ಕುಲಾಲ ಸಂಘ ಮುಂಬಯಿ ಇದರ 88 ನೇ ವಾರ್ಷಿಕ ಮಹಾಸಭೆ


Team Udayavani, Oct 31, 2018, 1:23 PM IST

2910mum04.jpg

ಮುಂಬಯಿ: ನಗರದ ಹಿರಿಯ ಜಾತೀಯ ಸಂಸ್ಥೆಗಳಲ್ಲಿ ಒಂದಾಗಿರುವ ಕುಲಾಲ ಸಂಘ ಮುಂಬಯಿ ಇದರ 88 ನೇ ವಾರ್ಷಿಕ ಮಹಾಸಭೆಯು ಅ. 28 ರಂದು ವಡಾಲದ ಎನ್‌ಕೆಇಎಸ್‌ ಶಿಕ್ಷಣ ಸಂಸ್ಥೆಯ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರಗಿತು.

ಕುಲಾಲ ಸಂಘ ಮುಂಬಯಿ ಅಧ್ಯಕ್ಷ ಪಿ. ದೇವದಾಸ್‌ ಎಲ್‌. ಕುಲಾಲ್‌ ಅವರು ಮಹಾಸಭೆಗೆ ಚಾಲನೆ ನೀಡಿ ಮಾತನಾಡಿ, ಸಂಘದ ಪ್ರತಿಯೊಂದು ಸಮಾಜಪರ ಕಾರ್ಯಗಳನ್ನು ಸಮಾಜ ಬಾಂಧವರ ಮನೆ-ಮನಗಳಿಗೆ ತಲುಪಿಸುವಲ್ಲಿ ಸ್ಥಳೀಯ ಸಮಿತಿಗಳ ಪಾತ್ರ ಮಹತ್ತರವಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಸಮಿತಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.  ಹಿರಿಯರು ಕಟ್ಟಿದ ಈ ಸಂಸ್ಥೆಯನ್ನು ಹಿರಿಯರ  ಮಾರ್ಗದರ್ಶನದೊಂದಿಗೆ ಅರ್ಥಪೂರ್ಣವಾಗಿ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ.  ಸಮಿತಿಯ ಪ್ರತಿಯೋರ್ವ ಸದಸ್ಯರು ಸಂಘದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮಂಗಳೂರಿನಲ್ಲಿ ಕುಲಾಲ ಭವನದ ಕಾರ್ಯವು ಶೀಘ್ರ ಗತಿಯಲ್ಲಿ ನಡೆಯುತ್ತಿದ್ದು, ಒಂದು ವರ್ಷದೊಳಗೆ ಲೋಕಾರ್ಪಣೆಗೊಳಿಸುವ ಯೋಜನೆಯನ್ನು ಹೊಂದಿದ್ದೇವೆ. ಈ ಬೃಹತ್‌ ಯೋಜನೆಗೆ ಸಮಾಜ ಬಾಂಧವರು ಒಮ್ಮತದಿಂದ ಸಹಕರಿಸಬೇಕು. ನಮ್ಮ ಸಂಸ್ಥೆಯು ನಮ್ಮ ಮನೆಯಿದ್ದಂತೆ. ಇದರ ಅಭಿವೃದ್ಧಿಗೆ ಎಲ್ಲರ ಅಗತ್ಯತೆಯಿದ್ದು, ಒಮ್ಮತ ಹಾಗೂ ಒಗ್ಗಟ್ಟಿನಿಂದ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ  ಎಂದು ನುಡಿದರು.

ಕುಲಾಲ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ ಸಾಲ್ಯಾನ್‌ ಅವರು ವಾರ್ಷಿಕ ವರದಿ ಮತ್ತು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಅನುಮೋದಿಸಿಕೊಂಡರು. ಲೆಕ್ಕ ಪರಿಶೋಧಕರನ್ನಾಗಿ ಆರ್‌. ಕೆ. ಕಾರಂತ್‌ ಆ್ಯಂಡ್‌ ಕಂಪೆನಿಯನ್ನು ಮರು ನೇಮಿಸಲಾಯಿತು. ಮಹಾಸಭೆಯಲ್ಲಿ ಸಂಘದ ಬೆಳವಣಿಗೆಗೆ ಹಾಗೂ ಸಮಾಜದಲ್ಲಿ ವಿಶೇಷ ಸಾಧನೆಗೈದ ಜಾನಕಿ ವಿಠಲ್‌ ಮೂಲ್ಯ ಸಯಾನ್‌, ರಾಜೇಶ್ವರಿ ನಾರಾಯಣ ನೇತ್ರಕರೆ ಪನ್ವೇಲ್‌, ಕೇಶವ ಕೆ. ಮೂಲ್ಯ ವಸಾಯಿ ಅವರನ್ನು ಸಮ್ಮಾನಿಸಲಾಯಿತು.

ರಾಷ್ಟ್ರಪತಿ ಸುವರ್ಣ ಪದಕ ವಿಜೇತರಾದ ಡಾ| ಕೃಷ್ಣರಾಜ್‌ ಕೆ. ಮೂಲ್ಯ ಹಾಗೂ ಸುಮಿತ್ರಾರಾಜು ಅವರನ್ನು ಗೌರವಿಸಲಾಯಿತು. ದಿ| ಪಿ. ಜಿ. ಮೂಲ್ಯ ರೋಲಿಂಗ್‌ ಕಪ್‌ನ್ನು ಚಂದ್ರಹಾಸ ಮೂಲ್ಯ ಮೀರಾರೋಡ್‌, ಕುಲಾಲ ಕಣ್ಮಣಿ ದಿ| ಪಿ. ಕೆ. ಸಾಲ್ಯಾನ್‌ ಚಲಿತ ಫಲಕವನ್ನು ಆನಂದ ಕುಲಾಲ್‌ ಜೋಗೇಶ್ವರಿ ಅವರಿಗೆ ಪ್ರದಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿ ವೇತನ ವಿತರಿಸಲಾಯಿತು. ಪೋಷಕರನ್ನು ಗುರುತಿಸಿ ಸಮ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಅಮೂಲ್ಯ ತ್ತೈಮಾಸಿಕದ 20 ನೇ ಹುಟ್ಟುಹಬ್ಬದ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯದರ್ಶಿ ಕರುಣಾಕರ ಸಾಲ್ಯಾನ್‌ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ರಾಘು ಎ. ಮೂಲ್ಯ, ಜತೆ ಕಾರ್ಯದರ್ಶಿಗಳಾದ ಬಿ. ಅಣ್ಣಿ ಮೂಲ್ಯ, ರಾಘು ಬಿ. ಮೂಲ್ಯ, ಕೋಶಾಧಿಕಾರಿ ಜಯ ಎಸ್‌. ಅಂಚನ್‌ ಮತ್ತು ಜತೆ ಕೋಶಾಧಿಕಾರಿ ಸುನೀಲ್‌ ಕೆ. ಕುಲಾಲ್‌ ಅವರು ಉಪಸ್ಥಿತರಿದ್ದರು. ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಗಿರೀಶ್‌ ಬಿ. ಸಾಲ್ಯಾನ್‌, ಡೊಂಬಯ್ಯ ಐ. ಮೂಲ್ಯ, ಕೆ. ಗೋಪಾಲ್‌ ಬಂಗೇರ, ಶಂಕರ ವೈ. ಮೂಲ್ಯ, ಪಿ. ಶೇಖರ್‌ ಮೂಲ್ಯ, ಚಂದ್ರಹಾಸ ಎನ್‌. ಸಾಲ್ಯಾನ್‌, ಉಮೇಶ್‌ ಎಂ. ಬಂಗೇರ, ಮಮತಾ ಎಸ್‌. ಗುಜರನ್‌, ಸೀನ ಎಂ. ಮೂಲ್ಯ, ಸುರೇಶ್‌ ಕೆ. ಕುಲಾಲ್‌, ಆನಂದ ಕೆ. ಕುಲಾಲ್‌, ಆಶೀಷ್‌ ವಿ. ಕರ್ಕೇರ, ಆನಂದ ಬಿ. ಮೂಲ್ಯ, ಜೈರಾಜ್‌ ಪಿ. ಸಾಲ್ಯಾನ್‌, ಗಣೇಶ್‌ ಬಿ. ಸಾಲ್ಯಾನ್‌, ಸುಂದರ ಎನ್‌. ಮೂಲ್ಯ, ಸಂಜೀವ ಎನ್‌. ಬಂಗೇರ, ಪುಷ್ಪಲತಾ ವಿ. ಸಾಲ್ಯಾನ್‌ ಅವರು ಉಪಸ್ಥಿತರಿದ್ದರು.

ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ಆನಂದ ಕೆ. ಕುಲಾಲ್‌, ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಪಿ. ಶೇಖರ್‌ ಮೂಲ್ಯ, ವಿದ್ಯಾರ್ಥಿ ಕೌನ್ಸಿಲ್‌ ಸಮಿತಿಯ ಕಾರ್ಯಾಧ್ಯಕ್ಷ ಉಮೇಶ್‌ ಎಂ. ಬಂಗೇರ, ಆರೋಗ್ಯ ಸಮಿತಿಯ ಕಾರ್ಯಾಧ್ಯಕ್ಷ ಸುರೇಶ್‌ ಕೆ. ಕುಲಾಲ್‌, ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷ ಸೀನ ಜಿ. ಮೂಲ್ಯ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್‌. ಗುಜರನ್‌, ಪ್ರಾಪರ್ಟಿ ಸಮಿತಿಯ ಕಾರ್ಯಾಧ್ಯಕ್ಷ ಕೆ. ಗೋಪಾಲ್‌ ಬಂಗೇರ, ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್‌ ಬಿ. ಸಾಲ್ಯಾನ್‌, ಮೀರಾರೋಡ್‌-ವಿರಾರ್‌ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಮೂಲ್ಯ, ಥಾಣೆ-ಭಿವಂಡಿ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಡೊಂಬಯ್ಯ ಐ. ಮೂಲ್ಯ, ನವಿಮುಂಬಯಿ ಸಮಿತಿಯ ಕಾರ್ಯಾಧ್ಯಕ್ಷ ವಾಸು ಎಸ್‌. ಬಂಗೇರ, ಚರ್ಚ್‌ಗೇಟ್‌-ದಹಿಸರ್‌ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್‌ ಬಿ. ಸಾಲ್ಯಾನ್‌, ಸಿಎಸ್‌ಟಿ-ಮಾನ್‌ಖುರ್ಡ್‌ ಸಮಿತಿಯ ಕಾರ್ಯಾಧ್ಯಕ್ಷ ಶೇಖರ್‌ ಬಿ. ಮೂಲ್ಯ, ಮಂಗಳೂರು ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ ಬಂಗೇರ ಹಾಗೂ ಅಮೂಲ್ಯ ತ್ತೈಮಾಸಿಕದ ಸಂಪಾದಕ ಶಂಕರ್‌ ವೈ. ಮೂಲ್ಯ, ಇತರ ಸದಸ್ಯ ಬಾಂಧವರು ಉಪಸ್ಥಿತರಿದ್ದರು.

 ಚಿತ್ರ-ವರದಿ : ಸುಭಾಶ್‌ ಶಿರಿಯಾ

ಟಾಪ್ ನ್ಯೂಸ್

16

Kadaba: ಕಡಬ ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖಂಡ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

15-paanji

Panaji: ಇಬ್ಬರು ಯುವಕರ ಮೇಲೆ ಕಬ್ಬಿಣದ ರಾಡ್‍ನಿಂದ ಮರಣಾಂತಿಕ ಹಲ್ಲೆ; ಓರ್ವ ಸಾವು

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

3 ಮಕ್ಕಳನ್ನು ಬಿಟ್ಟು 25 ವರ್ಷದ ಪ್ರಿಯಕರನ ಜತೆ ಓಡಿ ಹೋದ ಮಹಿಳೆ!

14-hospete

Hospete: ಸ್ಮಾರಕಗಳ ಮಹತ್ವ, ಸಂರಕ್ಷಣೆ ಮುಂದಿನ ಪೀಳಿಗೆಗೆ ತಿಳಿಸೋದು ಅಗತ್ಯ: ಡಿಸಿ ದಿವಾಕರ್

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

Renukaswamy case: ನಮ್ಮ ಸಿಎಂ ಯಾರ ಒತ್ತಡಕ್ಕೂ ಮಣಿಯುವವರು ಅಲ್ಲ; ಚಲುವರಾಯಸ್ವಾಮಿ

14

ಗ್ಯಾರಂಟಿ ಯೋಜನೆಗಳಿಂದ ಸಿದ್ದರಾಮಯ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ: ಎಚ್ ವಿಶ್ವನಾಥ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

Dubai ಕನ್ನಡ ಸಂಘ: ಹಾದಿಯ ಮಂಡ್ಯ ಅಧ್ಯಕ್ಷೆ, ವರದರಾಜ್‌ ಕೋಲಾರ ಪ್ರ.ಕಾರ್ಯದರ್ಶಿ

Dubai ಕನ್ನಡ ಸಂಘ: ಹಾದಿಯ ಮಂಡ್ಯ ಅಧ್ಯಕ್ಷೆ, ವರದರಾಜ್‌ ಕೋಲಾರ ಪ್ರ.ಕಾರ್ಯದರ್ಶಿ

Desi Swara: ಕತಾರ್‌ ಕರ್ನಾಟಕ ಸಂಘಕ್ಕೆ ನೂತನ ಸಾರಥ್ಯ

Desi Swara: ಕತಾರ್‌ ಕರ್ನಾಟಕ ಸಂಘಕ್ಕೆ ನೂತನ ಸಾರಥ್ಯ

Desi Swara-ದೋಹಾ: ಮಾವಿನ ರುಚಿಗೆ ಮಾರುಹೋದ ಸಾವಿರಾರು ಮಂದಿ

Desi Swara-ದೋಹಾ: ಮಾವಿನ ರುಚಿಗೆ ಮಾರುಹೋದ ಸಾವಿರಾರು ಮಂದಿ

1-asdasdas

Mango fair; ಕೊಲ್ಲಿ ರಾಷ್ಟ್ರದಲ್ಲಿ ಹಣ್ಣಿನ ರಾಜನ ಹಿರಿಮೆ

MUST WATCH

udayavani youtube

Udupi ತಲವಾರಿನಿಂದ ಹಲ್ಲೆ: ಸೆಲೂನ್‌ ಸಿಬ್ಬಂದಿಯ ಕೊ*ಲೆ ಯತ್ನ

udayavani youtube

ಕಮಲಶಿಲೆ ದೇಗುಲದಿಂದ ಗೋ ಕಳವು ಯತ್ನ ವಿಫಲ

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

ಹೊಸ ಸೇರ್ಪಡೆ

16

Kadaba: ಕಡಬ ಸರ್ವೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಮುಖಂಡ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

Election: ಚನ್ನಪಟ್ಟಣದ ಜನ ಒಲವು ತೋರಿದರೆ ನನ್ನ ಸ್ಪರ್ಧೆ ಬಿಟ್ಟು ಬೇರೆ ವಿಧಿಯಿಲ್ಲ: ಡಿಕೆಶಿ

ಟಿವಿಎಸ್‌ ಅಪಾಚೆ ಆರ್‌ಟಿಆರ್‌ 160 ನೂತನ ಬೈಕ್‌ ಮಾರುಕಟ್ಟೆಗೆ

ಟಿವಿಎಸ್‌ ಅಪಾಚೆ ಆರ್‌ಟಿಆರ್‌ 160 ನೂತನ ಬೈಕ್‌ ಮಾರುಕಟ್ಟೆಗೆ

16-koppala

ತೈಲ ಬೆಲೆ ಏರಿಕೆ ಖಂಡಿಸಿ ಜೂ.20 ರಂದು ವಿಧಾನಸಭಾ ಕ್ಷೇತ್ರವಾರು ಪ್ರತಿಭಟನೆ: ಗುಳಗಣ್ಣನವರ್

15-paanji

Panaji: ಇಬ್ಬರು ಯುವಕರ ಮೇಲೆ ಕಬ್ಬಿಣದ ರಾಡ್‍ನಿಂದ ಮರಣಾಂತಿಕ ಹಲ್ಲೆ; ಓರ್ವ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.