Asian Games Hockey: ಹಾಲಿ ಚಾಂಪಿಯನ್ ಜಪಾನ್ ವಿರುದ್ಧ ಭಾರತಕ್ಕೆ ಗೆಲುವು
Team Udayavani, Sep 28, 2023, 11:03 PM IST
ಹ್ಯಾಂಗ್ಝೂ: ಯುವ ಸ್ಟ್ರೈಕರ್ ಅಭಿಷೇಕ್ ಅವರ ಅವಳಿ ಗೋಲುಗಳ ಸಾಹಸದಿಂದ ಭಾರತೀಯ ತಂಡವು ಗೇಮ್ಸ್ನ ಹಾಕಿ ಸ್ಫರ್ಧೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜಪಾನ್ ತಂಡವನ್ನು 4-2 ಗೋಲುಗಳಿಂದ ಸೋಲಿಸಿತು. ಇದು ತಂಡದ ಸತತ ಮೂರನೇ ಗೆಲುವು ಆಗಿದ್ದು ಸೆಮಿಫೈನಲಿಗೇರುವ ಆಸೆಯನ್ನು ಗಟ್ಟಿಗೊಳಿಸಿದೆ.
ಅಭಿಷೇಕ್ ಅವರು ಪಂದ್ಯದ 13 ಮತ್ತು 48ನೇ ನಿಮಿಷದಲ್ಲಿ ಅಮೋಘ ಗೋಲನ್ನು ಹೊಡೆ ದರು. 24ನೇ ನಿಮಿಷದಲ್ಲಿ ಮನ್ದೀಪ್ ಸಿಂಗ್ ಮತ್ತು 34ನೇ ನಿಮಿಷದಲ್ಲಿ ಅಮಿತ್ ರೋಹಿದಾಸ್ ಗೋಲನ್ನು ಹೊಡೆದು ಭಾರತದ ದೊಡ್ಡ ಗೆಲುವಿಗೆ ಕಾರಣರಾದರು. ಪಂದ್ಯದ ಕೊನೆ ಐದು ನಿಮಷಗಳಲ್ಲಿ ತಿರುಗೇಟು ನೀಡಲು ಪ್ರಯತ್ನಿಸಿದ ಜಪಾನ್ ಮೂರು ನಿಮಿಷಗಳ ಅಂತರದಲ್ಲಿ ಎರಡು ಗೋಲು ಹೊಡೆಯಿತು. ಈ ಮೂಲಕ ಸೋಲಿನ ಅಂತರವನ್ನು ಕಡಿಮೆ ಮಾಡಲು ಯಶಸ್ವಿಯಾಯಿತು. ಭಾರತ ಶನಿವಾರ ನಡೆಯವ “ಎ’ ಬಣದ ಪಂದ್ಯದಲ್ಲಿ ಪಾಕಿಸ್ಥಾನ ತಂಡವನ್ನು ಎದುರಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್