21 ತಿಂಗಳ ಕಾಲ ಅಮಾನತಾದ ಒಲಿಂಪಿಯನ್ ಜಿಮ್ನಾಸ್ಟ್ ದೀಪಾ ಕರ್ಮಾಕರ್
Team Udayavani, Feb 4, 2023, 3:33 PM IST
ಹೊಸದಿಲ್ಲಿ: ಭಾರತದ ಒಲಿಂಪಿಯನ್ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಅವರು ಡೋಪಿಂಗ್ ಪರೀಕ್ಷೆಯಲ್ಲಿ ವಿಫಲರಾದ ಕಾರಣ 21 ತಿಂಗಳ ಕಾಲ ಅಮಾನತುಗೊಳಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಟೆಸ್ಟಿಂಗ್ ಸಂಸ್ಥೆ (ಐಟಿಎ) ತಿಳಿಸಿದೆ.
ಕರ್ಮಾಕರ್ ಅವರು ಹೈಜೆನಾಮೈನ್ ಪಡೆದಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ. 2023ರ ಜುಲೈ 10ರವರೆಗೆ ಅವರನ್ನು ಅಮಾನತುಗೊಳಿಸಲಾಗಿದೆ.
ಅಕ್ಟೋಬರ್ 2021 ರಲ್ಲಿ ಫೆಡರೇಶನ್ ಇಂಟರ್ನ್ಯಾಷನಲ್ ಡಿ ಜಿಮ್ನಾಸ್ಟಿಕ್ (FIG) ಪರವಾಗಿ ಮಾದರಿ ಸಂಗ್ರಹಿಸಲಾಗಿತ್ತು. 2017 ರಲ್ಲಿ ವಿಶ್ವ ಡೋಪಿಂಗ್ ವಿರೋಧಿ ಏಜೆನ್ಸಿಯ ನಿಷೇಧಿತ ವಸ್ತುಗಳ ಪಟ್ಟಿಗೆ ಹಿಜೆನಮೈನ್ ಅನ್ನು ಸೇರಿಸಲಾಗಿದೆ.
ಇದನ್ನೂ ಓದಿ:ರಾಜಕಾರಣಿಗಳ ಉಚಿತ ಆಫರ್ ನಂಬಬೇಡಿ, ಇದು ಬರೀ ಗಿಮಿಕ್: ಪ್ರತಾಪ ಸಿಂಹ
ದೀಪಾ ಕರ್ಮಾಕರ್ ಒಲಿಂಪಿಕ್ಸ್ ನಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಜಿಮ್ನಾಸ್ಟ್ ಆಗಿದ್ದಾರೆ. ರಿಯೊ ಒಲಿಂಪಿಕ್ಸ್ 2016 ರ ಮಹಿಳಾ ವಾಲ್ಟ್ ಫೈನಲ್ ನಲ್ಲಿ ತ್ರಿಪುರಾದ ದೀಪಾ ನಾಲ್ಕನೇ ಸ್ಥಾನ ಗಳಿಸುವ ಮೂಲಕ ಇತಿಹಾಸವನ್ನು ನಿರ್ಮಿಸಿದ್ದರು. ಕಂಚಿನ ಪದಕ ವಿಜೇತೆ ಸ್ವಿಟ್ಜರ್ಲೆಂಡ್‌ನ ಗಿಯುಲಿಯಾ ಸ್ಟೀಂಗ್‌ರುಬರ್ ಗಿಂತ ಕೇವಲ 0.150 ಕಡಿಮೆ ಅಂಕಗಳೊಂದಿಗೆ ಕಂಚಿನ ಪದಕವನ್ನು ಕಳೆದುಕೊಂಡಿದ್ದರು.
ಇದೀಗ ನಿಷೇಧದ ಪ್ರಕಾರ 29 ವರ್ಷ ವಯಸ್ಸಿನ ದೀಪಾ ವಿಶ್ವಕಪ್ ಸರಣಿಯಲ್ಲಿನ ಎಲ್ಲಾ ಪಂದ್ಯಾವಳಿಗಳನ್ನು ಮತ್ತು ಆರು ವಿಶ್ವ ಚಾಲೆಂಜ್ ಕಪ್ ಸರಣಿಗಳಲ್ಲಿ ಕನಿಷ್ಠ ಮೂರನ್ನಾದರೂ ಕಳೆದುಕೊಳ್ಳುತ್ತಾರೆ. ಅವರು ಸೆಪ್ಟೆಂಬರ್ ನಲ್ಲಿ ಆಂಟ್‌ವರ್ಪ್ ನಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ವಾಲಿಫೈಯರ್ ಈವೆಂಟ್ ವರ್ಲ್ಡ್ ಚಾಂಪಿಯನ್‌ಶಿಪ್ 2023 ಗೆ ಅರ್ಹತೆ ಪಡೆಯುತ್ತಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜಯದೊಂದಿಗೆ ಮುಗಿಯಲಿ ಅಭಿಯಾನ: ಸೀಸನ್ ನ ಕೊನೆಯ ಪಂದ್ಯಕ್ಕೆ ಸ್ಮೃತಿ ಟೀಂ ರೆಡಿ
ಭಾರತೀಯನೊಬ್ಬ ಪಾಕಿಸ್ಥಾನ ತಂಡಕ್ಕೆ ಬೆದರಿಕೆ ಹಾಕಿದ್ದ, ಆದರೆ…; ಬಾಂಬ್ ಸಿಡಿಸಿದ ಅಫ್ರಿದಿ
ವನಿತಾ ಪ್ರೀಮಿಯರ್ ಲೀಗ್ :ಡೆಲ್ಲಿ ಕ್ಯಾಪಿಟಲ್ಸ್ ಫೈನಲಿಗೆ
ಏಕದಿನ ಸರಣಿ ಗೆದ್ದರಷ್ಟೇ ಭಾರತ ನಂ. 1
ಪ್ಲೇ ಆಫ್ ಪ್ರವೇಶಿಸಿದ ಯುಪಿ ; ಗ್ರೇಸ್ ಹ್ಯಾರಿಸ್, ಮೆಕ್‌ಗ್ರಾತ್ ಗ್ರೇಟ್ ಬ್ಯಾಟಿಂಗ್