ಅರ್ಜುನ್ ತೆಂಡುಲ್ಕರ್ ಪದಾರ್ಪಣೆ
Team Udayavani, Jan 16, 2021, 5:40 AM IST
ಮುಂಬಯಿ: ಪ್ರತಿಭಾನ್ವಿತ ಎಡಗೈ ಪೇಸ್ ಬೌಲರ್, ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅವರ ಪುತ್ರ ಅರ್ಜುನ್ ತೆಂಡುಲ್ಕರ್ ಮೊದಲ ಸಲ ಮುಂಬಯಿ ಸೀನಿಯರ್ ತಂಡದ ಪರ ಕಣಕ್ಕಿಳಿದರು. ಶುಕ್ರವಾರ ಇಲ್ಲಿ ನಡೆದ ಹರ್ಯಾಣ ಎದುರಿನ “ಸಯ್ಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿ’ ಪಂದ್ಯದಲ್ಲಿ ಅರ್ಜುನ್ ಪದಾರ್ಪಣೆಗೈದರು.
ಆದರೆ ಜೂನಿಯರ್ ತೆಂಡುಲ್ಕರ್ ಪಾಲಿಗೆ ಇದೇನೂ ಸ್ಮರಣೀಯ ಪ್ರವೇಶವೆನಿಸಲಿಲ್ಲ. ಕೊನೆಯ ಆಟಗಾರನಾಗಿ ಬ್ಯಾಟಿಂಗಿಗೆ ಇಳಿದ ಅವರಿಗೆ ಒಂದೂ ಎಸೆತ ಎದುರಿಸುವ ಅವಕಾಶ ಸಿಗಲಿಲ್ಲ. ಬಳಿಕ 3 ಓವರ್‌ಗಳ ಬೌಲಿಂಗ್‌ನಲ್ಲಿ 34 ರನ್ನಿತ್ತು ಒಂದು ವಿಕೆಟ್ ಉರುಳಿಸಿದರು. ಮುಂಬಯಿ ಈ ಪಂದ್ಯವನ್ನು 8 ವಿಕೆಟ್‌ಗಳಿಂದ ಸೋತಿತು.
ಮೊದಲು ಬ್ಯಾಟಿಂಗ್ ನಡೆಸಿದ ಮುಂಬಯಿ 19.3 ಓವರ್‌ಗಳಲ್ಲಿ 143ಕ್ಕೆ ಆಲೌಟ್ ಆಯಿತು. ಜವಾಬಿತ್ತ ಹರ್ಯಾಣ 17.4 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 144 ರನ್ ಬಾರಿಸಿ ಗೆದ್ದು ಬಂದಿತು.