ಮೀರಾ-ಡಹಾಣೂ ಬಂಟ್ಸ್‌ : ನಾಯ್ಗಾಂವ್‌-ವಿರಾರ್‌ ಪದಾಧಿಕಾರಿಗಳ ಪದಗ್ರಹಣ

Team Udayavani, Apr 18, 2018, 3:10 PM IST

1504mum05.jpg

ಮುಂಬಯಿ: ಮೀರಾರೋಡ್‌ನಿಂದ ಡಹಾಣೂ ಪರಿಸರದ ಬಂಟ ಬಾಂಧವರ ಪ್ರತಿಷ್ಠಿತ ಸಂಸ್ಥೆ ಮೀರಾ- ಡಹಾಣೂ ಬಂಟ್ಸ್‌ ಇದರ ನಾಯ್ಗಾಂವ್‌- ವಿರಾರ್‌ ಪ್ರಾದೇಶಿಕ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ ಆಯ್ಕೆಗೊಂಡಿರುವ ವಸಾಯಿ ಉದ್ಯಮಿ, ಸಮಾಜ ಸೇವಕ, ಕಲಾಭಿಮಾನಿ ಅಶೋಕ್‌ ಕೆ. ಶೆಟ್ಟಿ ವಸಾಯಿ ಮತ್ತು ಅವರ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಕಾರ್ಯಕ್ರಮವು ಎ. 13ರಂದು ಅಪರಾಹ್ನ 4.30 ರಿಂದ ವಸಾಯಿ ಪಶ್ಚಿಮದ ಸಾಯಿ ನಗರ್‌, ಪಾರ್ವತಿ ಸಿನೇಮಾ ಮಂದಿರದ ಹಿಂದುಗಡೆಯಿರುವ ಸಾಯಿ ನಗರ ರಂಗಮಂಚ್‌ ಇಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

ಮೀರಾ-ಡಹಾಣೂ ಬಂಟ್ಸ್‌ನ ಸ್ಥಾಪಕಾಧ್ಯಕ್ಷ,  ಟ್ರಸ್ಟಿ ಪ್ರಕಾಶ್‌ ಎಂ. ಹೆಗ್ಡೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾ ರಂಭದಲ್ಲಿ ಮುಖ್ಯ ಅತಿಥಿಯಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಗೌರವ ಅತಿಥಿಗಳಾಗಿ ಭವಾನಿ ಶಿಪ್ಪಿಂಗ್‌ ಸರ್ವಿಸಸ್‌ ಪ್ರೈವೇಟ್‌ ಲಿಮಿಟೆಡ್‌ನ‌ ಸಿಎಂಡಿ ಕೆ. ಡಿ. ಶೆಟ್ಟಿ, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ನ್ಯಾಯವಾದಿ ಸುಭಾಶ್‌ ಬಿ. ಶೆಟ್ಟಿ, ಡಾ| ಸಂತೋಷ್‌ ಶೆಟ್ಟಿ, ಸಭಾಪತಿ ಧನಂಜಯ್‌ ಗುಪ್ತ, ನಗರ ಸೇವಕ ಪ್ರವೀಣ್‌ ಶೆಟ್ಟಿ ಇವರು ಉಪಸ್ಥಿತರಿದ್ದರು.

ಸಮ್ಮಾನ ಕಾರ್ಯಕ್ರಮ 
ಸಮಾರಂಭದಲ್ಲಿ ವಿಶ್ವ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಛತ್ರಪತಿ ಶಿವಾಜಿ ಮಹಾರಾಜ್‌ ಪ್ರಶಸ್ತಿ ಪುರಸ್ಕೃತರಾದ ವಿರಾರ್‌ ಶಂಕರ್‌ ಶೆಟ್ಟಿ, ಗೌರವ ಡಾಕ್ಟರೇಟ್‌ ಪುರಸ್ಕೃತ ಲಯನ್‌ ಡಾ| ಶಂಕರ್‌ ಕೆ. ಟಿ., ಸಮಾಜರತ್ನ ಪ್ರಶಸ್ತಿ ಪುರಸ್ಕೃತ ಕರ್ನೂರು ಶಂಕರ ಆಳ್ವ ಇವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ಅಪರಾಹ್ನ 4 ರಿಂದ ಸ್ವಾಗತ ನೃತ್ಯ, ಸಂಘದ ಯುವ ಪ್ರತಿಭೆಗಳಿಂದ ಸಾಂಸ್ಕೃತಿಕ ನೃತ್ಯ, ಸಂಜೆ 5.30 ರಿಂದ ಪದಗ್ರಹಣ, ಸಮ್ಮಾನ ಕಾರ್ಯಕ್ರಮ ಜರಗಿತು. ಸಂಜೆ 7.30 ರಿಂದ ಮನೋಹರ್‌ ಶೆಟ್ಟಿ ನಂದಳಿಕೆ ನಿರ್ದೇಶನದಲ್ಲಿ, ರಂಗಮಿಲನ ನಿರೆಕರೆ ಕಲಾವಿದರು ಮುಂಬಯಿ ಇವರಿಂದ ಆಯಿನಾ ಆಂಡ್‌ ಬುಡ್‌ª ಬುಡ್ಲೆ ತುಳು ನಾಟಕ ಪ್ರದರ್ಶನಗೊಂಡಿತು. ರಾತ್ರಿ 10 ರಿಂದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಮೀರಾ-ಡಹಾಣೂ ಬಂಟ್ಸ್‌ನ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ, ಅಧ್ಯಕ್ಷ ನಗರ ಸೇವಕ ಅರವಿಂದ್‌ ಶೆಟ್ಟಿ, ಉಪಾಧ್ಯಕ್ಷ ಸಂಪತ್‌ ಶೆಟ್ಟಿ, ಗೌರವ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಗೌರವ ಕೋಶಾಧಿಕಾರಿ ರವಿ ಶೆಟ್ಟಿ ಬೊಯಿಸರ್‌, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರದೀಪ್‌ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶುಭಾ ಎಸ್‌. ಶೆಟ್ಟಿ, ಟ್ರಸ್ಟಿ ಸುರೇಶ್‌ ಶೆಟ್ಟಿ ಗಂಧರ್ವ, ಸಂಚಾಲಕ ನಾಗರಾಜ್‌ ಎನ್‌. ಶೆಟ್ಟಿ, ಇನ್ನಿತರ ಪದಾಧಿಕಾರಿಗಳು, ಸದಸ್ಯರು, ನಾಯಾYಂವ್‌-ವಿರಾರ್‌ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್‌ ಕೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷರುಗಳಾದ ದಯಾನಂದ ಶೆಟ್ಟಿ, ಶ್ರೀನಿವಾಸ ಆಳ್ವ, ಕಾರ್ಯದರ್ಶಿ ಪ್ರದೀಪ್‌ ಶೆಟ್ಟಿ, ಜತೆ ಕಾರ್ಯದರ್ಶಿ ನವೀನ್‌ ಎಂ. ಶೆಟ್ಟಿ, ಕೋಶಾಧಿಕಾರಿ ಕೃಷ್ಣಯ್ಯ ಶೆಟ್ಟಿ, ಜತೆ ಕೋಶಾಧಿಕಾರಿ ಪ್ರೇಮಾನಂದ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಸುಕೇಶ್‌ ರೈ, ಉಪ ಕಾರ್ಯಾಧ್ಯಕ್ಷ ತಾರನಾಥ್‌ ಶೆಟ್ಟಿ, ಸಂಚಾಲಕರುಗಳಾದ ರವಿ ಶೆಟ್ಟಿ ಕಿಲ್ಪಾಡಿ, ರಾಧಾಕೃಷ್ಣ ಶೆಟ್ಟಿ, ಮಹಿಳಾ ವಿಭಾಗದ ಶಶಿ ಜೆ. ಶೆಟ್ಟಿ, ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಸದಸ್ಯೆಯರ ನೇತೃತ್ವದಲ್ಲಿ ಸಮಾರಂಭವು ಜರಗಿತು. ಸಮಾಜ ಬಾಂಧವರು, ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

ಚಿತ್ರ-ವರದಿ : ರಮೇಶ್‌ ಅಮೀನ್‌

Ad

ಟಾಪ್ ನ್ಯೂಸ್

ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ:  ಡಾ.ಜಿ. ಪರಮೇಶ್ವರ್‌

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ಡಾ.ಜಿ. ಪರಮೇಶ್ವರ್‌

Yaduveer-Wodeyar

ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾರ್ಯ ಶೀಘ್ರ ಆರಂಭ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

ಕಾರ್ಮಿಕ ಮುಷ್ಕರ; ದ.ಕ.,ಉಡುಪಿ ಜಿಲ್ಲೆಯಲ್ಲಿ ಸಹಜ ಸ್ಥಿತಿ

Maha-CM–MLA-Canteen

ಕ್ಯಾಂಟೀನ್‌ ಸಿಬ್ಬಂದಿಗೆ ಹಲ್ಲೆ: ಜನಪ್ರತಿನಿಧಿಗಳು ಹೊಡೆಯುವುದು ಸರಿಯಲ್ಲ: ಸಿಎಂ ಫಡ್ನವೀಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಥಾ ಸರಣಿ ಭಾಗ 7-ಕೊನೆಗೂ ಭೀಷ್ಮ ಅಬ್ಬರಿಸಿದ್ದ; ಸ್ವಯಂವರದಲ್ಲಿ ಪರಾಕ್ರಮಿ ಭೀಷ್ಮ

ಕಥಾ ಸರಣಿ ಭಾಗ 7-ಕೊನೆಗೂ ಭೀಷ್ಮ ಅಬ್ಬರಿಸಿದ್ದ; ಸ್ವಯಂವರದಲ್ಲಿ ಪರಾಕ್ರಮಿ ಭೀಷ್ಮ

ಹೆಗಲ ಮೇಲಿನ ಶಾಲು

ಹೆಗಲ ಮೇಲಿನ ಶಾಲು

ಪುಣೆಯ ಮಕ್ಕಳ ತಜ್ಞ ಡಾ| ಸುಧಾಕರ್‌ ಶೆಟ್ಟಿಯವರಿಗೆ ಸಮಾಜ ಭೂಷಣ ಪ್ರ ಶಸ್ತಿ ಪ್ರದಾನ

ಪುಣೆಯ ಮಕ್ಕಳ ತಜ್ಞ ಡಾ| ಸುಧಾಕರ್‌ ಶೆಟ್ಟಿಯವರಿಗೆ ಸಮಾಜ ಭೂಷಣ ಪ್ರ ಶಸ್ತಿ ಪ್ರದಾನ

Foreign Life: ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು!

Foreign Life: ಕೊಂಬೆಯ ಮೇಲಣ ಮರ್ಕಟನಂತೆ ಲಂಘಿಸುವುದೆನ್ನ ಮನವು!

Scuba Diving: ಪೆಸಿಫಿಕ್‌ ಮಹಾಸಾಗರದೊಳಗೆ ಮೊದಲ ಸ್ಕೂಬಾ ಡೈವ್‌

Scuba Diving: ಪೆಸಿಫಿಕ್‌ ಮಹಾಸಾಗರದೊಳಗೆ ಮೊದಲ ಸ್ಕೂಬಾ ಡೈವ್‌

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

Mangaluru: ಶಾಂತಿ ನೆಲೆಸಲಿ, ಮೂಲ ಸಮಸ್ಯೆಗಳಿಗೆ ಪರಿಹಾರ ಸಿಗಲಿ

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ:  ಡಾ.ಜಿ. ಪರಮೇಶ್ವರ್‌

ಪ್ರತೀ ತಾಲೂಕಿನಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣಕ್ಕೆ ಸರ್ಕಾರ ನಿರ್ಧಾರ: ಡಾ.ಜಿ. ಪರಮೇಶ್ವರ್‌

Yaduveer-Wodeyar

ಮೈಸೂರು-ಕುಶಾಲನಗರ ಎಕ್ಸ್‌ಪ್ರೆಸ್‌ವೇ ಕಾರ್ಯ ಶೀಘ್ರ ಆರಂಭ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

ಕೊಡಗಿನಲ್ಲಿ ಅಕ್ರಮ ರೆಸಾರ್ಟ್‌ಗಳ ಅಬ್ಬರ: ಕೂಡಲೇ ನೆಲಸಮಗೊಳಿಸಲು ಆಗ್ರಹ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Rain; ಕರಾವಳಿಯಲ್ಲಿ ಜು.10 ರಿಂದ 15ರವರೆಗೆ ಎಲ್ಲೋ ಅಲರ್ಟ್‌ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.