Udayavni Special

“2023ರ ವೇಳೆಗೆ ಬುಲೆಟ್‌ ರೈಲ್ವೇ ಯೋಜನೆ ಪೂರ್ಣಗೊಳ್ಳದು”


Team Udayavani, May 27, 2021, 1:14 PM IST

Railway project

ಮುಂಬಯಿ: ಮುಂಬಯಿ- ಅಹಮದಾಬಾದ್‌ ಬುಲೆಟ್‌ ರೈಲು ಯೋಜನೆ ಗಾಗಿ ಭೂಸ್ವಾಧೀನ ಸ್ಥಗಿತಗೊಂಡಿದ್ದು, ಬಾಂದ್ರಾ – ಕುರ್ಲಾ ಸಂಕೀರ್ಣದ ನಿರ್ಮಾಣದ ಟೆಂಡರ್‌ಗಳನ್ನು ಹಲವಾರು ಬಾರಿ ಮುಂದೂಡಲಾಗಿದೆ.

ಕಳೆದ ಹತ್ತು ತಿಂಗಳಲ್ಲಿ ಅಗತ್ಯವಿರುವ ಒಟ್ಟು ಭೂಮಿಯಲ್ಲಿ  ಶೇ. 1 ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಇದರ ಪರಿಣಾಮವಾಗಿ ರಾಜ್ಯದಲ್ಲಿ ಕೆಲಸ ಸ್ಥಗಿತ ಗೊಂಡಿದೆ. ಇತರ ಭಾಗಗಳಲ್ಲಿ ಕೆಲಸವು ವೇಗ ವನ್ನು ಗಳಿಸಿಲ್ಲ. ಲಾಕ್‌ಡೌನ್‌ ಕಾರಣ 2023ರ ವೇಳೆಗೆ ಬುಲೆಟ್‌ ರೈಲು ಯೋಜನೆಯನ್ನು ಪೂರ್ಣಗೊಳಿಸುವುದು ಅಸಾಧ್ಯ ಎಂದು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ರಾಷ್ಟ್ರೀಯ ಹೈ ಸ್ಪೀಡ್‌ ರೈಲ್ವೆ ನಿಗಮ ಸ್ಪಷ್ಟಪಡಿಸಿದೆ.

ಬಾಂದ್ರಾ ಕುರ್ಲಾ ಸಂಕೀರ್ಣವು ಬುಲೆಟ್‌ ರೈಲು ಯೋಜನೆಯ ಆರಂಭಿಕ ಭೂಗತ ನಿಲ್ದಾಣವಾಗಿರುತ್ತದೆ. ಇದಕ್ಕಾಗಿ ಸುರಂಗ ಕೆಲಸ, ನಿಲ್ದಾಣ ನಿರ್ಮಾಣ ಮತ್ತು ಇತರ ತಾಂತ್ರಿಕ ಕಾರ್ಯಗಳ ಟೆಂಡರ್‌ ಅನ್ನು ಹೈ ಸ್ಪೀಡ್‌ ರೈಲ್ವೇ ನಿಗಮ ಫೆ. 19ರಂದು ತೆರೆಯಬೇಕಿತ್ತು. ನಿಲ್ದಾಣವನ್ನು ಸ್ಥಾಪಿಸಬೇಕಾದ ಪ್ರದೇಶದಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಮತ್ತು ಪೆಟ್ರೋಲ್‌ ಪಂಪ್‌ ಇದೆ. ನಿಲ್ದಾಣ ನಿರ್ಮಾಣಕ್ಕೆ ಟೆಂಡರ್‌ ತೆರೆಯಲು ಮೇ 5ರಂದು ನಿರ್ಧರಿಸಲಾಯಿತು. ಆದರೆ ಯಾವುದೇ ಒಪ್ಪಂದಕ್ಕೆ ಬಾರದ ಕಾರಣ ಜೂನ್‌ನಲ್ಲಿ ಮತ್ತು ಈಗ ಆಗಸ್ಟ್‌ನಲ್ಲಿ ಟೆಂಡರ್‌ ತೆರೆಯಲು ನಿಗಮ ನಿರ್ಧರಿಸಿದೆ. ಇದರ ಪರಿಣಾಮವಾಗಿ ನಿಲ್ದಾಣದ ನಿರ್ಮಾಣ ಮತ್ತಷ್ಟು ವಿಳಂಬವಾಗಿದೆ.

ಪಾಲ^ರ್‌ ಮತ್ತು ಥಾಣೆ ಜಿಲ್ಲೆ ಗಳಲ್ಲಿ ಬುಲೆಟ್‌ ರೈಲಿಗೆ ಸರಾಸರಿ ಭೂಸ್ವಾಧೀನವು ರಾಜ್ಯದಲ್ಲಿ ಕೇವಲ ಶೇ. 24ರಷ್ಟಾಗಿದೆ. ದಾದ್ರಾ-ನಗರ ಹವೇಲಿಯಲ್ಲಿ ಇದು ಶೇ. 100 ಮತ್ತು ಗುಜರಾತ್‌ನಲ್ಲಿ ಶೇ. 94ರಷ್ಟಿದೆ.  ಕೊರೊನಾ ಲಾಕ್‌ಡೌನ್‌ ಕಾರಣ ಕೆಲಸ ಕುಂಠಿತವಾಗಿದೆ. ಮಹಾರಾಷ್ಟ್ರದಲ್ಲಿ ಭೂಸ್ವಾಧೀನಕ್ಕೆ ಮುಂದುವರಿಯಲು ಸಾಧ್ಯವಾಗಲಿಲ್ಲ.

ಟಾಪ್ ನ್ಯೂಸ್

09

ವಿಜಯಪುರ : ಸಲಾದಹಳ್ಳಿಯಲ್ಲಿ ಪ್ರೇಮಿಗಳ ಮರ್ಯಾದಾ ಹತ್ಯೆ

ಮತ್ತೆ ರೆಕ್ಕೆ ಬಿಚ್ಚಲಿದೆ ಜೆಟ್‌ ಏರ್‌ ವೇಸ್ : ವಿಮಾನಯಾನ ಕಂಪನಿಯಲ್ಲಿ ಹೊಸ ಆಶಾಕಿರಣ

ಮತ್ತೆ ರೆಕ್ಕೆ ಬಿಚ್ಚಲಿದೆ ಜೆಟ್‌ ಏರ್‌ ವೇಸ್ : ವಿಮಾನಯಾನ ಕಂಪನಿಯಲ್ಲಿ ಹೊಸ ಆಶಾಕಿರಣ

ಅಲ್ಪಸಂಖ್ಯಾತರ ಆಯೋಗದ ವರದಿ ಸದನದಲ್ಲಿ ಮಂಡಿಸಿದ ವಿವರ ಕೇಳಿದ ಹೈಕೋರ್ಟ್‌

08

ಕೋವಿಡ್: 8111 ಸೋಂಕಿತರು ಗುಣಮುಖ, 3709 ಹೊಸ ಪ್ರಕರಣ ಪತ್ತೆ

ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್‌ ಕಡ್ಡಾಯ : ಪ್ರತಿ ಟಿಕೆಟ್‌ಗೆ 300 ರೂ. ನಿಗದಿ

ತಿಮ್ಮಪ್ಪನ ದರ್ಶನಕ್ಕೆ ಟಿಕೆಟ್‌ ಕಡ್ಡಾಯ : ಪ್ರತಿ ಟಿಕೆಟ್‌ಗೆ 300 ರೂ. ನಿಗದಿ

06

ಪ್ರಾಣಿ ಕಲ್ಯಾಣ ಸಹಾಯವಾಣಿ ನಾಳೆ(ಜೂನ್ 23) ಲೋಕಾರ್ಪಣೆ : ಸಚಿವ ಪ್ರಭು ಚವ್ಹಾಣ್

ಜಾರಕಿಹೊಲಿ ಸಿಡಿ ಪ್ರಕರಣ : ಸಂತ್ರಸ್ತೆ ಯುವತಿ ತಂದೆ ಸಲ್ಲಿಸಿದ ಅರ್ಜಿ ವಜಾ

ಜಾರಕಿಹೊಳಿ ಸಿಡಿ ಪ್ರಕರಣ : ಸಂತ್ರಸ್ತೆ ಯುವತಿ ತಂದೆ ಸಲ್ಲಿಸಿದ ಅರ್ಜಿ ವಜಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Home construction

ಮನೆ ನಿರ್ಮಾಣಕ್ಕೆ ಸಹಾಯಹಸ್ತ

The Bhagavad-Gita

ಭಗವದ್ಗೀತೆ ಭಾವಾರ್ಥ ಮಾತೃಭಾಷೆಯಲ್ಲಿ ಬೆಸೆಯಲಿ: ಡಾ| ವೀರೇಂದ್ರ ಹೆಗ್ಗಡೆ

covid news

ಮೂರನೇ ಅಲೆ ಬಗ್ಗೆ ಜಾಗೃತಿ ಅಗತ್ಯ: ಡಿಸಿಎಂ ಅಜಿತ್‌ ಪವಾರ್‌

Today is Yoga Day

ಇಂದು ಯೋಗ ದಿನಾಚರಣೆ

covid Care Center

ರೋಗಿಗಳಿಲ್ಲದೆ ಜಂಬೋ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಮುಚ್ಚಲು ಬಿಎಂಸಿ ನಿರ್ಧಾರ

MUST WATCH

udayavani youtube

ಅಬ್ಬಾ Unlock ಆಯ್ತು | ಈಗ ಹೇಗಿದೆ ಬದುಕು ?

udayavani youtube

Chiffon ಸೀರೆಗಳು | ಮೊದಲು ತಿಳಿಯಿರಿ ನಂತ್ರ ಖರೀದಿಸಿ

udayavani youtube

ದಿಲ್ಲಿಯ ಮೆಟ್ರೋ ರೈಲಿನಲ್ಲಿ ಕೋತಿಯ ಜಾಲಿ ರೈಡ್‌

udayavani youtube

ಗೋವಾ ಬೆಳಗಾವಿ ಸಂಪರ್ಕ ಸೇತುವೆ: ಚೋರ್ಲಾ ಘಾಟ್‍ನಲ್ಲಿ ಗುಡ್ಡ ಕುಸಿತ

udayavani youtube

ಅಕ್ರಮ ಗೋಸಾಗಾಟಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳೇ ಸಾಥ್..!

ಹೊಸ ಸೇರ್ಪಡೆ

09

ವಿಜಯಪುರ : ಸಲಾದಹಳ್ಳಿಯಲ್ಲಿ ಪ್ರೇಮಿಗಳ ಮರ್ಯಾದಾ ಹತ್ಯೆ

yoga day

ಯೋಗದಿಂದ ರೋಗಗಳು ನಿವಾರಣೆ: ಸಂಸದ

hasana news

ಮೆಗಾಡೇರಿ ನಿರ್ಮಾಣ ಕಾಮಗಾರಿಗೆ ಚಾಲನೆ

covid vaccination

ಕೋವಿಡ್‌ ಲಸಿಕೆ ಪಡೆದು ಸೋಂಕಿನಿಂದ ಮುಕ್ತರಾಗಿ

drone-experiment-successful

ಡ್ರೋಣ್‌ ಪ್ರಯೋಗ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.