ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ : ಅರಿನಾ ಸಬಲೆಂಕಾ ಬಲ ಪ್ರದರ್ಶನ

ಮೊದಲ ಗ್ರ್ಯಾನ್‌ಸ್ಲಾಮ್‌ ಗೆದ್ದ ಬೆಲರೂಸ್‌ ಆಟಗಾರ್ತಿ

Team Udayavani, Jan 29, 2023, 12:10 AM IST

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ : ಅರಿನಾ ಸಬಲೆಂಕಾ ಬಲ ಪ್ರದರ್ಶನ

ಮೆಲ್ಬರ್ನ್: ಬೆಲರೂಸ್‌ನ ಅರಿನಾ ಸಬಲೆಂಕಾ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದು ತಮ್ಮ ಟೆನಿಸ್‌ ಬಾಳ್ವೆಯ ಮಹೋನ್ನತ ಕನಸೊಂದನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾದರು.

ರವಿವಾರ ನಡೆದ ಆಸ್ಟ್ರೇಲಿ ಯನ್‌ ಓಪನ್‌ ವನಿತಾ ಸಿಂಗಲ್ಸ್‌ನಲ್ಲಿ ಅವರು ಕಜಾಕ್‌ಸ್ಥಾನದ ಎಲೆನಾ ರಿಬಾಕಿನಾ ವಿರುದ್ಧ ಮೊದಲ ಸೆಟ್‌ ಕಳೆದುಕೊಂಡೂ ಗೆಲುವಿನ ಮೆಟ್ಟಿ ಲೇರಿ ಟ್ರೋಫಿ ಹಿಡಿದು ಆನಂದಬಾಷ್ಪ ಸುರಿಸಿದರು. ಗೆಲುವಿನ ಅಂತರ 4-6, 6-3, 6-4.

ಇಲ್ಲಿ ರಷ್ಯಾ ಮತ್ತು ಬೆಲರೂಸ್‌ ಆಟಗಾರರಿಗೆ ಯಾವುದೇ ರಾಷ್ಟ್ರೀಯ ಮಾನ್ಯತೆ ನೀಡದ ಕಾರಣ ಇವರೆಲ್ಲ ವೈಯಕ್ತಿಕ ನೆಲೆಯಲ್ಲಿ ಸ್ಪರ್ಧಿಸಿದ್ದರು. ಇದಕ್ಕೆ ಕಾರಣ ರಷ್ಯಾ-ಉಕ್ರೇನ್‌ ಕದನ. ಇದರೊಂದಿಗೆ ಅರಿನಾ ಸಬಲೆಂಕಾ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆದ್ದ ವಿಶ್ವದ ಮೊದಲ “ತಟಸ್ಥ ಆಟಗಾರ್ತಿ’ ಎನಿಸಿದರು.

ಇದು ಅರಿನಾ ಸಬಲೆಂಕಾ ಕಂಡ ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಎಂಬುದು ವಿಶೇಷ. ಪ್ರಥಮ ಪ್ರಯತ್ನದಲ್ಲೇ ಅವರು ಚಾಂಪಿಯನ್‌ ಕಿರೀಟ ಏರಿಸಿಕೊಂಡು “ಮೆಲ್ಬರ್ನ್ ಕ್ವೀನ್‌’ ಆಗಿ ಮೂಡಿಬಂದರು. ಇದಕ್ಕೂ ಮೊದಲು ಆಸ್ಟ್ರೇಲಿಯದಲ್ಲೇ ನಡೆದ ಅಡಿಲೇಡ್‌ ಓಪನ್‌ ಟೂರ್ನಿಯಲ್ಲೂ ಪ್ರಶಸ್ತಿ ಜಯಿಸಿದ್ದರು.

ಸಬಲೆಂಕಾ ಇನ್ನು ನಂ.2
ಇದು ಈ ವರ್ಷ ಅರಿನಾ ಸಬಲೆಂಕಾ ಸಾಧಿ ಸಿದ ಸತತ 11ನೇ ಗೆಲುವು. 2023ರಲ್ಲಿ ಅವರು ಕಳೆದುಕೊಂಡದ್ದು ಈ ಫೈನಲ್‌ನ ಮೊದಲ ಸೆಟ್‌ ಮಾತ್ರ. ಇದರೊಂದಿಗೆ ಅವರ ಸತತ 20 ಸೆಟ್‌ಗಳ ಗೆಲುವಿಗೆ ಬ್ರೇಕ್‌ ಬಿತ್ತಾದರೂ ಟ್ರೋಫಿ ಗೆಲ್ಲಲು ಯಾವುದೇ ಅಡ್ಡಿಯಾಗಲಿಲ್ಲ. ಮೊದಲ ಗ್ರ್ಯಾನ್‌ಸ್ಲಾಮ್‌ ಗೆಲುವಿನೊಂದಿಗೆ ಅವರು ಸೋಮವಾರದ ನೂತನ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ದ್ವಿತೀಯ ಸ್ಥಾನ ಅಲಂಕರಿಸಲಿದ್ದಾರೆ. ಐಗಾ ಸ್ವಿಯಾಟೆಕ್‌ ಅಗ್ರಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ಅಲೆನಾ ರಿಬಾಕಿನಾ ಅವರಿಗೆ ಇದು ದ್ವಿತೀಯ ಗ್ರ್ಯಾನ್‌ಸ್ಲಾಮ್‌ ಫೈನಲ್‌. ಅವರು 2022ರ ವಿಂಬಲ್ಡನ್‌ ಫೈನಲ್‌ಗೆ ಲಗ್ಗೆಯಿರಿಸಿ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದರು.

ನಾಲ್ಕನ್ನೂ ಸೋತ ರಿಬಾಕಿನಾ
“ರಾಡ್‌ ಲೆವರ್‌ ಅರೇನಾ’ದಲ್ಲಿ ಸಬಲೆಂಕಾ- ರಿಬಾಕಿನಾ ನಡುವಿನ ಹೋರಾಟ 2 ಗಂಟೆ, 28 ನಿಮಿಷಗಳ ತನಕ ಸಾಗಿತು. ಇದು ಇವರಿಬ್ಬರ ನಡುವಿನ 4ನೇ ಮುಖಾಮುಖೀ ಆಗಿತ್ತು. ನಾಲ್ಕರಲ್ಲೂ ಸಬಲೆಂಕಾ ಅವರೇ ಬಲ ಪ್ರದರ್ಶನಗೈದು ಗೆದ್ದು ಬಂದರು. ಅತ್ಯಾಕರ್ಷಕ ಹಾಗೂ ಪ್ರಬಲ ಬ್ಯಾಕ್‌ಹ್ಯಾಂಡ್‌ ವಿನ್ನರ್ ಮೂಲಕ ಸಬಲೆಂಕಾ ಗಮನ ಸೆಳೆದರು.

ಡಬಲ್‌ ಏಸ್‌ಗಳೊಂದಿಗೆ ಸಬಲೆಂಕಾ ತಮ್ಮ ಆಟ ಆರಂಭಿಸಿದ್ದರು. ಆದರೆ ರಿಬಾ ಕಿನಾ 3 ಏಸ್‌ ಸಿಡಿಸಿ ತಿರುಗೇಟು ನೀಡಿದರು. ಹೀಗಾಗಿ ಮೊದಲ ಸೆಟ್‌ ರಿಬಾಕಿನಾ ಪಾಲಾಯಿತು. ಇದನ್ನು ಕಳೆದುಕೊಂಡ ಬಳಿಕ ಸಬಲೆಂಕಾ ಹಿಂತಿರುಗಿ ನೋಡಲಿಲ್ಲ.

ಆಸೀಸ್‌ ಜೋಡಿಗೆ
ಡಬಲ್ಸ್‌  ಪ್ರಶಸ್ತಿ
ಪುರುಷರ ಡಬಲ್ಸ್‌ ಪ್ರಶಸ್ತಿ ಆತಿಥೇಯ ದೇಶದ ರಿಂಕಿ ಹಿಜಿಕಾಟ-ಜೇಸನ್‌ ಕ್ಯುಬ್ಲಿರ್‌ ಪಾಲಾಗಿದೆ. ಫೈನಲ್‌ನಲ್ಲಿ ಅವರು ಹ್ಯುಗೊ ನಿಸ್‌-ಜಾನ್‌ ಝೀಲಿನ್‌ಸ್ಕಿ ವಿರುದ್ಧ 6-4, 7-6 (4)ರಿಂದ ಗೆದ್ದು ಬಂದರು. ಇದು ಇವರಿಬ್ಬರಿಗೆ ಒಲಿದ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ. ಕಳೆದ 5 ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಆಸ್ಟ್ರೇಲಿಯದ ಪುರುಷ ಜೋಡಿಗೆ ಒಲಿದ 3ನೇ ಪ್ರಶಸ್ತಿಯೂ ಆಗಿದೆ.

ಟಾಪ್ ನ್ಯೂಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

1-ewewewq

IPL; ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಾರ್ಷ್‌ ಔಟ್‌

Kohli IPL 2024

IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್‌ ನೀಡಿದ ಆರ್‌ಸಿಬಿ!

1-eewqewqe

IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ

IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ

IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.