ಬೊರಿವಲಿಯ ರೋಹಿತ್ ಪೂಜಾರಿ ಡಾನ್ಸ್ ಅಕಾಡೆಮಿ: ಮಂಥನ್-2023 ಸಂಭ್ರಮ
ಅಕಾಡಮಿಯ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಶುಭ ಹಾರೈಸಿದರು.
Team Udayavani, Jun 10, 2023, 6:19 PM IST
ಮುಂಬಯಿ: ತುಳು- ಕನ್ನಡಿಗರಾದ ರೋಹಿತ್ ಪೂಜಾರಿ ಡಾನ್ಸ್ ಅಕಾಡೆಮಿಯ 6ನೇ ವಾರ್ಷಿಕ ಮಂಥನ್-2023 ಸಂಭ್ರಮವು ಮೇ. 28 ರಂದು ಬೋರಿವಲಿ ಪಶ್ಚಿಮದ ಪ್ರಭೊಧನ್ಕರ್ ಠಾಕ್ರೆ ಸಭಾಗೃಹದಲ್ಲಿ ಅದ್ದೂರಿಯಾಗಿ ನಡೆಯಿತು.
ಕಳೆದ ಹಲವಾರು ವರ್ಷಗಳಿಂದ ಬೊರಿವಲಿ ಪಶ್ಚಿಮದಲ್ಲಿ ಡಾನ್ಸ್ ತರ ಗತಿ ನಡೆಸುತ್ತಾ ಸಾವಿರಾರು ಮಂದಿ ಆಸಕ್ತರಿಗೆ ರೋಹಿತ್ ಪೂಜಾರಿ ಡಾನ್ಸ್ ಅಕಾಡೆಮಿ ಮೂಲಕ ನೃತ್ಯ ಕಲಿಸುತ್ತಿರುವ, ಕಿರುತೆರೆಯಲ್ಲಿ ನೃತ್ಯ ಹಾಗೂ ಎ.ಬಿ.ಸಿ.ಡಿ. ಯಂತಹ ಚಲನಚಿತ್ರ ದಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಿದ ರೋಹಿತ್ ಪೂಜಾರಿ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ರೋಹಿತ್ ಪೂಜಾರಿ ಹಾಗೂ ಅವರ ವಿದ್ಯಾರ್ಥಿಗಳು ಕೋವಿಡ್ ಮಹಾಮಾರಿ ಅಧಾರಿತ ನೂತನ ಶೈಲಿಯ ನೃತ್ಯ ಪ್ರದರ್ಶನ ನೀಡಿ ಸೇರಿದ ನೃತ್ಯಾಭಿಮಾನಿಗಳ ಗಮನ ಸೆಳೆದರು.
ಟಿ. ವಿ. ಪೂಜಾರಿಯವರ ಉಪಸ್ಥಿತಿಯಲ್ಲಿ ನಡೆದ ಸಭಾ ಕಾರ್ಯ ಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉದ್ಯಮಿ ಸುರೇಂದ್ರ ಪೂಜಾರಿ, ಅತಿಥಿಗಳಾಗಿ ಸಮಾಜ ಸೇವಕಿ, ತುಳು ಸಂಘ ಬೊರಿವಲಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತಿಲೋತ್ತಮಾ ವೈದ್ಯ ಮತ್ತು ಸಮಾಜ ಸೇವಕಿ ಶೀತಲ್ ಮ್ಹಾತ್ರೆ ಭಾಗವಹಿಸಿ ಅಕಾಡಮಿಯ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ಅವರ ಪಾಲಕರಿಗೆ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಸ್ಥಳೀಯ ಶಾಸಕ ಸುನಿಲ್ ರಾಣೆ ಅವರು ರೋಹಿತ್ ಪೂಜಾರಿ ನೇತೃತ್ವದಲ್ಲಿ ನಡೆಯುತ್ತಿರುವ ಡಾನ್ಸ್ ಅಕಾಡೆಮಿಗೆ ಶುಭ ಹಾರೈಸಿ, ಮಂಥನ್-2023 ಸಂಭ್ರಮದಲ್ಲಿ ಭಾಗವಹಿಸಿದ ಎಲ್ಲ ಕಲಾವಿದರಿಗೆ ಅಭಿನಂದನೆ ಸಲ್ಲಿಸಿದರು.
ನೃತ್ಯದಲ್ಲಿ ಪಾಲ್ಗೊಂಡ ಎಲ್ಲ ಕಲಾವಿದರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಹಾಗೂ ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರಿಗೂ ರೋಹಿತ್ ಪೂಜಾರಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಬುಧಾಬಿ: ಯು.ಎ.ಇ: ಸಿ.ಬಿ.ಎಸ್.ಸಿ.ಕ್ಲಸ್ಟರ್ ವಿಭಾಗದ ಚೆಸ್ ಟೂರ್ನಮೆಂಟ್ ಉದ್ಘಾಟನೆ
Desi Swara: “ಅಕ್ಕ’ ಅರಮನೆಯ ರಚನೆಯ ನೆನ್ನೆ, ಇಂದು, ನಾಳೆಗಳು
Desi Swara: 12ನೆಯ ಅಕ್ಕ ಸಮ್ಮೇಳನ: ವೀರಶೈವ 10 ಸಾವಿರ ವರ್ಷಗಳ ಪ್ರಾಚೀನ ಧರ್ಮ
Desi Swara: ಮಸ್ಕತ್- 40ನೇ ವರ್ಷದ ಗಣೇಶೋತ್ಸವ-ಮೂರು ದಿನದ ಉತ್ಸವ
Desi Swara: ಹೊನ್ನುಡಿ-ಜ್ಞಾನ ಬಳಸಿದರಷ್ಟೇ ಶ್ರೇಷ್ಠ..ಗರ್ವದಿಂದ ಹೊತ್ತು ತಿರುಗಬಾರದು…
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Laptop theft: ಕೆಲಸಕ್ಕಿದ್ದ ಕಂಪನಿಯಲ್ಲೇ 55 ಲ್ಯಾಪ್ಟಾಪ್ ಕದ್ದ ಟೆಕಿ!
Upendra Birthday: ಉಪೇಂದ್ರ ಬರ್ತ್ಡೇಗೆ ʼಯುಐʼನಿಂದ ಬಂತು ಹೊಸ ಪೋಸ್ಟರ್
Anti-national;ಅಫ್ಜಲ್ ಗುರು ವಿಚಾರದಲ್ಲಿ ಆತಿಷಿ ವಿರುದ್ಧ ಬಿಜೆಪಿ ಟೀಕಾ ಪ್ರಹಾರ
Vishnuvardhan Birthday: ವಿಷ್ಣುವರ್ಧನ್ ಜನ್ಮದಿನ ಆಚರಿಸಲು ಫ್ಯಾನ್ಸ್ ರೆಡಿ
Army;ಕಮರಿಗೆ ಬಿದ್ದ ವಾಹನ: ಪ್ಯಾರಾಟ್ರೂಪರ್ ಮೃ*ತ್ಯು,5 ಕಮಾಂಡೋಗಳಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.