
Asian Games: ಒಂದೇ ಪಂದ್ಯದಲ್ಲಿ 3 ವಿಶ್ವ ದಾಖಲೆ; T20ಯಲ್ಲಿ ಅತ್ಯಧಿಕ ರನ್ ಬಾರಿಸಿದ ನೇಪಾಳ
ಯುವರಾಜ್,ಮಿಲ್ಲರ್, ರೋಹಿತ್ ದಾಖಲೆ ಮುರಿದ ಕ್ರಿಕೆಟ್ ಶಿಶು
Team Udayavani, Sep 27, 2023, 10:36 AM IST

ಹ್ಯಾಂಗ್‌ಝೂ: ಏಷ್ಯನ್ ಗೇಮ್ಸ್ ನಲ್ಲಿ ನೇಪಾಳ ತಂಡದ ಯುವ ಬ್ಯಾಟರ್ ಗಳು ಒಂದೇ ಪಂದ್ಯದಲ್ಲಿ 3 ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ನೇಪಾಳ ಹಾಗೂ ಮಂಗೋಲಿಯಾ ನಡೆದ ಪಂದ್ಯ ಹಲವು ಕ್ರಿಕೆಟ್ ದಾಖಲೆಗಳನ್ನು ಉಡೀಸ್ ಆಗಿದೆ. ಟಿ-20 ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿ ಕ್ರಿಕೆಟ್ ಲೋಕದ ದಾಖಲೆಯನ್ನು ಬ್ರೇಕ್ ಮಾಡಿದೆ. ನೇಪಾಳ ಬ್ಯಾಟರ್ ಗಳನ್ನು ಮೂರು ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಮಂಗೋಲಿಯಾ ನೇಪಾಳದ ಬ್ಯಾಟರ್ ಗಳ ಅಬ್ಬರಕ್ಕೆ ಅಕ್ಷರಶಃ ಬೆಚ್ಚಿ ಬಿದ್ದಿದ್ದಾರೆ. 19 ವರ್ಷದ ಎಡಗೈ ಬ್ಯಾಟ್ಸ್ ಮನ್ ಕುಶಾಲ್ ಮಲ್ಲ ಕೇವಲ 34 ಎಸೆತಗಳಲ್ಲಿ ಶತಕವನ್ನು ಸಿಡಿಸುವ ಮೂಲಕ ಡೇವಿಡ್ ಮಿಲ್ಲರ್, ರೋಹಿತ್ ಶರ್ಮಾ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದು, ಹೊಸ ವಿಶ್ವದಾಖಲೆಯನ್ನು ಬರೆದಿದ್ದಾರೆ. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದ ಮಲ್ಲ 12 ಸಿಕ್ಸರ್ , 8 ಬೌಂಡರಿಗಳನ್ನು ಸಿಡಿಸಿದ್ದು, 137 ರನ್ ಗಳಿಸಿ ಔಟಾಗದೆ ಉಳಿದಿದ್ದಾರೆ.
ಇನ್ನು 5ನೇ ಕ್ರಮಾಂಕದಲ್ಲಿ ಕ್ರಿಸ್ ಗಿಳಿದ ದೀಪೇಂದ್ರ ಸಿಂಗ್ ಐರೆ ಯುವರಾಜ್ ಸಿಂಗ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಕೇವಲ 9 ಎಸೆತಗಳಲ್ಲಿ ಅರ್ಧ ಶತಕವನ್ನು ಸಿಡಿಸಿದ್ದಾರೆ. ಯುವರಾಜ್ ಸಿಂಗ್ ಅವರು ಇಂಗ್ಲೆಂಡ್ ವಿರುದ್ಧ 2007 ರ ವಿಶ್ವಕಪ್ ನಲ್ಲಿ 12 ಎಸೆತಗಳಲ್ಲಿ ಅರ್ಧ ಶತಕವನ್ನು ಬಾರಿಸಿದ್ದರು.
ಈ ದಾಖಲೆ ಮಾತ್ರವಲ್ಲದೆ ಟಿ-20ಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೂಡ ನೇಪಾಳ ಮಾಡಿದೆ. 3 ವಿಕೆಟ್ ಕಳೆದುಕೊಂಡು 314 ರನ್ ಗಳಿಸುವ ಮೂಲಕ ವಿಶ್ವ ದಾಖಲೆಯನ್ನು ಬರೆದಿದೆ.
ಈ ಹಿಂದೆ ಅಫ್ಘಾನಿಸ್ತಾನ, ಫೆಬ್ರವರಿ 23, 2019 ರಂದು ಐರ್ಲೆಂಡ್ ವಿರುದ್ಧ 3 ವಿಕೆಟ್‌ಗೆ 278 ರನ್ ಗಳಿಸಿತ್ತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

VIDEO; 43 ಎಸೆತದಲ್ಲಿ 193 ರನ್ ಚಚ್ಚಿದ ಬ್ಯಾಟರ್; ಸ್ಟ್ರೈಕ್ ರೇಟ್ ಬರೋಬ್ಬರಿ 449!

Cricket; ಗಂಭೀರ್ ವಿರುದ್ಧ ಆರೋಪ ಮಾಡಿದ ಶ್ರೀಶಾಂತ್ ಗೆ ಲೀಗಲ್ ನೋಟಿಸ್ ನೀಡಿದ ಎಲ್‌ಎಲ್‌ಸಿ

Retirement; ಮೌನ ಮುರಿದ ಸ್ಟೀವನ್ ಸ್ಮಿತ್

South Africa Tour; ಭಾರತೀಯ ತಂಡ ಡರ್ಬಾನ್‌ಗೆ ಆಗಮನ

West Indies ವಿರುದ್ಧ ನಡೆದ ದ್ವಿತೀಯ ಏಕದಿನ : ಇಂಗ್ಲೆಂಡಿಗೆ 6 ವಿಕೆಟ್ ಗೆಲುವು
MUST WATCH
ಹೊಸ ಸೇರ್ಪಡೆ

Kannada Cinema; ‘ಪ್ರೇತ’- ಹರೀಶ್ ರಾಜ್ ಸಿನಿಮಾ ರಿಲೀಸ್ ಗೆ ರೆಡಿ

Support price: ಕೇಂದ್ರ ಬೆಂಬಲ ಬೆಲೆ ಘೋಷಿಸದೆ ಪ್ರೋತ್ಸಾಹಧನ ಸಿಗದು

Lawyer’s Protest: ಗುಲ್ಬರ್ಗದಲ್ಲಿ ವಕೀಲರ ಹತ್ಯೆ; ಸಾಗರದಲ್ಲಿ ಖಂಡನೆ

Superstitious Belief: ಜಿಲ್ಲೆಯಲ್ಲಿ ಮುಂದುವರಿದ ಮೌಢ್ಯಾಚರಣೆ

ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಆಡಳಿತ ವ್ಯವಸ್ಥೆ,ರಾಜಕೀಯ ಪದ್ದತಿ ಅರ್ಥೈಸಿಕೊಳ್ಳಬೇಕು: ಲಾಡ್