ಆಂಧ್ರ ಸಿಎಂ ಆಪ್ತ ಎಂದು ನಂಬಿಸಿ ಕೋಟಿ, ಕೋಟಿ ರೂಪಾಯಿ ವಂಚಿಸಿದ ಮಾಜಿ ಕ್ರಿಕೆಟಿಗ!

Team Udayavani, Mar 15, 2023, 1:25 PM IST

tdy-9

ಆಂಧ್ರಪ್ರದೇಶ: ಸಿಎಂ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಆಪ್ತ ಸಹಾಯಕ ಎಂದು  ಪರಿಚಯಿಸಿಕೊಂಡು ಕಂಪೆನಿಯೊಂದರಿಂದ 12 ಲಕ್ಷ ರೂ. ಪಡೆದುಕೊಂಡು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆಂಧ್ರ ಪ್ರದೇಶದ ಮಾಜಿ ರಣಜಿ ಕ್ರಿಕೆಟಿಗ ನಾಗರಾಜು ಬುಡುಮೂರು ಎಂಬಾತನನ್ನು ಪೊಲೀಸರು ಬಂಧಿಸಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಘಟನೆ ಹಿನ್ನೆಲೆ: ಕಳೆದ ಡಿಸೆಂಬರ್‌ ನಲ್ಲಿ ಆಂಧ್ರ ಪ್ರದೇಶ ತಂಡದ ಮಾಜಿ ಕ್ರಿಕೆಟಿಗ ನಾಗರಾಜು ಬುಡುಮೂರು ಮುಂಬಯಿ ಮೂಲದ ಎಲೆಕ್ಟ್ರಾನಿಕ್ ಕಂಪನಿಯೊಂದಕ್ಕೆ ಕರೆ ಮಾಡಿ ತಾನು ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಆಪ್ತ ಸಹಾಯಕ ಎಂದು ಪರಿಚಯಿಸಿಕೊಂಡು ರಾಜ್ಯದ ಯುವ ಕ್ರಿಕೆಟ್‌ ಆಟಗಾರನೊಬ್ಬನಿಗೆ ಪ್ರಾಯೋಜಕತ್ವ ಮಾಡಲು ನಿಮ್ಮ ಕಂಪೆನಿಯ ಸಹಾಯಬೇಕು ಎಂದು ಹೇಳಿ ಕಂಪೆನಿ ಸಿಬ್ಬಂದಿ ಅವರ ಮನವೊಲಿಸಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯೊಂದಿಗೆ ಇರುವ ನಕಲಿ ದಾಖಲಾತಿಯನ್ನು ಇಮೇಲ್‌ ಮಾಡಿದ್ದ

ಕ್ರಿಕೆಟ್‌ ಮಂಡಳಿಯ ಖಾತೆ ಎಂದು ಕಂಪೆನಿ 12 ಲಕ್ಷ ರೂ.ವನ್ನು ನಾಗರಾಜು ಬುಡುಮೂರು ಅವರು ಕೊಟ್ಟ ಖಾತೆಗೆ ವರ್ಗಾವಣೆ ಮಾಡುತ್ತದೆ. ಆದರೆ ಆದಾದ ಬಳಿಕ ಕ್ರಿಕೆಟ್‌ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ. ತಮಗೆ ವಂಚನೆ ಆಗಿದೆ ಎಂದು ಕಂಪೆನಿಗೆ ಅರಿವಾಗಿ ಪೊಲೀಸರಿಗೆ ದೂರು ನೀಡಿದೆ.

ಮುಂಬಯಿ ಸೈಬರ್‌ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿ ನಾಗರಾಜು ಬುಡುಮೂರುನನ್ನು ಆಂಧ್ರ ಪ್ರದೇಶದಲ್ಲಿ ಬಂಧಿಸಿ. ಆತನಿಂದ 7 ಲಕ್ಷ ರೂ.ವಶಕ್ಕೆ ಪಡೆದುಕೊಂಡಿದ್ದಾರೆ.

ಯಾರು ಈತ ನಾಗರಾಜು ಬುಡುಮೂರು?:

ನಾಗರಾಜು ನಾಗರಾಜು ಬುಡುಮೂರು 2014 -2016 ರವರೆಗೆ ಆಂಧ್ರದ ಪರವಾಗಿ ರಣಜಿಯನ್ನು ಆಡಿದ್ದಾರೆ. ಐಪಿಎಲ್‌ ನಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡದ ಸದಸ್ಯರಾಗಿದ್ದರು. 2018 ರ ಬಳಿಕ ಕ್ರಿಕೆಟ್‌ ನಿಂದ ಅವಕಾಶ ವಂಚಿತನಾದ ಬಳಿಕ ದುಬಾರಿ ಜೀವನವನ್ನು ನಡೆಸಲು ಸಾಧ್ಯವಾಗದೇ ಇದ್ದಾಗ, ನಾಗರಾಜ್‌ ಈ ದಾರಿಗೆ ಇಳಿದಿದ್ದ.

ಇದಲ್ಲದೇ ಈತನ ವಿರುದ್ಧ ಕನಿಷ್ಠ 60 ಕಂಪನಿಗಳಿಗೆ 3 ಕೋಟಿ ರೂ. ವಂಚನೆ ಮಾಡಿದ ಆರೋಪವಿದೆ.  ಆಂಧ್ರಪ್ರದೇಶ ಮತ್ತು ತೆಲಂಗಾಣದ ವ್ಯಾಪಾರ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಖ್ಯಾತನಾಮರ ಹೆಸರು ಹೇಳಿಕೊಂಡು ಅವರಿಂದ ಪ್ರಾಯೋಜಕತ್ವವನ್ನು ಪಡೆಯುವ ನೆಪದಿಂದ ಹಣ ಲೂಟಿ ಮಾಡಿ ವಂಚಿಸುತ್ತಿದ್ದ. ಈ ಹಿಂದೆ 10 ಪ್ರಕರಣಗಳಲ್ಲಿ ಅವರನ್ನು ಬಂಧಿಸಲಾಗಿತ್ತು ಎಂದು ವರದಿ ತಿಳಿಸಿದೆ.

ಟಾಪ್ ನ್ಯೂಸ್

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Malpe ಭಾರೀ ಗಾಳಿ: ದಡದತ್ತ ಧಾವಿಸಿದ ಬೋಟ್‌ಗಳು

Malpe ಭಾರೀ ಗಾಳಿ: ದಡದತ್ತ ಧಾವಿಸಿದ ಬೋಟ್‌ಗಳು

Ullal: ಕಡಲ್ಕೊರೆ‌ತ; ಅಪಾಯದಲ್ಲಿ ಮನೆಗಳು

Ullal: ಕಡಲ್ಕೊರೆ‌ತ; ಅಪಾಯದಲ್ಲಿ ಮನೆಗಳು

Udupi ಮಹಿಳಾ ದೌರ್ಜನ್ಯಕ್ಕೆ ಕಡಿವಾಣ: ಡಿಸಿ ಸೂಚನೆ

Udupi ಮಹಿಳಾ ದೌರ್ಜನ್ಯಕ್ಕೆ ಕಡಿವಾಣ: ಡಿಸಿ ಸೂಚನೆ

TrainMangaluru-Mumbai;ವಂದೇ ಭಾರತ್‌ ರೈಲು: ಶಾಸಕ ಸುನಿಲ್‌ರಿಂದ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ

Mangaluru-Mumbai;ವಂದೇ ಭಾರತ್‌ ರೈಲು: ಶಾಸಕ ಸುನಿಲ್‌ರಿಂದ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rbi

RD ಬಡ್ಡಿ ದರ ಶೇ. 6.7ಕ್ಕೆ ಏರಿಕೆ

madras hc

Sexual Assault: ತೀರ್ಪು ಎತ್ತಿಹಿಡಿದ ಮದ್ರಾಸ್‌ ಹೈಕೋರ್ಟ್‌

money

Rupee: 2,000 ನೋಟು: ಗಡುವು ವಿಸ್ತರಣೆ?

BANK MD

Tamil Nadu: ಕ್ಯಾಬ್‌ ಚಾಲಕನ ಖಾತೆಗೆ 9 ಸಾವಿರ ಕೋಟಿ: ಬ್ಯಾಂಕ್‌ ಎಂಡಿ ರಾಜೀನಾಮೆ

shashi taroor nirmala

Politics: ಶಶಿ ತರೂರ್‌ ವಿರುದ್ಧ ನಿರ್ಮಲಾ ಸೀತಾರಾಮನ್‌ ಸ್ಪರ್ಧೆ?

MUST WATCH

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

ಹೊಸ ಸೇರ್ಪಡೆ

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

Cauvery water dispute ತಟ್ಟದ ಬಂದ್‌ ಬಿಸಿ; ಜೀವನ, ವಾಹನ ಸಂಚಾರ ಯಥಾಸ್ಥಿತಿ

rbi

RD ಬಡ್ಡಿ ದರ ಶೇ. 6.7ಕ್ಕೆ ಏರಿಕೆ

SIDDU IMP

Karnataka: ಏಳನೇ ವೇತನ ಆಯೋಗದ ಅಧ್ಯಕ್ಷ , ಸದಸ್ಯರ ಜತೆ ಸಿಎಂ ಸಭೆ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Dakshina Kannada ಬಿರುಸಿನ ಮಳೆ; ಮೀನುಗಾರರಿಗೆ ಮುನ್ನೆಚ್ಚರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.