
ಅರ್ಜೆಂಟೀನದ ನಾಕೌಟ್ ಕನಸು ಜೀವಂತ; ಅದ್ಭುತ ಗೋಲು ಬಾರಿಸಿದ ಮೆಸ್ಸಿ
ಮೆಕ್ಸಿಕೊಗೆ ಸೋಲು
Team Udayavani, Nov 27, 2022, 11:05 PM IST

ಲುಸೈಲ್: ಸೌದಿ ಅರೇಬಿಯ ವಿರುದ್ಧ ಆಘಾತಕಾರಿ ಸೋಲನುಭವಿಸಿದ ಎರಡು ಬಾರಿಯ ಚಾಂಪಿಯನ್ ಅರ್ಜೆಂಟೀನ ಕತಾರ್ ವಿಶ್ವಕಪ್‌ನಲ್ಲಿ ಗೆಲುವಿನ ಯಾನ ಆರಂಭಿಸಿದೆ. ದ್ವಿತೀಯ ಪಂದ್ಯದಲ್ಲಿ ಮೆಕ್ಸಿಕೊ ಪಡೆಯನ್ನು 2-0 ಗೋಲುಗಳಿಂದ ಮಣಿಸಿ ನಾಕೌಟ್ ರೇಸ್‌ನಲ್ಲಿ ಉಳಿದುಕೊಂಡಿದೆ.
“ಸಿ’ ವಿಭಾಗದ ಈ ಮಾಡು-ಮಡಿ ಪಂದ್ಯದಲ್ಲಿ ಅರ್ಜೆಂಟೀನದ ಗೋಲುವೀರರಾಗಿ ಮೂಡಿಬಂದವರೆಂದರೆ ಲಯೋನೆಲ್ ಮೆಸ್ಸಿ ಮತ್ತು ಎನೊl ಫೆರ್ನಾಂಡೆಝ್. ಇವರಿಬ್ಬರ ಅಮೋಘ ಪರಾಕ್ರಮದಿಂದ ಲುಸೈಲ್ ಸ್ಟೇಡಿಯಂನಲ್ಲಿ ಅರ್ಜೆಂಟೀನ ಅವಳಿ “ಮಿಸೈಲ್’ ಉಡಾಯಿಸಿ ಪರಾಕ್ರಮ ಮೆರೆಯಿತು. ಮೆಸ್ಸಿ 64ನೇ ನಿಮಿಷದಲ್ಲಿ, ಫೆರ್ನಾಂಡೆಜ್ 87ನೇ ನಿಮಿಷದಲ್ಲಿ ಗೋಲು ಸಿಡಿಸಿದರು.
* ನಿಧಾನಗತಿಯ ಆರಂಭ: ಹಿಂದಿನ ಪಂದ್ಯದಲ್ಲಿ ಸೋತ ಆಘಾತದಲ್ಲಿದ್ದ ಕಾರಣಕ್ಕೊ ಏನೋ, ಅರ್ಜೆಂಟೀನ ಆರಂಭ ಅಬ್ಬರದಿಂದ ಕೂಡಿರಲಿಲ್ಲ. ಮೆಕ್ಸಿಕನ್ ಆಟಗಾರರು ಮೆಸ್ಸಿಯನ್ನು ತಡೆಯುವ ಪ್ರಯತ್ನದಲ್ಲಿ ಬಹುತೇಕ ಯಶಸ್ಸು ಕಂಡರು. ಪ್ರಥಮಾರ್ಧದಲ್ಲಿ ಮೆಸ್ಸಿಗೆ ಉತ್ತಮ ಅವಕಾಶವೊಂದು ಎದುರಾದರೂ ತಲೆಯಿಂದ ಸಿಡಿದ ಚೆಂಡು ಗೋಲ್ ಪಟ್ಟಿಯ ಮೇಲ್ಭಾಗದಿಂದ ಚಿಮ್ಮಿತು.
ಆದರೆ 64ನೇ ನಿಮಿಷದಲ್ಲಿ ಮೆಸ್ಸಿ ಪ್ರಯತ್ನ ವಿಫಲವಾಗಲಿಲ್ಲ. ಏಂಜೆಲ್ ಡಿ ಮರಿಯ ಅವರಿಂದ ಪಡೆದ ಚೆಂಡನ್ನು ಮೆಸ್ಸಿ ಕೆಳ ಮಟ್ಟದ ಹೊಡೆದ ಮೂಲಕ ಗೋಲುಪೆಟ್ಟಿಗೆಗೆ ತಳ್ಳುವಲ್ಲಿ ಯಶಸ್ವಿಯಾದರು. ಇದಾದ ನಂತರ 87ನೇ ನಿಮಿಷದಲ್ಲಿ ಫೆರ್ನಾಂಡೆಝ್ ಬಾರಿಸಿದ ಗೋಲಂತೂ ಇನ್ನೂ ಆಕರ್ಷಕವಾಗಿತ್ತು.
ಈ ಜಯದೊಂದಿಗೆ ಅರ್ಜೆಂಟೀನ “ಸಿ’ ವಿಭಾಗದ ದ್ವಿತೀಯ ಸ್ಥಾನಿಯಾಗಿದೆ (3 ಅಂಕ). ಅಜೇಯ ಪೋಲೆಂಡ್ ಅಗ್ರಸ್ಥಾನದಲ್ಲಿದೆ (4 ಅಂಕ). ಸೌದಿ ಅರೇಬಿಯ ತೃತೀಯ ಸ್ಥಾನಿಯಾಗಿದೆ (3 ಅಂಕ). ಕೇವಲ ಒಂದು ಅಂಕ ಹಾಗೂ ಒಂದು ಅಂಕವನ್ನಷ್ಟೇ ಹೊಂದಿರುವ ಮೆಕ್ಸಿಕೊದ ನಾಕೌಟ್ ಬಾಗಿಲು ಬಹುತೇಕ ಮುಚ್ಚಿದೆ.
ಮರಡೋನ ದಾಖಲೆಗಳನ್ನು ಸರಿಗಟ್ಟಿದ ಮೆಸ್ಸಿ
ಈ ಪಂದ್ಯದ ಮೂಲಕ ಅರ್ಜೆಂಟೀನದ ಲೆಜೆಂಡ್ರಿ ಫುಟ್ಬಾಲಿಗ ಡಿಯೆಗೊ ಮರಡೋನ ಅವರ 2 ದಾಖಲೆಗಳನ್ನು ಲಯೋನೆಲ್ ಮೆಸ್ಸಿ ಸರಿದೂಗಿಸಿದರು. ಇದು ಅವರ 21ನೇ ವಿಶ್ವಕಪ್ ಪಂದ್ಯ. ಮರಡೋನ ಕೂಡ ಇಷ್ಟೇ ಪಂದ್ಯಗಳನ್ನಾಡಿದ್ದಾರೆ. ಬಳಿಕ ಮರಡೋನ ಅವರ 8 ವಿಶ್ವಕಪ್ ಗೋಲುಗಳ ಅರ್ಜೆಂಟೀನ ದಾಖಲೆಯನ್ನೂ ಮೆಸ್ಸಿ ಸರಿದೂಗಿಸಿದರು. ಮರಡೋನ ಅಗಲಿಕೆಯ 2ನೇ ವರ್ಷದ ವೇಳೆಯೇ (ನ. 25) ಇದು ದಾಖಲಾದದ್ದು ವಿಶೇಷ.
ಫಲಿತಾಂಶ
ಅರ್ಜೆಂಟೀನ: 02
ಮೆಕ್ಸಿಕೊ: 00
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
