಜೆ

Team Udayavani, Mar 26, 2017, 3:52 PM IST

25-Mum09b.jpg

 ಮುಂಬಯಿ: ಮಲಾಡ್‌ ಪೂರ್ವದ ಇರಾನಿ ಕಾಲನಿಯ ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ 62ನೇ ವಾರ್ಷಿಕ ಮಹಾಪೂಜೆಯು ಮಾ. 25ರಂದು ಬೆಳಗ್ಗೆ 8ರಿಂದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ  ನಡೆಯಿತು.

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 8ರಿಂದ ಗಣಹೋಮ, ಅಶ್ವತ್ಥ ಪೂಜೆ, ಮಹಾಪ್ರಸಾದ ಪೂಜೆ,ಪಲ್ಲಪೂಜೆ, ಮಹಾಆರತಿ, ಮಧ್ಯಾಹ್ನ 12.30ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ  ಆಯೋಜಿಸಲಾಗಿತ್ತು. ತುಳು-ಕನ್ನಡಿಗರು ಸೇರಿದಂತೆ ವಿವಿಧೆಡೆ ಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪ್ರಸಾದ ಸ್ವೀಕರಿಸಿದರು.

ಅಪರಾಹ್ನ 2.30 ರಿಂದ ಶನಿದೇವರ ಕಲಶ ಪ್ರತಿಷ್ಠಾಪನೆ, ಬಲಿಮೂರ್ತಿಯ ಮೆರವಣಿಗೆ, ಶನಿಗ್ರಂಥ ಪಾರಾಯಣ, ಸಮಿತಿಯ ಸದಸ್ಯರುಗಳಿಂದ ಭಜನ ಕಾರ್ಯಕ್ರಮ, ಸಂಜೆ 6 ರಿಂದ ಮಹಾಮಂಗಳಾರತಿ, ಸಂಜೆ 6.30 ರಿಂದ ತೀರ್ಥ ಪ್ರಸಾದ ವಿತರಣೆ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವಾಗಿ  ರಾತ್ರಿ 7 ರಿಂದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ಮುಂಬಯಿ ಕಲಾವಿದರುಗಳಿಂದ ಬ್ರಹ್ಮ ಬಲಾಂಡಿ ಯಕ್ಷಗಾನ ಪ್ರದರ್ಶನಗೊಂಡಿತು.

ಶ್ರೀ ಶನಿಮಹಾತ್ಮ ಪೂಜಾ ಸಮಿತಿಯ ಪರವಾಗಿ ಅಧ್ಯಕ್ಷ ದಿವಾಕರ ಬಿ. ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ಎಚ್‌. ಎಸ್‌. ಕರ್ಕೇರ, ಎಂ. ಎನ್‌. ಸುವರ್ಣ, ಜತೆ ಕೋಶಾಧಿಕಾರಿಗಳಾದ ಮೋಹನ್‌ ಜಿ. ಬಂಗೇರ, ಕರುಣಾಕರ ಎನ್‌. ಸಾಲ್ಯಾನ್‌, ಕಾರ್ಯಕಾರಿ ಸಮಿತಿಯ ಸದಸ್ಯರಾದ ಎಸ್‌. ಪಿ. ದೇವಾಡಿಗ, ಸತೀಶ್‌ ಎ. ಸಾಲ್ಯಾನ್‌, ಅತುಲ್‌ ಓಜಾ, ಎಸ್‌. ಯು. ಬಂಗೇರ, ಎಂ. ಎನ್‌. ಕೋಟ್ಯಾನ್‌, ಎಸ್‌. ಎನ್‌. ಹೆಜಮಾಡಿ, ಕೆ. ಎನ್‌. ಪಿ. ಸಾಲ್ಯಾನ್‌, ಪಿ. ಆರ್‌. ಅಮೀನ್‌, ಜಯ ಎಂ. ಬಂಗೇರ, ಪೂಜಾ ಅರ್ಚಕ ಸುಧಾಕರ ಎಂ. ಶೆಟ್ಟಿ, ಭುವಾಜಿ ಎಸ್‌. ಯು. ಬಂಗೇರ ಹಾಗೂ ಸದಸ್ಯ ಬಾಂಧವರ ನೇತೃತ್ವದಲ್ಲಿ ಕಾರ್ಯಕ್ರಮಗಳು ಜರಗಿದವು.

ಸ್ಥಳೀಯ ನಗರ ಸೇವಕರು, ಹೊಟೇಲ್‌ ಉದ್ಯಮಿ, ಬಿಲ್ಲವರ ಅಸೋಸಿಯೇಶನ್‌ ಗೋರೆಗಾಂವ್‌ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷ ಜಗನ್ನಾಥ ಕೋಟ್ಯಾನ್‌ ದಂಪತಿ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸ್ಥಳೀಯ ದಾನಿಗಳು, ಸಮಾಜ ಸೇವಕರು, ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಪ್ರಸಾದ ಸ್ವೀಕರಿಸಿದರು.    ಕಾರ್ಯಕ್ರಮಕ್ಕೆ ಆಗಮಿಸಿದ  ಅತಿಥಿಗಳನ್ನು ಸಮಿತಿಯ ಪದಾಧಿಕಾರಿಗಳು ದೇವರ ಪ್ರಸಾದ ನೀಡಿ ಗೌರವಿಸಿದರು. 

ಟಾಪ್ ನ್ಯೂಸ್

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Chintamani; ಮಗನಿಗೆ ಈಜು ಕಲಿಸಲು ಕೃಷಿ ಹೊಂಡಕ್ಕೆ ಇಳಿದ ತಂದೆ ಸಾವು

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

Vitla: ಬಿಸಿಲಿನ ಎಫೆಕ್ಟ್: ಚಲಿಸುತ್ತಿದ್ದ ಬಸ್ಸಿನ ಗಾಜು ಒಡೆದು ಮೂವರಿಗೆ ಗಾಯ

1-qweqwqew

Congress ಪಕ್ಷವನ್ನು ಎರಡನೇ ಬಾರಿ ತೊರೆದ ಲವ್ಲಿ; ಮತ್ತೆ ಬಿಜೆಪಿ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara:ಸಿಟಿ ಆಫ್ ವಿಂಡ್ಸ್‌ ಕ್ಯಾಸ್ಪಿಯನ್‌: ಸಮುದ್ರ ಕಿನಾರೆಯ ಪ್ರವಾಸಿ ತಾಣ ಬಾಕು ನಗರ

Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

Desi Swara: ಅಮೆರಿಕ-ಸೌರಮಾನ ಯುಗಾದಿ ಆಚರಣೆ

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಅಮ್ಮ ನಿನ್ನ ತೋಳಿನಲ್ಲಿ…..ಕಂದಾ ನಾನು

Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ

Desi Swara: ಹೆಮ್ಮೆಯ ದುಬೈ ಕನ್ನಡ ಸಂಘ- ಶಾರ್ಜಾ ಮಳೆ ಸಂತ್ರಸ್ಥರಿಗೆ ಸಹಾಯ ಹಸ್ತ

Desi Swara: ವಸಂತನಾಗಮನ- ಇಂಗ್ಲೆಂಡಿನಲ್ಲಿ ಹರುಷದಿ ಸಂಭ್ರಮಿಸಿದ ಕನ್ನಡ ಜನ

Desi Swara: ವಸಂತನಾಗಮನ- ಇಂಗ್ಲೆಂಡಿನಲ್ಲಿ ಹರುಷದಿ ಸಂಭ್ರಮಿಸಿದ ಕನ್ನಡ ಜನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್

1-weqwqewq

Mumbai; ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಆಫ್ಘಾನ್ ಕಾನ್ಸುಲ್ ಜನರಲ್ ರಾಜೀನಾಮೆ

gold 2

Mumbai Airport ; 12.74 ಕೆಜಿ ಚಿನ್ನಾಭರಣ ಜಪ್ತಿ, ಐವರು ಪ್ರಯಾಣಿಕರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.