ಅಡಿಲೇಡ್ ಇಂಟರ್ನ್ಯಾಶನಲ್ ಟೆನಿಸ್ ಕ್ವಾ. ಫೈನಲ್ಗೆ ಮೆಡ್ವೆಡೇವ್
Team Udayavani, Jan 5, 2023, 6:07 AM IST
ಅಡಿಲೇಡ್: ಮಾಜಿ ನಂ.1 ಆಟ ಗಾರ ಡ್ಯಾನಿಲ್ ಮೆಡ್ವೆಡೇವ್ “ಅಡಿಲೇಡ್ ಇಂಟರ್ನ್ಯಾಶನಲ್ ಟೆನಿಸ್’ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಅವರು ಸರ್ಬಿಯಾದ ಮಿಯೋಮಿರ್ ಕೆಮ್ಕ ನೋವಿಕ್ ವಿರುದ್ಧ 6-0, 6-3 ಅಂತರದ ಗೆಲುವು ಸಾಧಿಸಿದರು.
ಮೆಡ್ವೆಡೇವ್ ಅವರ ಮುಂದಿನ ಎದುರಾಳಿ ರಷ್ಯಾದವರೇ ಆದ ಕರೆನ್ ಕಶನೋವ್. ಅವರು ಬ್ರಿಟನ್ನ ಜಾಕ್ ಡ್ರೇಪರ್ ವಿರುದ್ಧ 6-4, 6-2ರಿಂದ ಗೆದ್ದು ಬಂದರು.
ಅಗ್ರ ಶ್ರೇಯಾಂಕದ ನೊವಾಕ್ ಜೊಕೋ ವಿಕ್ ಗುರುವಾರ 3ನೇ ಸುತ್ತಿನ ಪಂದ್ಯ ಆಡಲಿದ್ದು, ಗೆದ್ದರೆ ಕ್ವಾರ್ಟರ್ ಫೈನಲ್ ತಲುಪಲಿದ್ದಾರೆ. ಆಸ್ಟ್ರೇಲಿಯ ನೆಲದಲ್ಲಿ ಸತತ 30 ಸಿಂಗಲ್ಸ್ ಪಂದ್ಯಗಳನ್ನು ಗೆದ್ದ ಹೆಗ್ಗಳಿಕೆ ಜೊಕೋ ಅವರದು. ಮೆಡ್ವೆಡೇವ್-ಜೊಕೋವಿಕ್ ಸೆಮಿಫೈನಲ್ನಲ್ಲಿ ಎದುರಾಗುವ ಸಾಧ್ಯತೆ ಹೆಚ್ಚಿದೆ.ವನಿತಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ನಲ್ಲಿ ಅರಿನಾ ಸಬಲೆಂಕಾ ಮತ್ತು ಮಾರ್ಕೆಟಾ ವೊಂಡ್ರೂಸೋವಾ ಪರಸ್ಪರ ಎದುರಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Students Notes: ಸ್ಕ್ರೀನ್ ಶಾರ್ಟ್ಗಳೆಂದು ಪುಸ್ತಕವಾಗದಿರಲಿ
ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ
Devadurga: ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವು
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ