Asia Cup Super Fours: ಭಾರತ- ಪಾಕ್ ರೋಚಕ ಪಂದ್ಯಕ್ಕೆ ಮಳೆ ಅಡ್ಡಿ
ಅಬ್ಬರಿಸಿ ಔಟಾದ ರೋಹಿತ್, ಗಿಲ್
Team Udayavani, Sep 10, 2023, 5:04 PM IST
ಕೊಲಂಬೊ: ಇಲ್ಲಿನ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಜಿದ್ದಾಜಿದ್ದಿನ ಏಷ್ಯಾ ಕಪ್ ಸೂಪರ್ ಫೋರ್ಸ್ 3 ನೇ ಪಂದ್ಯಕ್ಕೆ ಮಳೆ ಅಡ್ಡಿಯಾಗಿದೆ.
ಪಾಕಿಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಭರ್ಜರಿ ಆರಂಭ ಒದಗಿಸಿಕೊಟ್ಟರು. ಇಬ್ಬರೂ ಆಕರ್ಷಕ ಅರ್ಧಶತಕ ಗಳಿಸಿ ಔಟಾದರು.
ರೋಹಿತ್ ಶರ್ಮಾ 49 ಎಸೆತಗಳಲ್ಲಿ 56 ರನ್ ಗಳಿಸಿದ್ದ ವೇಳೆ ಶಾದಾಬ್ ಖಾನ್ ಎಸೆದ ಚೆಂಡನ್ನು ಫಹೀಮ್ ಅಶ್ರಫ್ ಕೈಗಿತ್ತು ನಿರ್ಗಮಿಸಿದರು. ಅವರು 6 ಬೌಂಡರಿ ಮತ್ತು 4 ಸಿಕ್ಸರ್ ಬಾರಿಸಿದ್ದರು. ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಶುಭಮಾನ್ ಗಿಲ್ 58 ರನ್ (52ಎಸೆತ, 10 ಬೌಂಡರಿ) ಗಳಿಸಿದ್ದ ವೇಳೆ ಶಾಹೀನ್ ಅಫ್ರಿದಿ ಎಸೆದ ಚೆಂಡನ್ನು ಅಘಾ ಸಲ್ಮಾನ್ ಕೈಗಿತ್ತು ನಿರ್ಗಮಿಸಿದರು.
24.1 ಓವರ್ ಗಳಲ್ಲಿ ಭಾರತ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತ್ತು. ಈ ವೇಳೆ ಭಾರಿ ಮಳೆ ಸುರಿದಿದೆ. ವಿರಾಟ್ ಕೊಹ್ಲಿ 8 ರನ್ ಮತ್ತು ಕೆಎಲ್ ರಾಹುಲ್ 17 ರನ್ ಗಳಿಸಿ ಕ್ರೀಸ್ ನಲ್ಲಿದ್ದರು.