
ಭಾರತೀಯನೊಬ್ಬ ಪಾಕಿಸ್ಥಾನ ತಂಡಕ್ಕೆ ಬೆದರಿಕೆ ಹಾಕಿದ್ದ, ಆದರೆ…; ಬಾಂಬ್ ಸಿಡಿಸಿದ ಅಫ್ರಿದಿ
Team Udayavani, Mar 21, 2023, 10:19 AM IST

ಹೊಸದಿಲ್ಲಿ: ಏಷ್ಯಾ ಕಪ್ ಆಯೋಜನೆ ವಿವಾದ ಇನ್ನೂ ಮುಗಿಯುವ ಹಂತ ತಲುಪಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನದೇ ದೇಶದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲು ನಿರ್ಧರಿಸಿದ್ದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ‘ಭದ್ರತಾ ಸಮಸ್ಯೆಗಳ’ ಕಾರಣದಿಂದ ನೆರೆಯ ದೇಶಕ್ಕೆ ಭಾರತೀಯ ತಂಡವನ್ನು ಕಳುಹಿಸಲು ಸಿದ್ಧವಿಲ್ಲ.
ಇದರ ನಡುವೆ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ದೊಡ್ಡ ಆರೋಪವೊಂದನ್ನು ಮಾಡಿದ್ದಾರೆ. ಈ ಹಿಂದೆ ಭಾರತ ಪ್ರವಾಸದಲ್ಲಿ ಭಾರತೀಯರಿಂದ ತಮ್ಮ ತಂಡಕ್ಕೆ ಬೆದರಿಕೆ ಹಾಕಲಾಗಿತ್ತು, ಆದರೂ ನಾವು ಪ್ರವಾಸ ಮಾಡಲು ನಿರ್ಧರಿಸಿದ್ದೆವು ಎಂದಿದ್ದಾರೆ.
ಇದನ್ನೂ ಓದಿ:1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್: ಥಿಯೇಟರ್ ಬಳಿಕ ಓಟಿಟಿ ರಿಲೀಸ್ ಗೆ ʼಪಠಾಣ್ʼ ರೆಡಿ
ಮಾಧ್ಯಮವೊಂದರ ಜೊತೆ ಮಾತನಾಡಿದ ಅಫ್ರಿದಿ, ಏಷ್ಯಾಕಪ್ ಆಯೋಜನೆ ಬಗ್ಗೆ ಮಾತನಾಡಿದರು.
ಏಷ್ಯಾ ಕಪ್ ಗೆ ಬೇಡ ಎನ್ನುತ್ತಿರುವುದು ಯಾರು? ಭಾರತ ತಾನೆ? ಎಂದ ಅವರು, ನೀವು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಿ ಮತ್ತು ನಾವು ಅವರನ್ನು ಬಹಳ ಸಂತೋಷದಿಂದ ಸ್ವಾಗತಿಸುತ್ತೇವೆ ಎಂದಿದ್ದಾರೆ.
ಇದಕ್ಕೂ ಮೊದಲು ಮುಂಬೈನ ವ್ಯಕ್ತಿಯೊಬ್ಬ ಪಾಕಿಸ್ಥಾನ ತಂಡವು ಭಾರತಕ್ಕೆ ಬಾರದಂತೆ ಬೆದರಿಕೆ ಹಾಕಿದ್ದ. ಆದರೆ ನಮ್ಮ ಸರ್ಕಾರವು ಜವಾಬ್ದಾರಿ ತೆಗೆದುಕೊಂಡು ನಾವು ಭಾರತಕ್ಕೆ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟರು. ಬೆದರಿಕೆಗಳು ನಮ್ಮ ಸಂಬಂಧಕ್ಕೆ ಯಾವುದೇ ಅಡ್ಡಿ ಮಾಡುವುದಿಲ್ಲ ಎಂದು ಅಫ್ರಿದಿ ಹೇಳಿದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Wrestlers ಮೌನ ಪ್ರತಿಜ್ಞೆ; ಮನೆಗಳಿಗೆ ಮರಳಿದ ಹೋರಾಟ ನಿರತರು

Engagement: ಸೆಲ್ಫಿ ಕೇಳಿದ ಅಭಿಮಾನಿಯೊಂದಿಗೇ ಮಾಜಿ ವಿಂಬಲ್ಡನ್ ಚಾಂಪಿಯನ್ ನಿಶ್ಚಿತಾರ್ಥ!

MS Dhoni: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಧೋನಿ ಆಸ್ಪತ್ರೆಗೆ !

World Test Championship ಫೈನಲ್: 4 ದಿನ “ಫುಲ್ ಹೌಸ್” ನಿರೀಕ್ಷೆ

Wrestlers: ಕುಸ್ತಿಪಟುಗಳ ಹೋರಾಟ- ವಿಶ್ವ ಒಕ್ಕೂಟ ಎಚ್ಚರಿಕೆ