
ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಲಂಕೆಗೆ ಜಯ: ಬೀದಿಗಳಲ್ಲಿ ಹಾಡಿ ಕುಣಿದ ಅಫ್ಘಾನಿಗರು
Team Udayavani, Sep 12, 2022, 10:01 AM IST

ದುಬೈ: ಏಷ್ಯಾ ಕಪ್ ಕೂಟದ ಫೈನಲ್ ಪಂದ್ಯದಲ್ಲಿ ಫೇವರೇಟ್ ಪಾಕಿಸ್ಥಾನ ವಿರುದ್ಧ ಅಂಡರ್ ಡಾಗ್ಸ್ ಎನಿಸಿದ್ದ ಶ್ರೀಲಂಕಾ ಜಯ ಸಾಧಿಸಿದೆ. ಈ ಮೂಲಕ ಆರನೇ ಬಾರಿಗೆ ಏಷ್ಯಾ ಕಪ್ ಎತ್ತಿ ಹಿಡಿದಿದೆ.
ಭಾನುಕ ರಾಜಪಕ್ಸಾ ಅವರ ಸ್ಫೋಟಕ ಅರ್ಧ ಶತಕ ಮತ್ತು ವಾನಿಂದು ಹಸರಂಗರ ಮಿಂಚಿನ ದಾಳಿಯಿಂದ ದ್ವೀಪ ರಾಷ್ಟ್ರ ಶ್ರೀಲಂಕಾ ಜಯ ಸಾಧಿಸಿತು. ಬಾಬರ್ ಹುಡುಗರನ್ನು ಕಟ್ಟಿ ಹಾಕಿದ ಶನಕ ಪಡೆ 24 ರನ್ ಅಂತರದ ಜಯ ಗಳಿಸಿತು.
ಶ್ರೀಲಂಕಾ ಏಷ್ಯಾಕಪ್ ಜಯಿಸಿದ ಸಂದರ್ಭ ಅಫ್ಘಾನಿಸ್ಥಾನದಲ್ಲಿ ಸಂಭ್ರಮಿಸಲಾಯಿತು. ಅಫ್ಘಾನ್ ನ ಬೀದಿಗಳಲ್ಲಿ ಸೇರಿದ ಜನಸ್ತೋಮವು ದ್ವೀಪ ರಾಷ್ಟ್ರದ ಗೆಲುವನ್ನು ಸಂಭ್ರಮಿಸಿದರು.
ಅಫ್ಘಾನ್ ಪತ್ರಕರ್ತ ಅಬ್ದುಲ್ಹಾಕ್ ಒಮೆರಿ ಈ ಬಗ್ಗೆ ವಿಡಿಯೋವೊಂದನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಬೀದಿಯಲ್ಲಿ ಸೇರಿದ ಭಾರಿ ಸಂಖ್ಯೆಯ ಜನರು ಕುಣಿದು ಸಂಭ್ರಮಿಸುತ್ತಿರುವುದನ್ನು ಕಾಣಬಹುದು. ಶ್ರೀಲಂಕಾದ ಗೆಲುವಿನ ಬಗ್ಗೆ ಅಭಿನಂದಿಸಲು ಜನರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಗಳನ್ನು ಮಾಡಿದ್ದಾರೆ. ಅಲ್ಲದೆ ಪಾಕಿಸ್ತಾನ ತಂಡದ ಪ್ರದರ್ಶನವನ್ನು ವಿಶೇಷವಾಗಿ ಫೀಲ್ಡಿಂಗನ್ನು ತಮಾಷೆ ಮಾಡುವ ಮೀಮ್ ಗಳನ್ನು ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಕಾರನ್ನೇ ಎರಡು ಕಿ.ಮೀ ದೂರ ಎಳೆದೊಯ್ದ ಟ್ರಕ್ : ವಿಡಿಯೋ ನೋಡುವಾಗಲೇ ಮೈ ಜುಂ ಅನ್ನುತ್ತೆ
“ನಮ್ಮನ್ನು ತುಂಬಾ ಸಂತೋಷಪಡಿಸಿದ್ದಕ್ಕಾಗಿ ಅಭಿನಂದನೆಗಳು ಶ್ರೀಲಂಕಾಕ್ಕೆ ಧನ್ಯವಾದಗಳು. ಅಫ್ಘಾನಿಸ್ತಾನವು ಶ್ರೀಲಂಕಾ ಗೆಲುವನ್ನು ಸಂಭ್ರಮಿಸುತ್ತಿದೆ” ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ.
Afghans across the world celebrate the well-deserved #AsiaCupCricket Championship victory by the great team of Sri Lanka @OfficialSLC. This is just one scene in Khost. Diversity, democracy and pluralism, and sports against intolerance and terrorism underpin the ???? friendship. pic.twitter.com/2G8hg9GsSd
— Ambassador M. Ashraf Haidari (@MAshrafHaidari) September 11, 2022
“ನಾವು ಏಷ್ಯಾ ಕಪ್ ಚಾಂಪಿಯನ್ ಗಳನ್ನು ಸೋಲಿಸಿದ್ದೇವೆ. ಆದರೆ ನೀವು 2 ಬಾರಿ ಸೋತಿದ್ದೀರಿ” ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. ಅದೇ ಪೋಸ್ಟ್‌ನ ಅಡಿಯಲ್ಲಿ, ಮತ್ತೊಬ್ಬ ಬಳಕೆದಾರರು ಅಫ್ಘಾನಿಸ್ತಾನದ ಅಭಿಮಾನಿಗಳು ಬೀದಿಗಳಲ್ಲಿ ನೃತ್ಯ ಮಾಡುವ ಮೂಲಕ ಲಂಕಾ ವಿಜಯವನ್ನು ಆಚರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಸ್ಟ್ರೇಲಿಯನ್ ಓಪನ್ ಟೆನಿಸ್ : ಅರಿನಾ ಸಬಲೆಂಕಾ ಬಲ ಪ್ರದರ್ಶನ

ಫೆಬ್ರವರಿ 1ರಂದು ರವೀಂದ್ರ ಜಡೇಜಾಗೆ ಫಿಟ್ನೆಸ್ ಪರೀಕ್ಷೆ

ವಿರಾಟ್, ಸಚಿನ್, ಗಾವಸ್ಕರ್ ರಂತಹ ಆಟಗಾರರನ್ನು ಮತ್ತೆ ತಯಾರಿಸಲು ಸಾಧ್ಯವಿಲ್ಲ: ಕೋಚ್ ಗುರುಚರಣ್ ಸಿಂಗ್

ಇವನಂತಹ ಆಟಗಾರನನ್ನು ನೋಡಿಲ್ಲ..: ಭಾರತೀಯನನ್ನು ಹಾಡಿ ಹೊಗಳಿದ ರಿಕಿ ಪಾಂಟಿಂಗ್

ಐಸಿಸಿ ವನಿತಾ ಟಿ20 ವಿಶ್ವಕಪ್: ಮತ್ತೊಂದು ಎತ್ತರಕ್ಕೆ ತಲುಪಿದ ವನಿತಾ ಕ್ರಿಕೆಟ್
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
