ಬಟ್ಲರ್‌ ಸಾಹಸ; ಇಂಗ್ಲೆಂಡಿಗೆ ಸರಣಿ

Team Udayavani, Jan 22, 2018, 12:57 PM IST

22-33.jpg

ಸಿಡ್ನಿ: ಜೋಸ್‌ ಬಟ್ಲರ್‌ ಅವರ ಸಾಹಸದ ಶತಕದಿಂದಾಗಿ ಪ್ರವಾಸಿ ಇಂಗ್ಲೆಂಡ್‌ ತಂಡವು ಆಸ್ಟ್ರೇಲಿಯ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿ ಸರಣಿ ತನ್ನದಾಗಿಸಿಕೊಂಡಿದೆ. 

ಒಂದು ಹಂತದಲ್ಲಿ 189 ರನ್ನಿಗೆ 6 ವಿಕೆಟ್‌ ಕಳೆದುಕೊಂಡು ಒದ್ದಾಡುತ್ತಿದ್ದ ಇಂಗ್ಲೆಂಡ್‌ ತಂಡವನ್ನು ಜೋಸ್‌ ಬಟ್ಲರ್‌ ಆಧರಿಸಿದರು. ಅವರ ಐದನೇ ಏಕದಿನ ಶತಕ ಮತ್ತು ಮುರಿಯದ ಏಳನೇ ವಿಕೆಟಿಗೆ ಕ್ರಿಸ್‌ ವೋಕ್ಸ್‌ ಜತೆ 113 ರನ್‌  ಪೇರಿಸಿದ್ದರಿಂದ ಇಂಗ್ಲೆಂಡ್‌ 6 ವಿಕೆಟಿಗೆ 302 ರನ್ನುಗಳ ಉತ್ತಮ ಮೊತ್ತ ದಾಖಲಿಸುವಂತಾಯಿತು.

ಇದಕ್ಕುತ್ತರವಾಗಿ ಉತ್ತಮ ಹೋರಾಟ ಸಂಘಟಿಸಿದ ಆಸ್ಟ್ರೇಲಿಯ ಗೆಲುವಿಗಾಗಿ ಶಕ್ತಿಮೀರಿ ಪ್ರಯತ್ನಿಸಿತು. ಆದರೆ ಬಟ್ಲರ್‌ ಅವರ ಎರಡು ಉತ್ತಮ ಕ್ಯಾಚ್‌ನಿಂದಾಗಿ ಒತ್ತಡಕ್ಕೆ ಸಿಲುಕಿದ ಆಸ್ಟ್ರೇಲಿಯ ನಿಗದಿತ ಓವರ್‌ ಮುಗಿದಾಗ 6 ವಿಕೆಟಿಗೆ 286 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಈ ಗೆಲುವಿನಿಂದ ಇಂಗ್ಲೆಂಡ್‌ ಐದು ಪಂದ್ಯಗಳ ಸರಣಿಯಲ್ಲಿ 3-0 ಮುನ್ನಡೆ ಸಾಧಿಸಿ ಏಕದಿನ ಸರಣಿಯಲ್ಲಿ ತನ್ನದಾಗಿಸಿಕೊಂಡಿತು. ಆ್ಯಶಸ್‌ ಟೆಸ್ಟ್‌ ಸರಣಿ ಕಳೆದುಕೊಂಡ ಬಳಿಕ ಇಂಗ್ಲೆಂಡ್‌ ಏಕದಿನ ಸರಣಿಯಲ್ಲಿ ಭರ್ಜರಿ ಆಟವಾಡಿ ಆಸ್ಟ್ರೇಲಿಯಕ್ಕೆ ತಿರುಗೇಟು ನೀಡುವಲ್ಲಿ ಯಶಸ್ವಿಯಾಗಿದೆ.

ಆತಿಥೇಯರ ಬಿಗು ದಾಳಿಯಿಂದ ಇಂಗ್ಲೆಂಡ್‌ ಆರಂಭದಲ್ಲಿ ಎಚ್ಚರಿಕೆಯಿಂದ ಆಟವಾಡಿತು. ಹಾಗಾಗಿ ಭಾರೀ ರನ್‌ ಬರಲಿಲ್ಲ. ಮೊದಲ 10 ಓವರ್‌ ಮುಗಿದಾಗ ತಂಡ 2 ವಿಕೆಟ್‌ ಕಳೆದುಕೊಂಡಿದ್ದು 47 ರನ್‌ ಗಳಿಸಿತ್ತು. ಇದೇ ರೀತಿಯಲ್ಲಿ ತಂಡದ ರನ್‌ ವೇಗ ಆರನೇ ವಿಕೆಟ್‌ ಪತನವಾಗುವ ತನಕ ಸಾಗಿತ್ತು. ಆದರೆ ಅಂತಿಮ 10 ಓವರ್‌ಗಳಲ್ಲಿ ಇಂಗ್ಲೆಂಡ್‌ ಸ್ಫೋಟಕ ಆಟದ ಪ್ರದರ್ಶನ ನೀಡಿತ್ತು.

ಬಟ್ಲರ್‌ ಶತಕ
39ನೇ ಓವರಿನಲ್ಲಿ ಬಟ್ಲರ್‌ ಅವರನ್ನು ಸೇರಿಕೊಂಡ ಕ್ರಿಸ್‌ ವೋಕ್ಸ್‌  ರನ್‌ವೇಗ ಹೆಚ್ಚಿಸಲು ಮುಂದಾದರು. ಬಟ್ಲರ್‌ ಮತ್ತು ವೋಕ್ಸ್‌ ಆಬಳಿಕ ಬಿರುಸಿನ ಆಟವಾಡಿದ್ದರಿಂದ ತಂಡ ಮುರಿಯದ ಏಳನೇ ವಿಕೆಟಿಗೆ 113 ರನ್‌ ಪೇರಿಸುವಂತಾಯಿತು. ಹೀಗಾಗಿ ತಂಡದ ಮೊತ್ತ 300ರ ಗಡಿ ದಾಟುವಂತಾಯಿತು. ಇನ್ನಿಂಗ್ಸ್‌ನ ಅಂತಿಮ ಎಸೆತದಲ್ಲಿ ಬಟ್ಲರ್‌ ಶತಕ ಸಿಡಿಸಿ ಸಂಭ್ರಮಿಸಿದರು. ಬಟ್ಲರ್‌ 97 ರನ್‌ ಗಳಿಸಿದ ವೇಳೆ ಸ್ಟಾರ್ಕ್‌ ಅವರ ಮನವಿ ಮೇರೆಗೆ ಅಂಪಾಯರ್‌ ಕ್ರಿಸ್‌ ಗಫಾನಿ ಔಟೆಂದು ತೀರ್ಪು ನೀಡಿದರೂ ರೀಪ್ಲೆಯಲ್ಲಿ ಅವರು ನಿರಾಕರಿಸಲ್ಪಟ್ಟಿತ್ತು. ಆಬಳಿಕ ಬಟ್ಲರ್‌ ಶತಕ ಪೂರ್ತಿಗೊಳಿಸಿದರು. 83 ಎಸೆತಗಳನ್ನು ಎದುರಿಸಿದ ಅವರು 6 ಬೌಂಡರಿ ಮತ್ತು 4 ಸಿಕ್ಸರ್‌ ನೆರವಿನಿಂದ 100 ರನ್‌ ಹೊಡೆದು ಅಜೇಯರಾಗಿ ಉಳಿದರು. ವೋಕ್ಸ್‌ 36 ಎಸೆತಗಳಿಂದ 53 ರನ್‌ ಹೊಡೆದು ಗಮನ ಸೆಳೆದರು.

ಗೆಲ್ಲಲು 303 ರನ್‌ ಗುರಿ
ಗೆಲ್ಲಲು 303 ರನ್‌ ಗಳಿಸುವ ಕಠಿನ ಗುರಿ ಪಡೆದ ಆಸ್ಟ್ರೇಲಿಯ ಆರಂಭದಲ್ಲಿಯೇ ಎಡವಿತು. ಆದರೆ ಫಿಂಚ್‌, ಸ್ಟೀವನ್‌ ಸ್ಮಿತ್‌, ಮಾರ್ಷ್‌ ಮತ್ತು ಸ್ಟಾಯಿನಿಸ್‌ ಅವರ ಉತ್ತಮ ಹೋರಾಟದಿಂದ ಗೆಲುವು ದಾಖಲಿಸುವ ಪ್ರಯತ್ನ ನಡೆಸಿತು. ಆದರೆ ಅದ್ಭುತ ಕ್ಯಾಚ್‌ ಮೂಲಕ ಸ್ಮಿತ್‌ ಅವರ ವಿಕೆಟ್‌ ಪಡೆಯಲು ಬಟ್ಲರ್‌ ಯಶಸ್ವಿಯಾಗಿ ಆತಿಥೇಯರಿಗೆ ದೊಡ್ಡ ಹೊಡೆತ ನೀಡಿದರು. ಅಂತಿಮವಾಗಿ ತಂಡ 286 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.

ಸಂಕ್ಷಿಪ್ತ  ಸ್ಕೋರು: ಇಂಗ್ಲೆಂಡ್‌ 6 ವಿಕೆಟಿಗೆ 302 (ಬೇರ್‌ಸ್ಟೋ 39, ರೂಟ್‌ 27, ಮಾರ್ಗನ್‌ 41, ಬಟ್ಲರ್‌ 100 ಔಟಾಗದೆ, ವೋಕ್ಸ್‌ 53 ಔಟಾಗದೆ, ಹ್ಯಾಝೆಲ್‌ವುಡ್‌ 58ಕ್ಕೆ 2);
ಆಸ್ಟ್ರೇಲಿಯ 6 ವಿಕೆಟಿಗೆ 286 (ಫಿಂಚ್‌ 62, ಸ್ಟೀವನ್‌ ಸ್ಮಿತ್‌ 45, ಮಾರ್ಷ್‌ 55, ಸ್ಟಾಯಿನಿಸ್‌ 56, ಪೈನ್‌ 31 ಔಟಾಗದೆ, ವುಡ್‌ 46ಕ್ಕೆ 2, ವೋಕ್ಸ್‌ 57ಕ್ಕೆ 2, ರಶೀದ್‌ 51ಕ್ಕೆ 2).

ಟಾಪ್ ನ್ಯೂಸ್

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

CSKvsLSG: ಶತಕ ಸಿಡಿಸಿದ ಚೆನ್ನೈನ ಮೊದಲ ನಾಯಕ ಗಾಯಕ್ವಾಡ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.