ಪುಣೆ ತುಳುಕೂಟದ ವಾರ್ಷಿಕ ಕ್ರೀಡೋತ್ಸವದ ಸಮಾರೋಪ ಸಮಾರಂಭ


Team Udayavani, Jan 17, 2019, 12:47 PM IST

1601mum01.jpg

ಪುಣೆ: ಪುಣೆ ತುಳುಕೂಟದ ಇಂದಿನ ಕ್ರೀಡಾಕೂಟದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದಕ್ಕೆ ತುಂಬಾ ಸಂತಸ ವಾಗುತ್ತಿದೆ. ಹೊರನಾಡಿನಲ್ಲಿದ್ದುಕೊಂಡು ಸಂಘ ಸಂಸ್ಥೆಗಳ ಮೂಲಕ ಒಗ್ಗಟ್ಟಿನಿಂದ, ಸ್ನೇಹ ಸೌಹಾರ್ದದಿಂದ ಬೆಸೆದುಕೊಂಡು ಕ್ರೀಡಾಕೂಟದಂತಹ ಚಟುವಟಿಕೆಗಳನ್ನು ಮಾಡುತ್ತಿರುವ ಪುಣೆ ತುಳುಕೂಟದ ಕಾರ್ಯ ಅಭಿನಂದನೀಯವಾಗಿದೆ. ಕ್ರೀಡಾಕೂಟವೆಂದರೆ  ಕೇವಲ ಸ್ಪರ್ಧೆಯಲ್ಲ. ಅದೊಂದು ಸ್ನೇಹ ಸಮ್ಮಿಲನವೆನ್ನಬಹುದಾಗಿದೆ. ಪ್ರತಿಯೊಬ್ಬರಿಗೂ ದೇಹಾರೋಗ್ಯ ಅಗತ್ಯವಾಗಿ ಬೇಕಾಗಿದೆ. ಅದಕ್ಕಾಗಿ ಬೇರೆ ಬೇರೆ  ರೀತಿಯ ಕ್ರೀಡೆಯಲ್ಲಿ  ನಮ್ಮನ್ನು ತೊಡಗಿಸಿಕೊಳ್ಳುವುದು ಅನಿವಾರ್ಯವಾಗಿದೆ  ಎಂದು ಅಂತಾರಾಷ್ಟ್ರೀಯ ವೈಟ್‌ ಲಿಫ್ಟರ್‌  ಶ್ಯಾಮಲಾ ಶೆಟ್ಟಿ ಅವರು ನುಡಿದರು.

ಅವರು ಜ. 13 ರಂದು ನಗರದ ಬಿಎಂಸಿಸಿ  ಕಾಲೇಜು ಮೈದಾನದಲ್ಲಿ ನಡೆದ ಪುಣೆ ತುಳುಕೂಟದ ವಾರ್ಷಿಕ ಕ್ರೀಡಾಕೂಟದ  ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಇಂತಹ ಕ್ರೀಡಾಸ್ಪರ್ಧೆಗಳು ಎಲ್ಲೆಲ್ಲಿ ನಡೆ ಯುತ್ತವೆಯೋ ಅಗತ್ಯವಾಗಿ ಭಾಗವಹಿಸುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕಾಗಿದೆ. ನಾನು ಬಾಲ್ಯ   ದಿಂದಲೇ ಪರಿಶ್ರಮಪಟ್ಟು ಕ್ರೀಡಾಕ್ಷೇತ್ರದಲ್ಲಿ ಗುರುತಿಸಿಕೊಂಡು ಹಂತಹಂತವಾಗಿ ಸಾಧನೆಯನ್ನು ಮಾಡಿದ್ದೇನೆ. ಮಕ್ಕಳು  ಶಿಕ್ಷಣ ದೊಂದಿಗೆ ಪ್ರಯತ್ನಪಟ್ಟರೆ ಕ್ರೀಡಾಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬಹುದಾಗಿದೆ ಎಂದರು.

ಆಳ್ವಾಸ್‌ ಕಾಲೇಜು ಮೂಡಬಿದಿರೆ ಇದರ ಕ್ರೀಡಾ ತರಬೇತುದಾರ ಪ್ರಮೋದ್‌ ಕುಮಾರ್‌ ಶೆಟ್ಟಿ ಅವರು ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಪುಣೆಯಲ್ಲಿ ಜಾತಿಭೇದವಿಲ್ಲದೆ ವಿವಿಧ ವಯೋಮಾನದ ತುಳುನಾಡಿನ ಬಂಧುಗಳನ್ನು  ಒಗ್ಗೂಡಿಸಿ ಕೊಂಡು ಮಾಡುತ್ತಿರುವ ಕ್ರೀಡಾಕೂಟದಲ್ಲಿ ಭಾಗವಹಿಸಿರು ವುದಕ್ಕೆ ಹೆಮ್ಮೆಯಾಗುತ್ತಿದೆ. ಇದೊಂದು ಸಂತೋ ಷದ ಕೂಟವೆನ್ನಬಹುದಾಗಿದೆ. ನಮ್ಮೆಲ್ಲರ ಆರೋಗ್ಯ ವೃದ್ಧಿಗಾಗಿ ಕ್ರೀಡೆಯಲ್ಲಿ ತೊಡಗಿಸಿ ಕೊಳ್ಳಬೇಕಾ ಗಿದೆ. ಆರೋಗ್ಯವಂತ ದೇಹ ನಮ್ಮದಾದರೆ ಆರೋಗ್ಯವಂತ ಮನಸ್ಸೂ ನಮ್ಮದಾಗುತ್ತದೆ ಎಂದರು.
ಅತಿಥಿಗಳಾಗಿ ಉಪಸ್ಥಿತರಿದ್ದ ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಗಣೇಶ್‌ ಪೂಂಜಾ ಮಾತನಾಡಿ, ಪುಣೆ ತುಳುಕೂಟದ ಇಂದಿನ ಕ್ರೀಡಾಕೂಟದಲ್ಲಿ ಭಾಗಿಯಾಗಿ ರುವುದಕ್ಕೆ ಸಂತೋಷವಾಗುತ್ತಿದೆ. ಇಂದು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಪುರುಷರು, ಮಹಿಳೆಯರೆಲ್ಲರೂ ಉತ್ಸಾಹದಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂಭ್ರಮಪಟ್ಟಿರುತ್ತಾರೆ. ಇಲ್ಲಿ ಗೆಲುವು ಸೋಲುಗಳ ಬಗ್ಗೆ  ಚಿಂತಿಸದೆ ನಮ್ಮೆಲ್ಲರ ಭಾಗವಹಿಸುವಿಕೆಯೇ ಮುಖ್ಯ ಎಂಬುವುದನ್ನು ಮನಗಂಡು ಮುಂದಿನ ವರ್ಷಗಳಲ್ಲಿ ಇನ್ನೂ ಉತ್ಸಾಹದಿಂದ ಭಾಗವಹಿಸಿ ನಮ್ಮ ಸಂಘದ ಜೊತೆ ಸಹಕಾರ ನೀಡಬೇಕಾಗಿದೆ ಎಂದು ನುಡಿದರು.

ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ರವಿ ಕೆ. ಶೆಟ್ಟಿ, ತುಳುಕೂಟದ ಗೌರವಾಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು, ಬಂಟ್ಸ್‌ ಅಸೋಸಿಯೇಶನ್‌ ಪುಣೆ ಇದರ ಕಾರ್ಯದರ್ಶಿ ಅರವಿಂದ ರೈ, ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ಪುತ್ತೂರು, ತುಳುಕೂಟ ಪಿಂಪ್ರಿ-ಚಿಂಚಾÌಡ್‌ ಇದರ ಅಧ್ಯಕ್ಷರಾದ ಹರೀಶ್‌ ಶೆಟ್ಟಿ ಕುರ್ಕಾಲ್‌, ಬಂಟ್ಸ್‌ ಅಸೋಸಿಯೇಶನ್‌ ಪುಣೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ದೀಪಾ ಅರವಿಂದ ರೈ ಉಪಸ್ಥಿತರಿದ್ದು ಸಂಘದ ಯಶಸ್ವಿ ಕ್ರೀಡಾಕೂಟಕ್ಕೆ ಅಭಿನಂದಿಸಿ ಶುಭಹಾರೈಸಿದರು.

ವೇದಿಕೆಯಲ್ಲಿ ಸಂಘದ ಕ್ರೀಡಾ ಕಾರ್ಯಾಧ್ಯಕ್ಷ ಯಶವಂತ್‌ ಶೆಟ್ಟಿ ತಾಮಾರು, ಪ್ರಧಾನ ಕಾರ್ಯದರ್ಶಿ ಸಂತೋಷ್‌ ಶೆಟ್ಟಿ ಎಣ್ಣೆಹೊಳೆ, ಕೋಶಾಧಿಕಾರಿ ದಿವಾಕರ ಶೆಟ್ಟಿ ಮಾಣಿಬೆಟ್ಟು, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾಯವಾದಿ ರೋಹನ್‌ ಪಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಜಾತಾ ಡಿ. ಶೆಟ್ಟಿ, ಮಹಿಳಾ ವಿಭಾಗದ ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷೆ ಗೀತಾ ಡಿ. ಪೂಜಾರಿ ಉಪಸ್ಥಿತರಿದ್ದರು. ಅತಿಥಿಗಳನ್ನು ಶಾಲು ಹೊದೆಸಿ, ಪುಷ್ಪಗುಚ್ಚ, ಸ್ಮರಣಿಕೆಯನ್ನಿತ್ತು  ಸತ್ಕರಿಸಲಾಯಿತು.
ಕ್ರೀಡಾಕೂಟದಲ್ಲಿ ಭಾಗವಹಿಸಿದ 9 ವರ್ಷದೊಳಗಿನ ಎÇÉಾ ಮಕ್ಕಳಿಗೆ ಪ್ರೋತ್ಸಾಹದಾಯಕ ಕ್ರೀಡಾ ಪದಕಗಳನ್ನು ನೀಡಲಾಯಿತು. 

ಕ್ರೀಡೋತ್ಸವದಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದ ಕ್ರೀಡಾಳುಗಳಿಗೆ ಟ್ರೋಫಿಗಳನ್ನು ಅತಿಥಿಗಳ ಹಸ್ತದಿಂದ ನೀಡಲಾಯಿತು. ಈ ಸಂದರ್ಭ ಉಪಸ್ಥಿತರಿದ್ದ ವಿವಿಧ ಸಂಘ ಸಂಸ್ಥೆಗಳ ಗಣ್ಯರುಗಳನ್ನು  ಪುಷ್ಪಗುತ್ಛ ನೀಡಿ ಗೌರವಿಸಲಾಯಿತು. ಕ್ರೀಡೋತ್ಸವಕ್ಕೆ ಪ್ರಾಯೋಜಕತ್ವ ನೀಡಿದ ಪ್ರಾಯೋಜಕರುಗಳನ್ನು  ಗೌರವಿಸಲಾಯಿತು. ಕ್ರೀಡಾಸಮಿತಿ ಉಪ ಕಾರ್ಯಾಧ್ಯಕ್ಷ ಪ್ರಕಾಶ್‌ ಪೂಜಾರಿ, ಪ್ರಿಯಾ ಎಚ್‌. ದೇವಾಡಿಗ, ಯಶವಂತ್‌ ಶೆಟ್ಟಿ ತಾಮಾರು  ಕ್ರೀಡಾ ಸ್ಪರ್ಧೆಗಳನ್ನು ನಡೆಸಿಕೊಡುವಲ್ಲಿ ಸಹಕಾರ ನೀಡಿದರು. ದೇಶಭಕ್ತಿಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮವು ಕೊನೆಗೊಂಡಿತು.

 ಇಂದಿನ ಕ್ರೀಡಾಕೂಟದಲ್ಲಿ ಬಹುಸಂಖ್ಯೆಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದ ತುಳು-ಕನ್ನಡಿಗರಿಗೆ ವಂದನೆಗಳು. ಸಂಘದ ಪದಾಧಿಕಾರಿಗಳು, ಮಹಿಳಾ ವಿಭಾಗ ಹಾಗೂ ಯುವ ವಿಭಾಗದ ಸದಸ್ಯರೆಲ್ಲರೂ ಇಂದಿನ  ಕ್ರೀಡಾಕೂಟದ ಆಯೋಜನೆಗೆ ಶ್ರಮಿಸಿದ್ದು ಅವರೆಲ್ಲರಿಗೂ ಕೃತಜ್ಞತೆಗಳು. ಮುಂದೆಯೂ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಘವನ್ನು ಬೆಂಬಲಿಸಿ .
 – ಮೋಹನ್‌ ಶೆಟ್ಟಿ ಎಣ್ಣೆಹೊಳೆ ಅಧ್ಯಕ್ಷರು, ಪುಣೆ ತುಳುಕೂಟ
 
ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Ad

ಟಾಪ್ ನ್ಯೂಸ್

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

ವಿಂಬಲ್ಡನ್‌ ಗೆಲ್ಲಬೇಕಾದರೆ ಅಲ್ಕರಾಜ್‌ ಅವರನ್ನು ಮಣಿಸಲೇಬೇಕಿತ್ತು: ಸಿನ್ನರ್‌

Australia Vs West Indies; ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

AUS Vs WI: ಕಿಂಗ್‌ಸ್ಟನ್‌ ಟೆಸ್ಟ್‌ : 181 ರನ್‌ ಮುನ್ನಡೆಯಲ್ಲಿ ಆಸ್ಟ್ರೇಲಿಯ

T20 ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾಕ್ಕೆ ಗೆಲುವು

T20 ತ್ರಿಕೋನ ಸರಣಿ: ದಕ್ಷಿಣ ಆಫ್ರಿಕಾಕ್ಕೆ ಗೆಲುವು

Supreme Court: ದ್ವೇಷ ಭಾಷಣ ನಿಯಂತ್ರಿಸಿ: ಸರಕಾರಕ್ಕೆ ಸುಪ್ರೀಂ ಸೂಚನೆ

Supreme Court: ದ್ವೇಷ ಭಾಷಣ ನಿಯಂತ್ರಿಸಿ: ಸರಕಾರಕ್ಕೆ ಸುಪ್ರೀಂ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Madame Tussauds: ಮೇಡಮ್‌ ಟುಸ್ಸಾಡ್‌: ಮಾನವ ಪ್ರತಿಕೃತಿಯ ಮೇಣದ ಗೊಂಬೆಗಳ ಲೋಕ

Madame Tussauds: ಮೇಡಮ್‌ ಟುಸ್ಸಾಡ್‌: ಮಾನವ ಪ್ರತಿಕೃತಿಯ ಮೇಣದ ಗೊಂಬೆಗಳ ಲೋಕ

ಕನ್ನಡ ಸಂಘ ಬಹ್ರೈನ್‌: 2025-27ರ ನೂತನ ಆಡಳಿತ ಮಂಡಳಿ ಆಯ್ಕೆ

ಕನ್ನಡ ಸಂಘ ಬಹ್ರೈನ್‌: 2025-27ರ ನೂತನ ಆಡಳಿತ ಮಂಡಳಿ ಆಯ್ಕೆ

ಕತಾರ್‌: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಕತಾರ್‌: ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ದಶಮಾನೋತ್ಸವ-2025 ಸಂಭ್ರಮ

ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ದಶಮಾನೋತ್ಸವ-2025 ಸಂಭ್ರಮ

Europe: ಇಟಲಿ ಏಕೆ ಅಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ? ಇದರ ಒಳಗುಟ್ಟೇನು!

Europe: ಇಟಲಿ ಏಕೆ ಅಷ್ಟು ಪ್ರವಾಸಿಗರನ್ನು ಆಕರ್ಷಿಸುತ್ತದೆ? ಇದರ ಒಳಗುಟ್ಟೇನು!

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಫಿಡೆ ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

FIDE ಮಹಿಳಾ ವಿಶ್ವಕಪ್‌ ಚೆಸ್‌: ಪ್ರಿ ಕ್ವಾರ್ಟರ್‌ಗೆ ದಿವ್ಯಾ, ಹಂಪಿ

suicide (2)

Mangaluru:ಕಾರು ಪಲ್ಟಿಯಾಗಿ ಗಂಭೀರ ಗಾಯಗೊಂಡ ಯುವಕ ಸಾ*ವು

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

Tokyo ಜಪಾನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್ ಮೇಲೆ ನಿರೀಕ್ಷೆ

ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

IPL: ಸನ್‌ರೈಸರ್ ಹೈದರಾಬಾದ್‌ಗೆ ವರುಣ್‌ ಆರೋನ್‌ ಬೌಲಿಂಗ್‌ ಕೋಚ್‌

1-aa-aa-RSS

ಗುರುದಕ್ಷಿಣೆ ಸಮರ್ಪಿಸಿ ಕೊನೆಯುಸಿರೆಳೆದ ಆರೆಸ್ಸೆಸ್‌ ಕಾರ್ಯಕರ್ತ ಬಾಬು ದೇವಾಡಿಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.