
ದಕ್ಷಿಣ ಆಫ್ರಿಕಾ ತಂಡದಲ್ಲಿ ಬದಲಾವಣೆ; ಟಿ20 ತಂಡಕ್ಕೆ ನೂತನ ನಾಯಕನ ನೇಮಕ
Team Udayavani, Mar 7, 2023, 8:50 AM IST

ಕೇಪ್ ಟೌನ್: ದಕ್ಷಿಣ ಆಫ್ರಿಕಾದ ಟಿ20 ಕ್ರಿಕೆಟ್ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಚುಟುಕು ಮಾದರಿ ತಂಡದಲ್ಲಿ ನಾಯಕತ್ವ ಬದಲಾವಣೆ ಮಾಡಲಾಗಿದ್ದು, ತೆಂಬಾ ಬವುಮಾ ಬದಲು ಏಡನ್ ಮಾಕ್ರಮ್ ಗೆ ಪಟ್ಟ ಕಟ್ಟಲಾಗಿದೆ.
ಮುಂಬರುವ ವೆಸ್ಟ್ ಇಂಡೀಸ್ ಸರಣಿಗೆ ದಕ್ಷಿಣ ಆಫ್ರಿಕಾ ಟಿ20 ಮತ್ತು ಏಕದಿನ ತಂಡ ಆಯ್ಕೆ ಮಾಡಲಾಗಿದೆ. ತೆಂಬ ಬವುಮಾ ಅವರು ಏಕದಿನ ನಾಯಕರಾಗಿ ಮುಂದುವರಿದಿದ್ದು, ಟಿ20 ತಂಡದಿಂದಲೇ ಕೈಬಿಡಲಾಗಿದೆ.
ದಕ್ಷಿಣ ಆಫ್ರಿಕಾದ ವೆಸ್ಟ್ ಇಂಡೀಸ್ ಪ್ರವಾಸವು ಎರಡು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20 ಸರಣಿಯನ್ನು ಒಳಗೊಂಡಿದೆ. ಮಾರ್ಚ್ 16, 18 ಮತ್ತು 21 ರಂದು ಏಕದಿನ ಪಂದ್ಯಗಳು ನಡೆಯಲಿದ್ದು, ಟಿ20 ಮಾರ್ಚ್ 25, 26 ಮತ್ತು 28 ರಂದು ನಡೆಯಲಿದೆ.
ಇದನ್ನೂ ಓದಿ:ಲಂಡನ್: ಆರ್‌ಎಸ್‌ಎಸ್ ‘ಮೂಲಭೂತವಾದಿ ಮತ್ತು ಫ್ಯಾಸಿಸ್ಟ್’ ಸಂಘಟನೆ ಎಂದ ರಾಹುಲ್ ಗಾಂಧಿ
ಈತನ್ಮಧ್ಯೆ ಗೆರಾಲ್ಡ್ ಕೊಯೆಟ್ಜಿ, ಟೋನಿ ಡಿ ಜೊರ್ಜಿ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ರಿಯಾನ್ ರಿಕೆಲ್ಟನ್ ಮೊದಲ ಬಾರಿಗೆ ಏಕದಿನ ತಂಡದ ಕರೆ ಪಡೆದಿದ್ದಾರೆ. ಅಲ್ಲದೆ, ವಿಶ್ವಕಪ್ ವರ್ಷದಲ್ಲಿ ಇಕ್ಕಟ್ಟಿನ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಪ್ರಮುಖ ಏಕದಿನ ಆಟಗಾರರಿಗೆ ಮೊದಲ ಎರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ. ಗಮನಾರ್ಹವಾಗಿ ವೇಗದ ಬೌಲಿಂಗ್ ಜೋಡಿ ಕಗಿಸೊ ರಬಾಡ ಮತ್ತು ಆನ್ರಿಚ್ ನೋರ್ಜೆ ಅವರಿಗೆ ಸಂಪೂರ್ಣ ಏಕದಿನ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Cup: ಕಾಂಗರೂ ನಾಡಿನಲ್ಲಿ ಸಾಗಿತು ಕಲರ್‌ಫುಲ್ ವಿಶ್ವಕಪ್

ODI: ಅಪರೂಪದ ಕ್ಲೀನ್‌ಸ್ವೀಪ್ ಅವಕಾಶ ಮರಳಿ ರೋಹಿತ್ ಸಾರಥ್ಯ ಕಾಂಗರೂಗೆ ವೈಟ್‌ವಾಶ್ ಭೀತಿ

Hockey: ಸಿಂಗಾಪುರ ವಿರುದ್ಧ 16-1 ಜಯಭೇರಿ

AsianGames: ಒಂದು ಮೊಬೈಲ್‌ಗಾಗಿ ಸಾವಿರಾರು ಕಸದಬ್ಯಾಗ್ ಹುಡುಕಾಡಿದ ಸಿಬ್ಬಂದಿ: ಆಗಿದ್ದೇನು?

Asian Games: ಕುದುರೆ ಸವಾರಿಯಲ್ಲಿ 41 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದ ಭಾರತ