
ಏಕದಿನ:ಕಿವೀಸ್‌ಗೆ ಕ್ಲೀನ್ ಸ್ವೀಪ್ ಮಾಡಿದ ಆಸೀಸ್: ನಾಯಕ ಆರನ್ ಫಿಂಚ್‌ಗೆ ಸ್ಮರಣೀಯ ವಿದಾಯ
Team Udayavani, Sep 11, 2022, 10:40 PM IST

ಕೇರ್ನ್ಸ್: ಪ್ರವಾಸಿ ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಯನ್ನು ಆಸ್ಟ್ರೇಲಿಯ 3-0 ಅಂತರದಿಂದ ಕ್ಲೀನ್ ಸ್ವೀಪ್ ಆಗಿ ವಶಪಡಿಸಿಕೊಂಡಿದೆ. ರವಿವಾರದ 3ನೇ ಹಾಗೂ ಅಂತಿಮ ಪಂದ್ಯವನ್ನು ಕಾಂಗರೂ ಪಡೆ 25 ರನ್ನುಗಳಿಂದ ಗೆದ್ದಿತು. ಇದರೊಂದಿಗೆ ನಾಯಕ ಆರನ್ ಫಿಂಚ್ ಅವರಿಗೆ ಸ್ಮರಣೀಯ ವಿದಾಯ ಕೋರಿತು.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯ 5 ವಿಕೆಟ್ ನಷ್ಟಕ್ಕೆ 267 ರನ್ ಬಾರಿಸಿದರೆ, ನ್ಯೂಜಿಲ್ಯಾಂಡ್ 49.5 ಓವರ್‌ಗಳಲ್ಲಿ 242ಕ್ಕೆ ಆಲೌಟ್ ಆಯಿತು. ಮೊದಲೆರಡು ಪಂದ್ಯಗಳನ್ನು ಆಸ್ಟ್ರೇಲಿಯ 2 ವಿಕೆಟ್ ಹಾಗೂ 113 ರನ್ನುಗಳಿಂದ ಜಯಿಸಿತ್ತು.
ಸ್ಟೀವನ್ ಸ್ಮಿತ್ ಸೆಂಚುರಿ
ಸ್ಟೀವನ್ ಸ್ಮಿತ್ ಅವರ 12ನೇ ಶತಕ ಆಸೀಸ್ ಸರದಿಯ ಆಕರ್ಷಣೆ ಆಗಿತ್ತು. ಅವರು 131 ಎಸೆತ ಎದುರಿಸಿ 105 ರನ್ ಹೊಡೆದರು (11 ಬೌಂಡರಿ, 1 ಸಿಕ್ಸರ್). ಮಾರ್ನಸ್ ಲಬುಶೇನ್ ಅರ್ಧ ಶತಕ ದಾಖಲಿಸಿದರು (52). 16 ರನ್ನಿಗೆ ಆರಂಭಿಕರಾದ ಆರನ್ ಫಿಂಚ್ (5) ಮತ್ತು ಜೋಶ್ ಇಂಗ್ಲಿಸ್ (10) ಔಟಾದ ಬಳಿಕ ಜತೆಗೂಡಿದ ಸ್ಮಿತ್-ಲಬುಶೇನ್ 3ನೇ ವಿಕೆಟಿಗೆ 118 ರನ್ ಪೇರಿಸಿ ತಂಡಕ್ಕೆ ರಕ್ಷಣೆ ಒದಗಿಸಿದರು. ಅಲೆಕ್ಸ್ ಕ್ಯಾರಿ 25 ಮತ್ತು ಕ್ಯಾಮರಾನ್ ಗ್ರೀನ್ 25 ರನ್ ಮಾಡಿ ಅಜೇಯರಾಗಿ ಉಳಿದರು.
ಚೇಸಿಂಗ್ ವೇಳೆ ನ್ಯೂಜಿಲ್ಯಾಂಡ್ ದೊಡ್ಡ ಜತೆಯಾಟ ನಿಭಾಯಿಸುವಲ್ಲಿ ವಿಫಲವಾಯಿತು. 112 ರನ್ ಆಗುವಷ್ಟರಲ್ಲಿ ನಾಯಕ ಕೇನ್ ವಿಲಿಯಮ್ಸನ್ ಸೇರಿದಂತೆ ಐವರು ಪೆವಿಲಿಯನ್ ಸೇರಿಕೊಂಡರು. ಗ್ಲೆನ್ ಫಿಲಿಪ್ಸ್ (47)-ಜೇಮ್ಸ್ ನೀಶಮ್ (36) ಹೋರಾಟವೊಂದನ್ನು ಸಂಘಟಿಸಿ 61 ರನ್ ಜತೆಯಾಟ ನಿಭಾಯಿಸಿದರೂ ಯಾವುದೇ ಲಾಭವಾಗಲಿಲ್ಲ.
ಆಸೀಸ್ ಪರ ಮಿಚೆಲ್ ಸ್ಟಾರ್ಕ್ 3, ಕ್ಯಾಮರಾನ್ ಗ್ರೀನ್ ಮತ್ತು ಸೀನ್ ಅಬೋಟ್ ತಲಾ 2 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯ-5 ವಿಕೆಟಿಗೆ 267 (ಸ್ಮಿತ್ 105, ಲಬುಶೇನ್ 52, ಕ್ಯಾರಿ ಔಟಾಗದೆ 42, ಬೌಲ್ಟ 25ಕ್ಕೆ 2). ನ್ಯೂಜಿಲ್ಯಾಂಡ್-49.5 ಓವರ್‌ಗಳಲ್ಲಿ 242 (ಫಿಲಿಪ್ಸ್ 47, ನೀಶಮ್ 36, ಅಲೆನ್ 35, ಸ್ಟಾರ್ಕ್ 60ಕ್ಕೆ 3, ಗ್ರೀನ್ 25ಕ್ಕೆ 2, ಅಬೋಟ್ 31ಕ್ಕೆ 2).
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಸ್ಟೀವನ್ ಸ್ಮಿತ್.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan
