ಏಷ್ಯಾ ಕಪ್‌ ಹಾಕಿ: ಭಾರತಕ್ಕೆ ಕಂಚಿನ ಪದಕ; ದಕ್ಷಿಣ ಕೊರಿಯಾ ಚಾಂಪಿಯನ್‌

Team Udayavani, Jun 1, 2022, 11:59 PM IST

ಏಷ್ಯಾ ಕಪ್‌ ಹಾಕಿ: ಭಾರತಕ್ಕೆ ಕಂಚಿನ ಪದಕ; ದಕ್ಷಿಣ ಕೊರಿಯಾ ಚಾಂಪಿಯನ್‌

ಜಕಾರ್ತಾ: ಜಪಾನ್‌ ವಿರುದ್ಧ 1-0 ಅಂತರದ ಗೆಲುವು ಸಾಧಿಸಿದ ಹಾಲಿ ಚಾಂಪಿಯನ್‌ ಭಾರತ, ಈ ಬಾರಿಯ ಏಷ್ಯಾ ಕಪ್‌ ಹಾಕಿ ಪಂದ್ಯಾವಳಿಯಲ್ಲಿ ಕಂಚಿನ ಪದಕಕ್ಕೆ ಸಮಾಧಾನಪಟ್ಟಿದೆ.

ದಕ್ಷಿಣ ಕೊರಿಯಾ ದಾಖಲೆಯ 5ನೇ ಬಾರಿಗೆ ಚಾಂಪಿಯನ್‌ ಆಗಿ ಮೂಡಿಬಂದಿದೆ. ಫೈನಲ್‌ನಲ್ಲಿ ದಕ್ಷಿಣ ಕೊರಿಯಾ 2-1 ಗೋಲುಗಳಿಂದ ಮಲೇಷ್ಯಾವನ್ನು ಪರಾ ಭವಗೊಳಿಸಿತು.

ದಕ್ಷಿಣ ಕೊರಿಯಾ ಎದುರಿನ ಸೂಪರ್‌-4 ಹಂತದ ನಿರ್ಣಾಯಕ ಪಂದ್ಯವನ್ನು ಗೆಲ್ಲುವಲ್ಲಿ ವಿಫ‌ಲವಾದ ಭಾರತ ಫೈನಲ್‌ ಪ್ರವೇಶದಿಂದ ವಂಚಿತವಾಗಿತ್ತು.

ಬುಧವಾರದ ಪ್ಲೇ ಆಫ್ ಪಂದ್ಯದಲ್ಲಿ ಜಪಾನ್‌ಗೆ ಆಘಾತವಿಕ್ಕಿತು.

ಇದು ಪ್ರಸಕ್ತ ಕೂಟದಲ್ಲಿ ಜಪಾನ್‌ ವಿರುದ್ಧ ಭಾರತಕ್ಕೆ ಒಲಿದ ಸತತ ಎರಡನೇ ಗೆಲುವು. ಲೀಗ್‌ ಹಂತದಲ್ಲಿ ಜಪಾನ್‌ ಭಾರತವನ್ನು ಮಣಿಸಿತ್ತು.

ರಾಜ್‌ಕುಮಾರ್‌ ಗೋಲ್‌
ಪಂದ್ಯದ 7ನೇ ನಿಮಿಷದಲ್ಲಿ ರಾಜ್‌ಕುಮಾರ್‌ ಫೀಲ್ಡ್‌ಗೋಲ್‌ ಮೂಲಕ ಭಾರತಕ್ಕೆ ಮೇಲುಗೈ ಒದಗಿಸಿದರು. ಉತ್ತಮ್‌ ಕುಮಾರ್‌ ಅವರಿಂದ ಪಾಸ್‌ ಪಡೆದ ರಾಜ್‌ಕುಮಾರ್‌, ಜಪಾನಿ ಗೋಲ್‌ಕೀಪರ್‌ ತಕಾಶಿ ಯೊಶಿಕಾವ ಅವರನ್ನು ವಂಚಿಸುವಲ್ಲಿ ಯಶಸ್ವಿಯಾದರು. ಈ ಮುನ್ನಡೆಯನ್ನು ಭಾರತ ಕೊನೆಯ ತನಕವೂ ಕಾಯ್ದುಕೊಂಡು ಬಂತು.

ರಾಜ್‌ಕುಮಾರ್‌ ಗೋಲು ಬಾರಿಸಿದ ಮೂರೇ ನಿಮಿಷದಲ್ಲಿ ಭಾರತಕ್ಕೆ 2 ಪೆನಾಲ್ಟಿ ಕಾರ್ನರ್‌ ಅವಕಾಶ ಸಿಕ್ಕಿತು. ಆದರೆ ಇದನ್ನು ಗೋಲಾಗಿಸುವಲ್ಲಿ ವಿಫ‌ಲವಾಯಿತು.

ಗೋಲ್‌ ಆಘಾತಕ್ಕೆ ಸಿಲುಕಿದ ಬಳಿಕ ಜಪಾನ್‌ ಹೆಚ್ಚು ಆಕ್ರಮಣಕಾರಿ ಪ್ರದರ್ಶನ ನೀಡಿತು. 20ನೇ ನಿಮಿಷದಲ್ಲಿ ಅವರಿಗೂ 2 ಪೆನಾಲ್ಟಿ ಕಾರ್ನರ್‌ ಸಿಕ್ಕಿತು. ಆದರೆ ಗೋಲಾಗಿಸಲು ಸಾಧ್ಯವಾಗಲಿಲ್ಲ.ವಿರಾಮದ ಬಳಿಕ ಜಪಾನ್‌ ಪಡೆ ಭಾರತದ ಮೇಲೆ ಸತತವಾಗಿ ಒತ್ತಡ ಹೇರುತ್ತ ಹೋಯಿತು.

ಪಂದ್ಯವನ್ನು ಸಮಬಲಕ್ಕೆ ತರಲು ಇನ್ನಿಲ್ಲದ ಪ್ರಯತ್ನ ಮಾಡಿತು. ಆದರೆ ಭಾರತದ ರಕ್ಷಣಾ ವಿಭಾಗ ಬಲಿಷ್ಠವಾಗಿ ಗೋಚರಿಸಿತು. ಬೀರೇಂದ್ರ ಲಾಕ್ರಾ ಬಂಡೆಯಂತೆ ನಿಂತು ಭಾರತವನ್ನು ರಕ್ಷಿಸಿದರು. ಇದೇ ರೀತಿ 51ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಾರ್ನರ್‌ ಅವಕಾಶವನ್ನೂ ತಡೆದು ನಿಲ್ಲಿಸಿತು.

ಟಾಪ್ ನ್ಯೂಸ್

7-uv-fusion

UV Fusion: ಭಾವನೆಗಳು ಮಾರಾಟಕ್ಕಿವೆ…

ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

Chikmagalur: ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

T20 World Cup: Explosive batsman Kyle Meyers joins West Indies

T20 World Cup: ವೆಸ್ಟ್ ಇಂಡೀಸ್ ತಂಡ ಸೇರಿದ ಸ್ಪೋಟಕ ಬ್ಯಾಟರ್ ಕೈಲ್ ಮೇಯರ್ಸ್

Rain

Karnataka: ಭಾರಿ ಮಳೆ ಮುನ್ಸೂಚನೆ, ಕರಾವಳಿ ಜಿಲ್ಲೆಗಳಿಗೆ ರೆಡ್‌ ಅಲರ್ಟ್‌

Desi Swara: ವಿಶೇಷ ದಿನಕ್ಕೆ ಸಾಕ್ಷಿಯಾದ ಸ್ವಿಟ್ಜ್ ರ್ ಲ್ಯಾಂಡ್‌…

Desi Swara: ವಿಶೇಷ ದಿನಕ್ಕೆ ಸಾಕ್ಷಿಯಾದ ಸ್ವಿಟ್ಜ್ ರ್ ಲ್ಯಾಂಡ್‌…

Belagavi: ಮಕ್ಕಳ ಮಾರಾಟ ಪ್ರಕರಣದಲ್ಲಿ ರಕ್ಷಿಸಲ್ಪಟ್ಟಿದ್ದ ಒಂದು ತಿಂಗಳ ಹಸುಗೂಸು ಮೃತ್ಯು

Belagavi: ಮಕ್ಕಳ ಮಾರಾಟ ಪ್ರಕರಣದಲ್ಲಿ ರಕ್ಷಿಸಲ್ಪಟ್ಟಿದ್ದ ಒಂದು ತಿಂಗಳ ಹಸುಗೂಸು ಮೃತ್ಯು

ನಿರ್ಮಾಣ ಹಂತದಲ್ಲಿದ್ದ YSRP ಕೇಂದ್ರ ಕಚೇರಿ ಧ್ವಂಸ; ಸೇಡಿನ ರಾಜಕಾರಣ ಮಾಡುತ್ತಿದೆ ಎಂದ ಜಗನ್

ನಿರ್ಮಾಣ ಹಂತದಲ್ಲಿದ್ದ YSRP ಕೇಂದ್ರ ಕಚೇರಿ ಧ್ವಂಸ; NDA ಸೇಡಿನ ರಾಜಕಾರಣ ಮಾಡುತ್ತಿದೆ; ಜಗನ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup: Explosive batsman Kyle Meyers joins West Indies

T20 World Cup: ವೆಸ್ಟ್ ಇಂಡೀಸ್ ತಂಡ ಸೇರಿದ ಸ್ಪೋಟಕ ಬ್ಯಾಟರ್ ಕೈಲ್ ಮೇಯರ್ಸ್

T20 Blast: Marnus Labuschagne takes a brilliant catch; Watch the video

T20 Blast: ಅತ್ಯದ್ಭುತ ಕ್ಯಾಚ್ ಪಡೆದ ಮಾರ್ನಸ್ ಲಬುಶೇನ್; ವಿಡಿಯೋ ನೋಡಿ

1-sadsdas

Super-8; ವಿಂಡೀಸ್‌-ಅಮೆರಿಕ: ಆತಿಥೇಯರ ಸಮರ

1-aaaawee

Super-8; ಭಾರತದ ಭೀತಿಯಲ್ಲಿ ಬಾಂಗ್ಲಾ ಟೈಗರ್

1–dsdasdas

2036ರ ಒಲಿಂಪಿಕ್ಸ್‌ ಗೆ ಕಬಡ್ಡಿ , ಯೋಗ?

MUST WATCH

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

udayavani youtube

ತರಂಗ ಯುಗಾದಿ ಧಮಾಕ-2024 | ಅದೃಷ್ಟಶಾಲಿಗಳ ಆಯ್ಕೆ

udayavani youtube

ಹಾಸ್ಟೆಲ್ ಗಳ ಸಮಸ್ಯೆ ಬಗೆಹರಿಸಿ: ಶಾಸಕ ಗುರುರಾಜ್ ಗಂಟಿಹೊಳೆ ಸೂಚನೆ

udayavani youtube

ಇದು ಭವ್ಯ ಭಾರತದ ಹೆಗ್ಗುರುತು | ನಳಂದ ವಿಶ್ವವಿದ್ಯಾಲಯ

ಹೊಸ ಸೇರ್ಪಡೆ

7-uv-fusion

UV Fusion: ಭಾವನೆಗಳು ಮಾರಾಟಕ್ಕಿವೆ…

Minister Shivraj Thangadagi deeply mourns the demise of Dr. Kamala Hampana

ಡಾ.ಕಮಲಾ ಹಂಪನಾ ನಿಧನಕ್ಕೆ ಸಚಿವ ಶಿವರಾಜ ತಂಗಡಗಿ ತೀವ್ರ ಶೋಕ

6-school

UV Fusion: ಮರಳಿ ಶಾಲೆಗೆ

ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

Chikmagalur: ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

T20 World Cup: Explosive batsman Kyle Meyers joins West Indies

T20 World Cup: ವೆಸ್ಟ್ ಇಂಡೀಸ್ ತಂಡ ಸೇರಿದ ಸ್ಪೋಟಕ ಬ್ಯಾಟರ್ ಕೈಲ್ ಮೇಯರ್ಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.