

Team Udayavani, Aug 23, 2018, 6:00 AM IST
ಜಕಾರ್ತಾ: ಏಶ್ಯನ್ ಗೇಮ್ಸ್ ಸ್ವಿಮ್ಮಿಂಗ್ ಸ್ಪರ್ಧೆಯ ವೇಳೆ ಕುಟುಂಬದ ಬಗ್ಗೆ ತೀವ್ರ ಚಿಂತೆ ಗೀಡಾಗಿದ್ದ ಕೇರಳದ ಸಾಜನ್ ಪ್ರಕಾಶ್‌ಗೆ ಈಗ ಶುಭ ಸುದ್ದಿ ಲಭಿಸಿದೆ. ಭೀಕರ ಪ್ರವಾಹದಲ್ಲಿ ಸಿಲುಕಿ ನಲುಗಿ ಹೋಗಿದ್ದ ಅವರ ಕುಟುಂಬವೀಗ ಸುರಕ್ಷಿತವಾಗಿದೆ ಎಂಬ ಸುದ್ದಿ ಬಿತ್ತರಗೊಂಡಿದೆ.
“ಒತ್ತಡದಲ್ಲಿ ಹೇಗೆ ಈಜುವುದೆಂದು ನಮಗೆ ತರಬೇತಿ ನೀಡಲಾಗುತ್ತದೆ. ಹೀಗಾಗಿ ನನ್ನ ಹೆಚ್ಚಿನ ಗಮನ ಈಜಿನ ಮೇಲಿತ್ತು’ ಎಂದೂ ಸಾಜನ್ ಹೇಳಿದರು.
ಸಾಜನ್ ಅವರ ತಾಯಿ ಶಾಂತಿ ಮೋಳ್ ತಮಿಳುನಾಡಿನವರಾಗಿದ್ದು, ಮಗ ಏಶ್ಯಾಡ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿ ಎಂಬ ಕಾರಣಕ್ಕೆ ಕೇರಳದ ಪ್ರವಾಹದ ವಿಚಾರವನ್ನು ಗುಟ್ಟು ಮಾಡಿದ್ದರು.
30 ವರ್ಷದ ಬಳಿಕ ಏಶ್ಯನ್ ಗೇಮ್ಸ್ ಫೈನಲ್ ಪ್ರವೇಶಿಸಿದ (200 ಮೀ. ಬಟರ್‌ಫ್ಲೈ) ಮೊದಲ ಭಾರತೀಯ ಈಜುಪಟು ಎಂಬ ದಾಖಲೆ ಸಾಜನ್ ಅವರದಾಗಿತ್ತು. ಫೈನಲ್‌ನಲ್ಲಿ 57.75 ಸೆಕೆಂಡ್‌ಗಳಲ್ಲಿ ಈಜಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಆದರೆ ಫೈನಲ್‌ನಲ್ಲಿ ಅವರಿಗೆ 5ನೇ ಸ್ಥಾನ ಲಭಿಸಿತ್ತು.
ಎಲ್ಲವೂ ಸುಗಮ
ಜಕಾರ್ತಾಕ್ಕೆ ಆಗಮಿಸುವ ಸಂದರ್ಭದಲ್ಲೇ ಕೇರಳದಲ್ಲಿ ಮಳೆ ದಿನೇ ದಿನೇ ಹೆಚ್ಚಾಗುತ್ತಿತ್ತು. ಆದರೆ ಈ ಮಟ್ಟದಲ್ಲಿ ವ್ಯತಿರಿಕ್ತ ಪರಿಣಾಮ ಬೀರಲಿದೆ, ಅನಾಹುತ ತಂದೊಡ್ಡಲಿದೆ ಎಂದು ತಿಳಿದಿರಲಿಲ್ಲ. ಕುಟುಂಬದವರ ಬಗ್ಗೆ ಯೋಚಿಸಿ, ನಿದ್ದೆ ಸಮಸ್ಯೆ ಕಾಡಿತ್ತು. ನೆಟ್‌ವರ್ಕ್ ಸಮಸ್ಯೆಯಿಂದಾಗಿ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿರಲಿಲ್ಲ. ಆಮೇಲೆ ನನ್ನ ಸಂಬಂಧಿಯೊಬ್ಬರು ಕರೆ ಮಾಡಿ ಎಲ್ಲರು ಸುರಕ್ಷಿತರಾಗಿದ್ದಾರೆ ಮತ್ತು ಎಲ್ಲವೂ ಸುಗಮವಾಗಿದೆ ಎಂದು ತಿಳಿಸಿದ ಬಳಿಕ ಸಮಾಧಾನವಾಗಿದೆ.
ಸಾಜನ್ ಪ್ರಕಾಶ್
Ad
You seem to have an Ad Blocker on.
To continue reading, please turn it off or whitelist Udayavani.