ಕಂಪೆನಿಗಳಿಂದ ನೇರವಾಗಿ ಲಸಿಕೆ ಪಡೆಯಲು ಖಾಸಗಿ ಆಸ್ಪತ್ರೆಗಳ ಪ್ರಯತ್ನ

Team Udayavani, May 16, 2021, 1:19 PM IST

Private hospitals attempt to get the vaccine directly from companies

ಮುಂಬಯಿ: ಕಂಪೆನಿ ಮತ್ತು ವಸತಿ ಕಟ್ಟಡಗಳಲ್ಲಿ ಲಸಿಕೆ ಅಭಿಯಾನ ನಡೆಸಲು ಅನುಮತಿ ನೀಡಿರುವ ಪುರಸಭೆಯ ಯೋಜನೆ ವಿಫಲವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ದೊಡ್ಡ ಕಂಪೆನಿಗಳಲ್ಲಿ ಮತ್ತು ವಸತಿ ಕಟ್ಟಡಗಳಲ್ಲಿ ಲಸಿಕ ಅಭಿಯಾನ ನಡೆಸುವ ಖಾಸಗಿ ಆಸ್ಪತ್ರೆಗಳು ನೇರವಾಗಿ ಕಂಪೆನಿಗಳಿಂದ ಲಸಿಕೆ ಪಡೆಯಬೇಕಾಗುತ್ತದೆ. ನಿಗಮಗಳು ಈ ಯೋಜನೆಗಳಿಗೆ ಲಸಿಕೆ ಪೂರೈಸುವುದಿಲ್ಲ. ಇದರ ಪರಿಣಾಮವಾಗಿ ಲಸಿಕೆಗಳ ಕೊರತೆಯಿರುವ ಸಮಯದಲ್ಲಿ ಲಸಿಕೆಗಳು ನೇರವಾಗಿ ಕಂಪೆನಿಗಳಿಂದ ಹೇಗೆ ಲಭ್ಯವಾಗುತ್ತವೆ ಎಂಬ ಪ್ರಶ್ನೆ ಎಂದ್ದಿದೆ.

ನಿಯಮ ಘೋಷಿಸಿದ ಬಿಎಂಸಿ

ಮುಂಬಯಿಯಲ್ಲಿ ಲಸಿಕಾ ಅಭಿಯಾನವನ್ನು ವೇಗಗೊಳಿಸಲು ಮುಂಬಯಿ ಮನಪಾ ಕಚೇರಿಗಳು ಮತ್ತು ವಸತಿ ಕಟ್ಟಡಗಳಲ್ಲಿ ಲಸಿಕೆ ನೀಡಲು ಅನುಮತಿ ನೀಡಿದೆ. ಇದಕ್ಕಾಗಿ ನಿಯಮಗಳನ್ನು ಸಹ ಘೋಷಿಸಿದೆ. ಈ ವ್ಯಾಕ್ಸಿನೇಷನ್‌ ಅಭಿಯಾನಕ್ಕಾಗಿ ಕಂಪೆನಿ ಅಥವಾ ವಸತಿ ಕಟ್ಟಡಗಳು ಖಾಸಗಿ ಆಸ್ಪತ್ರೆಗಳೊಂಗಳ ಜತೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಲಸಿಕೆ ಅಭಿಯಾನವನ್ನು ಈ ರೀತಿಯಾಗಿ ಜಾರಿಗೊಳಿಸಲಾಗುತ್ತಿದೆ ಎಂದು ಪುರಸಭೆಗೆ ತಿಳಿಸಬೇಕಾಗುತ್ತದೆ. ಕೊರೊನಾ ಲಸಿಕೆಯನ್ನು ಸಿಬಂದಿ ಅಥವಾ ನಿವಾಸಿಗಳಿಗೆ ನೀಡುವ ಜವಾಬ್ದಾರಿಯನ್ನು ಹೊಂದಿರುವ ಖಾಸಗಿ ಆಸ್ಪತ್ರೆಗಳಿಗೆ ಮಾತ್ರ ಇದನ್ನು ಲಭ್ಯಗೊಳಿಸಬೇಕಾಗುತ್ತದೆ. ಅಂದರೆ ಆಸ್ಪತ್ರೆಗಳು ಅದನ್ನು ಲಸಿಕೆ ತಯಾರಕರಿಂದ ನೇರವಾಗಿ ಪಡೆಯಬೇಕಾಗುತ್ತದೆ ಎಂದಿದೆ.

ಅರ್ಜಿ ಸಲ್ಲಿಸಲು ಮುಂದಾದ  ವಸತಿ ಕಟ್ಟಡಗಳು

ಪುರಸಭೆ ಯೋಜನೆ ಮತ್ತು ನಿಬಂಧನೆಗಳನ್ನು ಘೋಷಿಸಿದ ಬಳಿಕ ಹಲವಾರು ವಸತಿ ಕಟ್ಟಡಗಳ ನಿವಾಸಿಗಳು ನಿರಾಳವಾಗಿದ್ದರು. ಆಸ್ಪತ್ರೆಗಳು ಅಥವಾ ವಾರ್ಡ್‌ಗಳಲ್ಲಿನ ಲಸಿಕೆ ಕೇಂದ್ರಗಳು ಪ್ರಸ್ತುತ ಕಿಕ್ಕಿರಿದು ತುಂಬಿವೆ. ವಸತಿ ಕಟ್ಟಡಗಳ ಆವರಣದಲ್ಲಿ ಲಸಿಕೆ ಅಭಿಯಾನವನ್ನು ನಡೆಸಿದರೆ, ಕೇಂದ್ರಗಳಿಗೆ ಹೋಗುವ ಅಗತ್ಯವಿಲ್ಲ ಎಂದು ನಿವಾಸಿಗಳು ಅಭಿಪ್ರಾಯಪಟ್ಟರು. ವ್ಯಾಕ್ಸಿನೇಷನ್‌ ಅಭಿಯಾನಕ್ಕಾಗಿ ಅನೇಕ ವಸತಿ ಕಟ್ಟಡಗಳ ಖಾಸಗಿ ಆಸ್ಪತ್ರೆಗಳಿಗೆ ಅರ್ಜಿ ಸಲ್ಲಿಸಲು ಪ್ರಾರಂಭಿಸಿವೆ. ಲಸಿಕೆಗಳ ಲಭ್ಯತೆಯ ಬಗ್ಗೆ ಸ್ಪಷ್ಟತೆಯ ಕೊರತೆಯಿಂದಾಗಿ, ಖಾಸಗಿ ಆಸ್ಪತ್ರೆಗಳು ವಸತಿ ಸಂಘಗಳಿಂದ ಅರ್ಜಿಗಳನ್ನು ಸ್ವೀಕರಿಸುವುದನ್ನು ಬಿಟ್ಟು ಬೇರೆ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ.

ಮುಚ್ಚಲ್ಪಟ್ಟ ಖಾಸಗಿ ಆಸ್ಪತ್ರೆಗಳ ವ್ಯಾಕ್ಸಿನೇಷನ್‌ ಸೆಂಟರ್‌

ಪ್ರಸ್ತುತ ಕೊರೊನಾ ಲಸಿಕೆಯ ಕೊರತೆಯಿದೆ. ಸರಕಾರಿ ಮತ್ತು ಪುರಸಭೆ ಕೇಂದ್ರಗಳಲ್ಲಿ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿದೆ. ವ್ಯಾಕ್ಸಿನೇಷನ್‌ ಕೊರತೆಯಿಂದಾಗಿ ಹೆಚ್ಚಿನ ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನೇಷನ್‌ ಸ್ಥಗಿತಗೊಳಿಸಲಾಗಿದೆ. ವಾರ್ಡ್‌ ಮಟ್ಟದಲ್ಲಿ ಲಸಿಕೆ ಕೇಂದ್ರಗಳನ್ನು ಪ್ರಾರಂಭಿಸಲು ಪುರಸಭೆ ಈಗ ಆದ್ಯತೆ ನೀಡಿದೆ. ಈ ಕೇಂದ್ರಗಳಿಗೆ ದಿನಕ್ಕೆ 100 ಡೋಸ್‌ಗಳನ್ನು ನೀಡಲಾಗುತ್ತಿದೆ. ಆದ್ದರಿಂದ ಈ ಕೇಂದ್ರಗಳಲ್ಲಿ ಪ್ರತಿದಿನ 100 ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ. ಸ್ಥಳೀಯರು ತಮ್ಮ ಮನೆಗಳ ಬಳಿ ಲಸಿಕೆ ಪಡೆಯಲು ಇಚ್ಚಿಸುತ್ತಿದ್ದು, ಆದರೆ ಲಸಿಕೆಗಳ ಕೊರತೆಯಿಂದ ಅವರು ನಿರಾಶೆಗೊಂಡಿದ್ದಾರೆ. ವಸತಿ ಕಟ್ಟಡಗಳ ಆವರಣದಲ್ಲಿ ಚುಚ್ಚುಮದ್ದಿಗೆ ಪುರಸಭೆ ಹಸಿರು ನಿಶಾನೆ ನೀಡಿತ್ತು. ಆದರೆ ಖಾಸಗಿ ಆಸ್ಪತ್ರೆಗಳು ಲಸಿಕೆ ಹಾಕಲು ಹಿಂಜರಿಯುತ್ತಿರುವುದರಿಂದ ಯೋಜನೆ ಕುಂಠಿತಗೊಳ್ಳುವ ಲಕ್ಷಣಗಳಿವೆ.

ಟಾಪ್ ನ್ಯೂಸ್

ಕಡಬಕ್ಕೆ ಜಿಲ್ಲಾಧಿಕಾರಿ ಭೇಟಿ : ಇಕ್ಕಟ್ಟಿನ ತಾಲೂಕು ಕಛೇರಿಯಲ್ಲಿ ಸಾರ್ವಜನಿಕರ ಪರದಾಟ!

ಕಡಬಕ್ಕೆ ಜಿಲ್ಲಾಧಿಕಾರಿ ಭೇಟಿ : ಇಕ್ಕಟ್ಟಿನ ತಾಲೂಕು ಕಛೇರಿಯಲ್ಲಿ ಸಾರ್ವಜನಿಕರ ಪರದಾಟ!

ಹುಬ್ಬಳ್ಳಿ ಹೋಟೆಲ್ ನಲ್ಲಿ ‘ಸರಳ ವಾಸ್ತು’ ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ!

ಹುಬ್ಬಳ್ಳಿ ಹೋಟೆಲ್ ನಲ್ಲಿ ‘ಸರಳ ವಾಸ್ತು’ ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ!

9death

ಅಸ್ವಸ್ಥಗೊಂಡಿದ್ದ ಮಗು ಸಾವು: ವೈದ್ಯರ ನಿರ್ಲಕ್ಷ್ಯ ಖಂಡಿಸಿ ಪೋಷಕರ ಆಕ್ರೋಶ

ಪ್ರತಿಕೂಲ ಹವಾಮಾನ; ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ, 3,000 ಯಾತ್ರಾರ್ಥಿಗಳು ಅತಂತ್ರ

ಪ್ರತಿಕೂಲ ಹವಾಮಾನ; ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ, 3,000 ಯಾತ್ರಾರ್ಥಿಗಳು ಅತಂತ್ರ

ಪಿಎಸ್ ಐ ಹಗರದಲ್ಲಿ ವಿಜಯೇಂದ್ರ- ಅಶ್ವಥನಾರಾಯಣ ಪಾಲೂ ಇದೆ: ಸಿದ್ದರಾಮಯ್ಯ ಆರೋಪ

ಪಿಎಸ್ ಐ ಹಗರಣದಲ್ಲಿ ವಿಜಯೇಂದ್ರ- ಅಶ್ವಥನಾರಾಯಣ ಪಾಲೂ ಇದೆ: ಸಿದ್ದರಾಮಯ್ಯ ಆರೋಪ

ಪಡುಬಿದ್ರಿ: ದ್ವಿಚಕ್ರ ವಾಹನದ ಮೇಲೆ ಲಾರಿ ಮಗುಚಿ ಬಿದ್ದು ಸವಾರ ಸ್ಥಳದಲ್ಲೇ ಸಾವು

ಪಡುಬಿದ್ರಿ: ದ್ವಿಚಕ್ರ ವಾಹನದ ಮೇಲೆ ಮಗುಚಿ ಬಿದ್ದ ಲಾರಿ; ಸವಾರ ಸ್ಥಳದಲ್ಲೇ ಸಾವು

7bike

ಬೈಪಾಸ್ ರಸ್ತೆಯಲ್ಲಿ ಬೈಕ್ ವೀಲಿಂಗ್: ಯುವಕನಿಗೆ 7 ಸಾವಿರ ರೂ. ದಂಡಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಡಾ| ಸುರೇಶ್‌ ಎಸ್‌. ರಾವ್‌ ಅವರಿಗೆ “ಸರ್ವೋತ್ಕೃಷ್ಟ ತಜ್ಞ’ ಪ್ರಶಸ್ತಿ ಪ್ರದಾನ

ಡಾ| ಸುರೇಶ್‌ ಎಸ್‌. ರಾವ್‌ ಅವರಿಗೆ “ಸರ್ವೋತ್ಕೃಷ್ಟ ತಜ್ಞ’ ಪ್ರಶಸ್ತಿ ಪ್ರದಾನ

ಸಾರ್ಥಕ ಸೇವೆಯ ಫಲವೇ ಸಂಘದ ಮುನ್ನಡೆ: ನಿತ್ಯಾನಂದ ಕೋಟ್ಯಾನ್‌

ಸಾರ್ಥಕ ಸೇವೆಯ ಫಲವೇ ಸಂಘದ ಮುನ್ನಡೆ: ನಿತ್ಯಾನಂದ ಕೋಟ್ಯಾನ್‌

ಸನಾತನ ಧರ್ಮದ ನೆಮ್ಮದಿ ವಿದೇಶಿ ಸಂಸ್ಕೃತಿಯಲ್ಲಿಲ್ಲ: ವಿದ್ಯಾಪ್ರಸನ್ನ  ಸ್ವಾಮೀಜಿ

ಸನಾತನ ಧರ್ಮದ ನೆಮ್ಮದಿ ವಿದೇಶಿ ಸಂಸ್ಕೃತಿಯಲ್ಲಿಲ್ಲ: ವಿದ್ಯಾಪ್ರಸನ್ನ  ಸ್ವಾಮೀಜಿ

ಬಂಟರು ಸಹೃದಯಿ ದಾನಿಗಳಾಗಲಿ: ಎಸ್‌.ಎಂ. ಶೆಟ್ಟಿ

ಬಂಟರು ಸಹೃದಯಿ ದಾನಿಗಳಾಗಲಿ: ಎಸ್‌.ಎಂ. ಶೆಟ್ಟಿ

ಭವಾನಿ ಫೌಂಡೇಶನ್‌ ಆರ್ಥಿಕವಾಗಿ ಹಿಂದುಳಿದವರ ಆಶಾಕಿರಣ: ಡಾ| ಶಿಶಿರ್‌ ಶೆಟ್ಟಿ

ಭವಾನಿ ಫೌಂಡೇಶನ್‌ ಆರ್ಥಿಕವಾಗಿ ಹಿಂದುಳಿದವರ ಆಶಾಕಿರಣ: ಡಾ| ಶಿಶಿರ್‌ ಶೆಟ್ಟಿ

MUST WATCH

udayavani youtube

ವಿದ್ಯುದಾಘಾತದಿಂದ ಒದ್ದಾಡುತ್ತಿದ್ದ ಹಸುವನ್ನು ರಕ್ಷಿಸಿದ ವ್ಯಕ್ತಿ

udayavani youtube

ನ್ಯಾಯಾಧೀಶರ ಸ್ಥಾನಕ್ಕೆ ದೊಡ್ಡ ಕಂಟಕ !

udayavani youtube

ಸಿಧು ಮೂಸೆವಾಲಾ ಹಂತಕರು ಕಾರಿನಲ್ಲಿ ಗನ್ ಹಿಡಿದು ಸಂಭ್ರಮಿಸಿದ ವೀಡಿಯೋ ವೈರಲ್

udayavani youtube

ಚಾರ್ಮಾಡಿ : ರಸ್ತೆ ಮಧ್ಯೆಯೇ ಮೋಜು ಮಸ್ತಿ, ಪ್ರವಾಸಿಗರ ಪುಂಡಾಟಕ್ಕೆ ವಾಹನ ಸವಾರರು ಸುಸ್ತು

udayavani youtube

ಭಾರಿ ಮಳೆಗೆ ಹೆಬ್ಬಾಳ ಸೇತುವೆ ಮುಳುಗಡೆ : ಕಳಸ – ಹೊರನಾಡು ಸಂಪರ್ಕ ಕಡಿತ

ಹೊಸ ಸೇರ್ಪಡೆ

ಕಡಬಕ್ಕೆ ಜಿಲ್ಲಾಧಿಕಾರಿ ಭೇಟಿ : ಇಕ್ಕಟ್ಟಿನ ತಾಲೂಕು ಕಛೇರಿಯಲ್ಲಿ ಸಾರ್ವಜನಿಕರ ಪರದಾಟ!

ಕಡಬಕ್ಕೆ ಜಿಲ್ಲಾಧಿಕಾರಿ ಭೇಟಿ : ಇಕ್ಕಟ್ಟಿನ ತಾಲೂಕು ಕಛೇರಿಯಲ್ಲಿ ಸಾರ್ವಜನಿಕರ ಪರದಾಟ!

ಹುಬ್ಬಳ್ಳಿ ಹೋಟೆಲ್ ನಲ್ಲಿ ‘ಸರಳ ವಾಸ್ತು’ ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ!

ಹುಬ್ಬಳ್ಳಿ ಹೋಟೆಲ್ ನಲ್ಲಿ ‘ಸರಳ ವಾಸ್ತು’ ಖ್ಯಾತಿಯ ಚಂದ್ರಶೇಖರ್ ಗುರೂಜಿ ಹತ್ಯೆ!

9death

ಅಸ್ವಸ್ಥಗೊಂಡಿದ್ದ ಮಗು ಸಾವು: ವೈದ್ಯರ ನಿರ್ಲಕ್ಷ್ಯ ಖಂಡಿಸಿ ಪೋಷಕರ ಆಕ್ರೋಶ

12

ಒಣ ಮೀನಿಗೆ ಮೊರೆ ಹೋಗುವ ಮೀನು ಪ್ರಿಯರು

ಪ್ರತಿಕೂಲ ಹವಾಮಾನ; ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ, 3,000 ಯಾತ್ರಾರ್ಥಿಗಳು ಅತಂತ್ರ

ಪ್ರತಿಕೂಲ ಹವಾಮಾನ; ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ, 3,000 ಯಾತ್ರಾರ್ಥಿಗಳು ಅತಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.