Asian Games ಅತ್ಯಾಕರ್ಷಕ ಉದ್ಘಾಟನೆ: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು
Team Udayavani, Sep 23, 2023, 6:57 PM IST
ಹ್ಯಾಂಗ್ಝೂ: ಏಷ್ಯನ್ ಗೇಮ್ಸ್ 19ನೇ ಆವೃತ್ತಿ ಉದ್ಘಾಟನ ಸಮಾರಂಭ ಶನಿವಾರ (ಸೆ. 23) ಅದ್ದೂರಿಯಾಗಿ ನಡೆಯಿತು. ಭಾರತ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ಲವ್ಲಿನಾ ಬೊರ್ಗೊಹೇನ್ ಉದ್ಘಾಟನ ಸಮಾರಂಭದಲ್ಲಿ ಭಾರತದ ಜಂಟಿ ಧ್ವಜಧಾರಿಗಳಾಗಿ ಮಿಂಚಿದರು.
ಬಿಗ್ ಲೋಟಸ್’ ಎಂದು ಕರೆಯಲ್ಪಡುವ, 80 ಸಾವಿರದಷ್ಟು ವೀಕ್ಷಕರ ಸಾಮರ್ಥ್ಯ ಹೊಂದಿರುವ, ಕ್ವಿಂಟಾಂಗ್ ನದಿ ತೀರದ “ಹ್ಯಾಂಗ್ಝೂ ಒಲಿಂಪಿಕ್ ಸ್ಪೋರ್ಟ್ಸ್ ಸೆಂಟರ್ ಸ್ಟೇಡಿಯಂ’ನಲ್ಲಿ ವರ್ಣ ರಂಜಿತ ಸಮಾರಂಭ ಕಣ್ಮನ ಸೆಳೆಯಿತು.
ಭಾರತದ 655 ಕ್ರೀಡಾಪಟುಗಳು ಈ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು, ಇದು ಏಷ್ಯಾಡ್ ಇತಿಹಾಸದಲ್ಲೇ ಭಾರತದ ಗರಿಷ್ಠ ಸಂಖ್ಯೆಯ ಕ್ರೀಡಾಳುಗಳ ದಾಖಲೆಯಾಗಿದೆ.
The energy of भारत #TeamIndia 🇮🇳#IndiaAtAG22 pic.twitter.com/kNycxtaqwC
— Team India (@WeAreTeamIndia) September 23, 2023
ಭಾರತದ ಕ್ರೀಡಾಳುಗಳು ವನಿತೆಯರು ಖಾಕಿ ವಿನ್ಯಾಸದ ಆಕರ್ಷಕ ಸೀರೆ ಮತ್ತು ಪುರುಷರು ಅದೇ ಬಣ್ಣದ ಕುರ್ತಾ ಧರಿಸಿದ್ದರು.
ಉದ್ಘಾಟನಾ ಸಮಾರಂಭ ಕಲಾತ್ಮಕ ಕಾರ್ಯಕ್ರಮದೊಂದಿಗೆ ಪ್ರಾರಂಭವಾಯಿತು.ಪ್ರಮುಖ ಅತಿಥಿಗಳ ನಡುವೆ ಚೀನದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾದ ಹಂಗಾಮಿ ಅಧ್ಯಕ್ಷ ರಣಧೀರ್ ಸಿಂಗ್,ವೇದಿಕೆಯಲ್ಲಿದ್ದರು. ಏಷ್ಯನ್ ಗೇಮ್ಸ್ ಆಯೋಜನಾ ಸಮಿತಿಯ ಅಧ್ಯಕ್ಷ ಗಾವೊ ಜಿಡಾನ್ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…