
ಅಫ್ಘಾನ್-ಸ್ಕಾಟ್ಲೆಂಡ್: ಸಮಬಲರ ಸೆಣಸಾಟ
Team Udayavani, Oct 25, 2021, 5:45 AM IST

ಶಾರ್ಜಾ: ಕೂಟದ ಡಾರ್ಕ್ ಹಾರ್ಸ್ ಎನಿಸಿರುವ ಅಫ್ಘಾನಿಸ್ಥಾನ ಮತ್ತು ಅರ್ಹತಾ ಸುತ್ತಿನಲ್ಲಿ ಸ್ಪಿರಿಟೆಡ್ ಪ್ರದರ್ಶನ ನೀಡಿದ ಸ್ಕಾಟ್ಲೆಂಡ್ ತಂಡಗಳು ಸೋಮವಾರ ರಾತ್ರಿ ಸೂಪರ್-12 ಹಂತದಲ್ಲಿ ತಮ್ಮ ಅಭಿಯಾನ ಆರಂಭಿಸಲಿವೆ.
ಅಫ್ಘಾನಿಸ್ಥಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಬಂದ ಬಳಿಕ ಅಲ್ಲಿನ ಕ್ರಿಕೆಟ್ ಕೂಡ ಸಾಕಷ್ಟು ನಲುಗಿರುವುದು ರಹಸ್ಯವೇನಲ್ಲ. ಜತೆಗೆ ವಿಶ್ವಕಪ್ ತಂಡ ಆಯ್ಕೆಗೊಂಡ ಬಳಿಕ ಸಾಕಷ್ಟು ಅನಿರೀಕ್ಷಿತ ವಿದ್ಯಮಾನಗಳು ಘಟಿಸಿದವು. ರಶೀದ್ ಖಾನ್ ನಾಯಕತ್ವದಿಂದ ಕೆಳಗಿಳಿದರು. ಈ ಸ್ಥಾನಕ್ಕೆ ಹಿರಿಯ ಆಲ್‌ರೌಂಡರ್ ಮೊಹಮ್ಮದ್ ನಬಿ ಅವರನ್ನು ಮರಳಿ ನೇಮಿಸಲಾಯಿತು.
ಅನುಭವಿ ಶ್ರೀಲಂಕಾ, ಬಾಂಗ್ಲಾದೇಶ ತಂಡ ಗಳನ್ನು ಹಿಂದಿಕ್ಕಿ ವಿಶ್ವಕಪ್ ಪಂದ್ಯಾವಳಿಗೆ ನೇರ ಪ್ರವೇಶ ಪಡೆದದ್ದು ಅಫ್ಘಾನ್ ತಂಡದ ಹೆಗ್ಗಳಿಕೆ. ಅಭ್ಯಾಸ ಪಂದ್ಯದಲ್ಲಿ ತಂಡದ್ದು ಮಿಶ್ರ ಸಾಧನೆ. ದ.ಆಫ್ರಿಕಾ ವಿರುದ್ಧ ಎಡವಿದರೆ, ಹಾಲಿ ಚಾಂಪಿ ಯನ್ ವೆಸ್ಟ್ ಇಂಡೀಸನ್ನು ಮಗುಚಿ ಹಾಕಿತು.
ಅಫ್ಘಾನಿಸ್ಥಾನದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗವೆರಡೂ ಬಲಿಷ್ಠವಾಗಿದೆ. ಹಜ್ರತುಲ್ಲ ಜಜಾಯ್, ಮೊಹಮ್ಮದ್ ಶಾಜಾದ್, ನಜಿಬುಲ್ಲ ಜದ್ರಾನ್, ನಾಯಕ ನಬಿ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ. ಬೌಲಿಂಗ್ ವಿಭಾಗ ಸ್ಪಿನ್ ತ್ರಿವಳಿಗಳಾದ ರಶೀದ್, ನಬಿ ಮತ್ತು ಮುಜೀಬ್ ಜದ್ರಾನ್ ಅವರಿಂದ ಜಬರ್ದಸ್ತ್ ಆಗಿದೆ.
ಇದನ್ನೂ ಓದಿ:ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್ ಕುಮಾರ್
“ನಮ್ಮನ್ನು ಲಘುವಾಗಿ ಪರಿಗಣಿಸದಿರಿ’
ಇನ್ನೊಂದೆಡೆ ಸ್ಕಾಟ್ಲೆಂಡ್ ಅರ್ಹತಾ ಸುತ್ತಿನ ಮೂರೂ ಪಂದ್ಯಗಳನ್ನು ಗೆದ್ದ ಸಂಭ್ರಮದಲ್ಲಿದೆ. ಮೊದಲ ಜಯವೇ ನಂ.6 ಬಾಂಗ್ಲಾದೇಶ ವಿರುದ್ಧ ಬಂದಿರುವುದು ಕೈಲ್ ಕೋಟ್ಜರ್ ಬಳಗದ ಆತ್ಮವಿಶ್ವಾಸವನ್ನು ಬಹಳಷ್ಟು ಹೆಚ್ಚಿಸಿದೆ. ಸ್ಕಾಟ್ಲೆಂಡ್ ಈ ಕೂಟದಲ್ಲಿ ಕಳೆದುಕೊಳ್ಳುವಂಥದ್ದೇನಿಲ್ಲ. ಆದರೆ ಕೆಲವು ಏರುಪೇರಿನ ಫಲಿತಾಂಶ ದಾಖಲಿಸಿ ಗ್ರೂಪ್ ವಿಭಾಗದ ಲೆಕ್ಕಾಚಾರವನ್ನು ತಲೆ ಕೆಳಗು ಮಾಡುವುದನ್ನು ಅಲ್ಲಗಳೆಯುವಂತಿಲ್ಲ.
“ನಮ್ಮನ್ನು ಯಾರೂ ಲಘುವಾಗಿ ಪರಿಗಣಿಸುವುದು ಬೇಡ. ನಾವೀಗ ಅತ್ಯುತ್ತಮ ಫಾರ್ಮ್ ನಲ್ಲಿದ್ದೇವೆ. ಹಿಂದೆಯೂ ನಾವು ಸಾಕಷ್ಟು ಏರುಪೇರಿನ ಫಲಿತಾಂಶ ದಾಖಲಿಸಿದ್ದೇವೆ. ಇಂಗ್ಲೆಂಡನ್ನೂ ಮಣಿಸಿದ ದಾಖಲೆ ಇದೆ. ಎದುರಾಳಿಗಳು ಭೀತಿಪಡುವ ರೀತಿಯಲ್ಲಿ ನಮ್ಮ ಪ್ರದರ್ಶನ ಸಾಗಲಿದೆ’ ಎಂದಿದ್ದಾರೆ ನಾಯಕ ಕೋಟ್ಜರ್.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Cup: ಕಾಂಗರೂ ನಾಡಿನಲ್ಲಿ ಸಾಗಿತು ಕಲರ್‌ಫುಲ್ ವಿಶ್ವಕಪ್

ODI: ಅಪರೂಪದ ಕ್ಲೀನ್‌ಸ್ವೀಪ್ ಅವಕಾಶ ಮರಳಿ ರೋಹಿತ್ ಸಾರಥ್ಯ ಕಾಂಗರೂಗೆ ವೈಟ್‌ವಾಶ್ ಭೀತಿ

Hockey: ಸಿಂಗಾಪುರ ವಿರುದ್ಧ 16-1 ಜಯಭೇರಿ

AsianGames: ಒಂದು ಮೊಬೈಲ್‌ಗಾಗಿ ಸಾವಿರಾರು ಕಸದಬ್ಯಾಗ್ ಹುಡುಕಾಡಿದ ಸಿಬ್ಬಂದಿ: ಆಗಿದ್ದೇನು?

Asian Games: ಕುದುರೆ ಸವಾರಿಯಲ್ಲಿ 41 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದ ಭಾರತ