ಟೆಸ್ಟ್ ನಲ್ಲಿ ಹೊಸ ದಾಖಲೆ: ಕುಂಬ್ಳೆ, ಭಜ್ಜಿ ಸಾಲಿಗೆ ಸೇರಿದ ಅಶ್ವಿನ್

Team Udayavani, Nov 14, 2019, 4:15 PM IST

ಇಂಧೋರ್: ಭಾರತದ ಕೇರಂ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಹೋಳ್ಕರ್ ಮೈದಾನದಲ್ಲಿ ಬಾಂಗ್ಲಾ ನಾಯಕ ಮೊಮಿನುಲ್ ಹಕ್ ವಿಕೆಟ್ ಪಡೆದ ಅಶ್ವಿನ್ ಭಾರತದಲ್ಲಿ 250 ಟೆಸ್ಟ್ ವಿಕೆಟ್ ಪಡೆದ ಸಾಧನೆ ಮಾಡಿದರು.

ಟೆಸ್ಟ್ ಕ್ರಿಕೆಟ್ ನಲ್ಲಿ ತವರಿನಲ್ಲಿ 250ಕ್ಕೂ ಹೆಚ್ಚು ವಿಕೆಟ್ ಪಡೆದ ಮೂರನೇ ಭಾರತೀಯ ಎಂಬ ಖ್ಯಾತಿಗೆ ರವಿ ಅಶ್ವಿನ್ ಪಾತ್ರರಾದರು. ಈ ಮೊದಲು ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಈ ಮೊದಲು 250 ವಿಕೆಟ್ ಸಾಧನೆ ಮಾಡಿದ್ದರು.

ಅನಿಲ್ ಕುಂಬ್ಳೆ ತವರಿನಲ್ಲಿ 350 ಟೆಸ್ಟ್ ವಿಕೆಟ್ ಪಡೆದಿದ್ದರೆ, ಹರ್ಭಜನ್ 265 ವಿಕೆಟ್ ಕಬಳಿಸಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ