ಬೊರಿವಲಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಾಗರ ಪಂಚಮಿ ಆಚರಣೆ


Team Udayavani, Aug 16, 2018, 3:57 PM IST

1508mum08a.jpg

ಮುಂಬಯಿ: ಬೊರಿವಲಿ ಜೈರಾಜ್‌ ನಗರದ ಪರಿಸರದಲ್ಲಿ  ಕಾರಣಿಕ ಕ್ಷೇತ್ರ ಎಂದೇ ಬಿಂಬಿತಗೊಂಡಿರುವ ಶ್ರೀ ಮಹಿಷಮರ್ದಿನಿ ದೇವಸ್ಥಾನದ ನಾಗಬನದಲ್ಲಿ ನಾಗರ ಪಂಚಮಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆ. 15 ರಂದು ನಡೆಯಿತು.

ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆ 7.30 ರಿಂದ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನಾಗದೇವರಿಗೆ ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ತನು-ತಂಬಿಲ ಜರಗಿತು. ಮಧ್ಯಾಹ್ನ 12.30 ರಿಂದ ವಿವಿಧ ಅಭಿಷೇಕಗಳು ನೆರವೇರಿ, ನಾಗಬನದಲ್ಲಿ ಅಲಂಕೃತಗೊಂಡ ನಾಗದೇವರಿಗೆ ಅರ್ಚಕ ವೃಂದದವರಿಂದ ಮಹಾಪೂಜೆ, ಮಹಾಮಂಗಳಾರತಿ ನಡೆಯಿತು.

ಇದೇ ಸಂದರ್ಭದಲ್ಲಿ ಭಕ್ತಾದಿಗಳನ್ನು ಉದ್ದೇಶಿಸಿ ಮಾತನಾಡಿದ ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್‌ ಸಿ. ಶೆಟ್ಟಿ ಅವರು, ಭಕ್ತರು ತಮ್ಮ ನಾಗಾರಾಧನೆಯನ್ನು ಹೃದಯಲ್ಲಿ ಅರಳಿಸಿಕೊಳ್ಳಬೇಕು. ನಂಬಿಕೆಗಳು ಸಹಜವಾದರೂ ಇಂದು ಮಹಾನಗರದಲ್ಲಿ ದೊರೆಯುವಂತಹ ಕಲಬೆರಕೆ ಹಾಲನ್ನು ನಾಗದೇವರಿಗೆ ಅರ್ಪಿಸುವುದಕ್ಕಿಂತಲೂ ತಮ್ಮ ಭಕ್ತಿಯ ವಿಚಾರಧಾರೆಯನ್ನು ದೇವಸ್ಥಾನದ ಮಹತ್ವದ ಅನ್ನದಾನಕ್ಕೆ ಸಹಾಯ ಮಾಡುವ ಮೂಲಕ ಸಹಕರಿಸಬೇಕು. ಶ್ರೀ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಿರುವ ಭಕ್ತರಿಗೆ ಶ್ರೀ ನಾಗದೇವರು ಸಮೃದ್ಧಿಯನ್ನು ಕರುಣಿಸಲಿ ಎಂದು ಹಾರೈಸಿದರು.

ಮುದ್ರಾಡಿ ಬಕ್ರೆಮಠದ ಶ್ರೀ ಸಂತೋಷ್‌ ಕುಮಾರ್‌ ಭಟ್‌ ಅವರು ಆಶೀರ್ವಚನ ನೀಡಿ, ಪ್ರಕೃತಿ  ಆರಾಧಕರೆಂದೇ  ಪ್ರಸಿದ್ಧವಾದ     ನಾಗದೇವರು ಭೂಮಂಡಲವನ್ನು ತನ್ನ  ಜಡೆಯಲ್ಲಿ ಎತ್ತಿ ಸಮಸ್ತ ಭಕ್ತರನ್ನು ಆಶೀರ್ವದಿಸುತ್ತಿದ್ದಾರೆ. ಪ್ರಕೃತಿ ದೇವಿಯ ತಂಪಿನ ಜಾಗದಲ್ಲಿ ವಾಸಿಸುವ ಉದ್ದೇಶದಿಂದಲೇ ಊರಿನಲ್ಲಿ ಇಂದಿಗೂ ನಾಗ ಬನಗಳು ಬೆಟ್ಟಕಾಡುಗಳ ಮಧ್ಯೆ ಗೋಚರಿಸುತ್ತಿವೆ. ದೇಹವನ್ನು ತೆವಳಿಸಿಕೊಂಡು ಹೋಗುವ ಜೀವ ಜಂತುಗಳು ನಾಶವಾಗಬಾರದೆಂಬ ಉದ್ದೇಶದಿಂದ ತನು-ತಂಬಿಲ ಅರ್ಪಿಸುವುದು ಇಂದಿಗೂ ಆಚರಣೆಯಾಗಿದೆ. 

ಶ್ರಾವಣ ಮಾಸದಲ್ಲಿ ಇಂತಹ ಸಾನ್ನಿಧ್ಯದಲ್ಲಿ ನಾಗದೇವರನ್ನು ಆರಾಧಿಸುವ ಮೂಲಕ ನಮ್ಮ ಪರಂಪರಾಗತ ದೋಷ ನಿವಾರಣೆಯಾಗುವುದರ ಜೊತೆಗೆ ಸಂತತಿ, ಸಂಮೃದ್ಧಿ ನೆರವೇರುತ್ತದೆ ಎಂದರು.

ಪರಿಸರದ ಅಸಂಖ್ಯಾತ ಭಕ್ತರು ನಾಗದೇವರಿಗೆ ವಿವಿಧ ಪೂಜಾ ಅಭಿಷೇಕ ಅರ್ಪಿಸಿ ಮಹಾಮಂಗಳಾರತಿಯ ಆನಂತರ ಪ್ರಸಾದ ಸ್ವೀಕರಿಸಿ ದೇವಸ್ಥಾನದಲ್ಲಿ ಅನ್ನದಾನ ಸ್ವೀಕರಿಸಿದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇವಸ್ಥಾನದ ವಂಶಸ್ಥ ಮೊಕ್ತೇಸರ ಕಲ್ಲಮುಂಡ್ಕೂರು ಹರಿಯಾಳಗುತ್ತು ಜಯರಾಜ ಶ್ರೀಧರ ಶೆಟ್ಟಿ ದಂಪತಿ, ಆಡಳಿತ ಮೊಕ್ತೇಸರ ಕಣಂಜಾರು ಕೊಳಕೆಬೈಲು ಪ್ರದೀಪ್‌ ಸಿ. ಶೆಟ್ಟಿ ದಂಪತಿ, ಮೊಕ್ತೇಸರರಾದ ಶ್ರೀಮತಿ ಜಯಪಾಲಿ ಅಶೋಕ್‌ ಶೆಟ್ಟಿ, ಬಿ. ವಿ. ತಂತ್ರಿ ಮತ್ತು ಅರ್ಚಕವೃಂದದವರು, ದೇವಸ್ಥಾನದ ಆಡಳಿತ ವರ್ಗ, ಶ್ರೀ ಮಹಿಷಮರ್ದಿನಿ ಭಜನ ಮಂಡಳಿಯ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.

ಸ್ಥಳೀಯ ಉದ್ಯಮಿಗಳು, ಸಮಾಜ ಸೇವಕರು, ರಾಜಕೀಯ ಧುರೀಣರು, ವಿವಿಧ ಕ್ಷೇತ್ರಗಳ ಗಣ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. 

ಚಿತ್ರ-ವರದಿ : ರಮೇಶ್‌ ಉದ್ಯಾವರ

ಟಾಪ್ ನ್ಯೂಸ್

ಭಗವಾನ್ ಶ್ರೀರಾಮ ಮತ್ತು ಹಿಂದೂಗಳ ಬಗ್ಗೆ ಯಾಕೆ ದ್ವೇಷ? ಕಾಂಗ್ರೆಸ್ ವಿರುದ್ಧ ಹಾರ್ದಿಕ್

ಭಗವಾನ್ ಶ್ರೀರಾಮ ಮತ್ತು ಹಿಂದೂಗಳ ಬಗ್ಗೆ ಯಾಕೆ ದ್ವೇಷ? ಕಾಂಗ್ರೆಸ್ ವಿರುದ್ಧ ಹಾರ್ದಿಕ್

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಪ್ರಿಯಾಂಕಾ ಆಚಾರ್ಯ ಅವರ ಸ್ಟ್ರಿಂಗ್‌ ಆರ್ಟ್‌ ಸೇರ್ಪಡೆ

ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಪ್ರಿಯಾಂಕಾ ಆಚಾರ್ಯ ಅವರ ಸ್ಟ್ರಿಂಗ್‌ ಆರ್ಟ್‌ ಸೇರ್ಪಡೆ

ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ, ದೇಶಕ್ಕೆ ಬಿಜೆಪಿ ಅನಿವಾರ್ಯವಾಗಿದೆ : ಸಿದ್ದು ಸವದಿ

ಬಿಜೆಪಿಯಲ್ಲಿ ಕುಟುಂಬ ರಾಜಕಾರಣವಿಲ್ಲ, ದೇಶಕ್ಕೆ ಬಿಜೆಪಿ ಅನಿವಾರ್ಯವಾಗಿದೆ : ಸಿದ್ದು ಸವದಿ

ಪರಿಪೂರ್ಣ ಯಾರ್ಕರ್‌ ಎಸೆಯಲು ನೆಟ್‌ ಅಭ್ಯಾಸ ಸಹಕಾರಿ: ಅರ್ಷದೀಪ್‌

ಪರಿಪೂರ್ಣ ಯಾರ್ಕರ್‌ ಎಸೆಯಲು ನೆಟ್‌ ಅಭ್ಯಾಸ ಸಹಕಾರಿ: ಅರ್ಷದೀಪ್‌ ಸಿಂಗ್‌

ಮದುವೆಗೆ ಅಡ್ಡಿಯಾದ ಪ್ರಿಯತಮೆಯ ಮಗುವನ್ನೇ ಅನಾಥವೆಂದು ಬಿಂಬಿಸಿ ಪೊಲೀಸರಿಗೊಪ್ಪಿಸಿದ ಪ್ರಿಯಕರ!

ಮದುವೆಗೆ ಅಡ್ಡಿಯಾದ ಪ್ರಿಯತಮೆಯ ಮಗುವನ್ನೇ ಅನಾಥವೆಂದು ಬಿಂಬಿಸಿ ಪೊಲೀಸರಿಗೊಪ್ಪಿಸಿದ ಪ್ರಿಯಕರ!

ಕೋವಿಡ್ ನಿರ್ವಹಣೆ: ಪ್ರಧಾನಿ ಮೋದಿ ಯಶಸ್ಸು, ಪ್ರಜಾಪ್ರಭುತ್ವದ ಸಾಧನೆ: ಜೋ ಬೈಡೆನ್ ಶ್ಲಾಘನೆ

ಕೋವಿಡ್ ನಿರ್ವಹಣೆ: ಪ್ರಧಾನಿ ಮೋದಿ ಯಶಸ್ಸು, ಪ್ರಜಾಪ್ರಭುತ್ವದ ಸಾಧನೆ: ಜೋ ಬೈಡೆನ್ ಶ್ಲಾಘನೆ

ಮಕ್ಕಳ ಸಹಾಯವಾಣಿ ಕೇಂದ್ರದ ಅಧಿಕಾರಿಗಳು

ಅಕ್ರಮ ಮಕ್ಕಳ ಸಾಗಾಣಿಕೆ: ವಿಜಯಪುರದ ಸ್ಟಾಪ್ ನರ್ಸ್ ಪೊಲೀಸರ ವಶಕ್ಕೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಗಡ್ಚಿರೋಲಿಯ ಆನೆಗಳ ಮೇಲೂ ರಾಜಕೀಯ ಸವಾರಿ 

ಕಿರು ಸಭಾಗೃಹದ ಲೋಕಾರ್ಪಣೆ ಶ್ಲಾಘನೀಯ: ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ 

ಕಿರು ಸಭಾಗೃಹದ ಲೋಕಾರ್ಪಣೆ ಶ್ಲಾಘನೀಯ: ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ 

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

ಇಷ್ಟಲಿಂಗ ಪೂಜೆಯಿಂದ ಭವಬಂಧನದ ಮುಕ್ತಿ ಸಾಧ್ಯ

ಇಷ್ಟಲಿಂಗ ಪೂಜೆಯಿಂದ ಭವಬಂಧನದ ಮುಕ್ತಿ ಸಾಧ್ಯ

ಪತ್ರಕರ್ತರಿಂದ ತುಂಬಾ ಪ್ರೇರಿತನಾಗಿರುವೆ

ಪತ್ರಕರ್ತರಿಂದ ತುಂಬಾ ಪ್ರೇರಿತನಾಗಿರುವೆ

MUST WATCH

udayavani youtube

ವೈದ್ಯರ ನಿರ್ಲಕ್ಷದಿಂದ ನೆಲದ ಮೇಲೆ ನರಳಾಡಿದ ಗರ್ಭಿಣಿ

udayavani youtube

ಎಸೆಸೆಲ್ಸಿ, ಪಿಯುಸಿ ನಂತರ ಅಗಾಧ ಅವಕಾಶ : “ಉದಯವಾಣಿ’ ವಿಶೇಷ ಕಾರ್ಯಕ್ರಮ

udayavani youtube

ದಾವೋಸ್ ನಲ್ಲಿ ಸಿಎಂ : ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

udayavani youtube

ನಾಳೆಯ ಕನಸು ಹೊತ್ತ ಬಾಲಕನಿಗೆ ಬೇಕಿದೆ ಆರ್ಥಿಕ ನೆರವಿನ ಹಸ್ತ

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

ಹೊಸ ಸೇರ್ಪಡೆ

ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಆದಾಯ ಹೆಚ್ಚಿಸಿ ವೆಚ್ಚ ತಗ್ಗಿಸಲು ಕ್ರಮ

ಹಣಕಾಸು ಇಲಾಖೆಯೊಂದಿಗೆ ಚರ್ಚಿಸಿ ಆದಾಯ ಹೆಚ್ಚಿಸಿ ವೆಚ್ಚ ತಗ್ಗಿಸಲು ಕ್ರಮ: ಸಿಎಂ ಸಾವಂತ್

ಸಂವಿಧಾನದ ಕಾನೂನುಗಳಿಂದ ಕಾರ್ಮಿಕರ ರಕ್ಷಣೆ

ಸಂವಿಧಾನದ ಕಾನೂನುಗಳಿಂದ ಕಾರ್ಮಿಕರ ರಕ್ಷಣೆ

ಮಳೆಗೆ ನಾಗರಹೊಳೆ ಉದ್ಯಾನಕ್ಕೆ ಜೀವಕಳೆ…ಕಾಡಿನಲ್ಲಿರುವ ಕೆರೆ ಕಟ್ಟೆಗಳು ಭರ್ತಿ

ಮಳೆಗೆ ನಾಗರಹೊಳೆ ಉದ್ಯಾನಕ್ಕೆ ಜೀವಕಳೆ…ಕಾಡಿನಲ್ಲಿರುವ ಕೆರೆ ಕಟ್ಟೆಗಳು ಭರ್ತಿ

ರಾಗಿ ಖರೀದಿಸದೇ ಅಧಿಕಾರಿಗಳು ಪರಾರಿ

ರಾಗಿ ಖರೀದಿಸದೇ ಅಧಿಕಾರಿಗಳು ಪರಾರಿ

ಭಗವಾನ್ ಶ್ರೀರಾಮ ಮತ್ತು ಹಿಂದೂಗಳ ಬಗ್ಗೆ ಯಾಕೆ ದ್ವೇಷ? ಕಾಂಗ್ರೆಸ್ ವಿರುದ್ಧ ಹಾರ್ದಿಕ್

ಭಗವಾನ್ ಶ್ರೀರಾಮ ಮತ್ತು ಹಿಂದೂಗಳ ಬಗ್ಗೆ ಯಾಕೆ ದ್ವೇಷ? ಕಾಂಗ್ರೆಸ್ ವಿರುದ್ಧ ಹಾರ್ದಿಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.