

Team Udayavani, May 25, 2024, 11:09 PM IST
ಯೆಚಿಯಾನ್ (ದಕ್ಷಿಣ ಕೊರಿಯಾ): ಭಾರತದ ವನಿತಾ ಕಾಂಪೌಂಡ್ ತಂಡ ವಿಶ್ವಕಪ್ ಆರ್ಚರಿ ಪಂದ್ಯಾವಳಿಯಲ್ಲಿ ಚಿನ್ನಕ್ಕೆ ಗುರಿ ಇರಿಸಿದೆ. ಕಾಂಪೌಂಡ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಒಲಿದಿದೆ.
ಜ್ಯೋತಿ ಸುರೇಖಾ ವೆನ್ನಮ್, ಪರ್ಣೀತ್ ಕೌರ್ ಮತ್ತು ಅದಿತಿ ಸ್ವಾಮಿ ಅವರನ್ನು ಒಳಗೊಂಡ ವಿಶ್ವದ ನಂ.1 ಖ್ಯಾತಿಯ ಕಾಂಪೌಂಡ್ ಆರ್ಚರಿ ತಂಡ ಟರ್ಕಿ ವಿರುದ್ಧ 232-226 ಅಂತರದ ಗೆಲುವು ಸಾಧಿಸಿತು. ಇದರೊಂದಿಗೆ ಈ ಮೂವರ ತಂಡ ವಿಶ್ವಕಪ್ ಪಂದ್ಯಾವಳಿಯಲ್ಲಿ ಬಂಗಾರದ ಹ್ಯಾಟ್ರಿಕ್ ಸಾಧಿಸಿದಂತಾಯಿತು. ಕಳೆದ ವರ್ಷ ಪ್ಯಾರಿಸ್ ಪಂದ್ಯಾವಳಿ ಹಾಗೂ ಈ ಸೀಸನ್‌ನ ಆರಂಭದಲ್ಲಿ ಶಾಂಘೈಯಲ್ಲಿ ನಡೆದ ವರ್ಲ್ಡ್ ಕಪ್ ಸ್ಟೇಜ್-1ರ ಸ್ಪರ್ಧೆಯಲ್ಲಿ ಇವರು ಚಿನ್ನದ ಪದಕ ಜಯಿಸಿದ್ದರು.
ಜ್ಯೋತಿ-ಪ್ರಿಯಾಂಶ್ ಪರಾಭವ:
ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಜ್ಯೋತಿ ಸುರೇಖಾ ವೆನ್ನಮ್ ಮತ್ತು ಪ್ರಿಯಾಂಶ್ ಅವರನ್ನೊಳಗೊಂಡ ಮಿಶ್ರ ತಂಡ ಅಮೆರಿಕದ ಒಲಿವಿಯಾ ಡೀನ್-ಸಾಯರ್ ಸುಲ್ಲಿವಾನ್ ವಿರುದ್ಧ ಸೋಲನುಭವಿಸಿತು (155-153).
Ad
Kota: ಯಡ್ತಾಡಿ ಕಂಬಳ ಗದ್ದೆಯ ಸಾಂಪ್ರದಾಯಿಕ ನಾಟಿ: ನೂರಕ್ಕೂ ಅಧಿಕ ಮಹಿಳೆಯರು ಭಾಗಿ!
Udupi: ಆಯುರ್ವೇದ ಶಿಕ್ಷಣ, ಚಿಕಿತ್ಸೆ, ಔಷಧ ಕ್ಷೇತ್ರದಲ್ಲಿ ದಾಪುಗಾಲು
Kundapura: ಶತಮಾನದ ಹೊಸ್ತಿಲಲ್ಲಿರುವ ಕೊಡ್ಲಾಡಿ ಶಾಲೆಗೆ ಬೇಕು ಕೊಠಡಿ
ಜು.13 ರಂದು ಜಮ್ಮುವಿನಲ್ಲಿ ನಡೆಯುವ ಹಿಂದೂ ಸಮಾವೇಶದಲ್ಲಿ ಶ್ರೀರಾಮ ಸೇನೆ ಭಾಗಿ: ಮುತಾಲಿಕ್
Surathkal ಪರಿಸರದಲ್ಲಿ ಬೀದಿ ನಾಯಿಗಳ ಉಪಟಳ
You seem to have an Ad Blocker on.
To continue reading, please turn it off or whitelist Udayavani.