ಮತ್ತೆ ಆಸೀಸ್‌ ಜಯ; ಭಾರತಕ್ಕೆ ಸರಣಿ ಸೋಲು

Team Udayavani, Mar 16, 2018, 9:25 AM IST

PERRY-14-3.jpg

ವಡೋದರ: ಆಸ್ಟ್ರೇಲಿಯ ತಂಡದ ಅಮೋಘ ಆಟಕ್ಕೆ ಭಾರತೀಯ ಮಹಿಳೆಯರು ಮತ್ತೂಮ್ಮೆ ತಲೆಬಾಗಿದ್ದಾರೆ. ಇಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಆತಿಥೇಯ ಭಾರತ 60 ರನ್‌ಗಳಿಂದ ಸೋತು 3 ಪಂದ್ಯಗಳ ಏಕದಿನ ಸರಣಿಯನ್ನು ಕಳೆದುಕೊಂಡಿತು. ಎರಡೂ ಪಂದ್ಯ ಗೆದ್ದ ಕಾಂಗರೂ ಪಡೆ 2-0 ಮುನ್ನಡೆಯಲ್ಲಿದೆ. ಕೊನೆಯ ಪಂದ್ಯ ಮಾ.18ರಂದು ನಡೆಯಲಿದೆ. ಮೊದಲು ಬ್ಯಾಟಿಂಗ್‌ ಮಾಡಿದ ಆಸ್ಟ್ರೇಲಿಯ 9 ವಿಕೆಟ್‌ ಕಳೆದುಕೊಂಡು 287 ರನ್‌ ಬಾರಿಸಿತು. ಈ ಮೊತ್ತವನ್ನು ಬೆನ್ನುಹತ್ತಿದ ಭಾರತ 49.2 ಓವರ್‌ಗಳಲ್ಲಿ 227 ರನ್ನಿಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು.

ದೊಡ್ಡ ಮೊತ್ತವನ್ನು ಬೆನ್ನು ಹತ್ತಿದ ಭಾರತಕ್ಕೆ ಆರಂಭಿಕ ಆಟಗಾರ್ತಿಯರಾದ ಸ್ಮತಿ ಮಂಧನಾ ಮತ್ತು ಪೂನಂ ರಾವತ್‌ 17.5 ಓವರ್‌ಗಳಲ್ಲಿ 88 ರನ್‌ ಕಲೆಹಾಕಿ ಉತ್ತಮ ಅಡಿಪಾಯ ಹಾಕಿದ್ದರು. ದುರದೃಷ್ಟವಶಾತ್‌ ಈ ಹಂತದಲ್ಲಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದ ಮಂಧನಾ ವಿಕೆಟ್‌ ಉರುಳಿತು. ಮಂಧನಾ 53 ಎಸೆತದಲ್ಲಿ 67 ರನ್‌ ಬಾರಿಸಿದರು. ಅವರ ಆಟದಲ್ಲಿ 12 ಬೌಂಡರಿ, ಒಂದು ಸಿಕ್ಸರ್‌ ಸೇರಿತ್ತು.

11 ರನ್‌ ಆಗುವಷ್ಟರಲ್ಲಿ ಪೂನಂ (27) ಪೆವಿಲಿಯನ್‌ ಸೇರಿದರು. ಅನಂತರ ಭಾರತದ ಕುಸಿತ ತೀವ್ರಗೊಳ್ಳತೊಡಗಿತು. ಸ್ಫೋಟಕ ಆಟಗಾರ್ತಿ ಯರಾದ ದೀಪ್ತಿ ಶರ್ಮ (26), ಮಿಥಾಲಿ ರಾಜ್‌ (15), ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (17) ಅಲ್ಪ ಮೊತ್ತಕ್ಕೆ ವಿಕೆಟ್‌ ಕಳೆದುಕೊಂಡದ್ದು ಭಾರತಕ್ಕೆ ಮುಳುವಾಯಿತು. ಇದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೊನೆಯ ಹಂತದಲ್ಲಿ ಬೌಲರ್‌ಗಳಾದ ಪೂಜಾ ವಸ್ತ್ರಾಕರ್‌ (30), ಶಿಖಾ ಪಾಂಡೆ (15) ಸಣ್ಣ ಮಟ್ಟದ ಹೋರಾಟ ನೀಡಿದರು. ಇದರಿಂದ ಯಾವುದೇ ಲಾಭವಾಗಲಿಲ್ಲ. ಆಸ್ಟ್ರೇಲಿಯ ಪರ ಸ್ಪಿನ್ನರ್‌ ಜೆಸ್‌ ಜೊನಾಸೆನ್‌ 3 ವಿಕೆಟ್‌, ಎಲಿಸ್‌ ಪೆರ್ರಿ ಮತ್ತು ಅಮಂಡಾ ವೆಲ್ಲಿಂಗ್ರಟನ್‌ ತಲಾ 2 ವಿಕೆಟ್‌ ಕಿತ್ತರು.

ಆಸ್ಟ್ರೇಲಿಯ ದೊಡ್ಡ ಮೊತ್ತ
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾ ಆಟಗಾರ್ತಿಯರು ದಿಟ್ಟ ಬ್ಯಾಟಿಂಗ್‌ ಮೂಲಕ ಆತಿಥೇಯ ಬೌಲರ್‌ಗಳ ಬೆವರಿಳಿಸಿದರು. ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದ ಆರಂಭಿಕ ಆಟಗಾರ್ತಿ ನಿಕೋಲ್‌ ಬೋಲ್ಟನ್‌ 84 ರನ್‌ ಹೊಡೆದು ಮತ್ತೆ ಆತಿಥೇಯರಿಗೆ ಸಿಂಹಸ್ವಪ್ನರಾದರು. 88 ಎಸೆತಗಳನ್ನು ಎದುರಿಸಿದ ಬೋಲ್ಟನ್‌ 12 ಬೌಂಡರಿ ಸಿಡಿಸಿದರು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಒಲಿದು ಬಂತು. ಎಲಿಸ್‌ ಪೆರ್ರಿ (ಅಜೇಯ 70), ಬೇತ್‌ ಮೂನಿ (56) ಭರ್ಜರಿ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. ಭಾರತದ ಪರ ಶಿಖಾ ಪಾಂಡೆ 3 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌
ಆಸ್ಟ್ರೇಲಿಯ-9 ವಿಕೆಟಿಗೆ 287 (ಬೋಲ್ಟನ್‌ 84, ಪೆರ್ರಿ ಔಟಾಗದೆ 70, ಮೂನಿ 56, ಶಿಖಾ ಪಾಂಡೆ 61ಕ್ಕೆ 3, ಪೂನಂ ಯಾದವ್‌ 52ಕ್ಕೆ 2). ಭಾರತ-49.2 ಓವರ್‌ಗಳಲ್ಲಿ 227 (ಮಂಧನಾ 67, ಪೂಜಾ 30, ಪೂನಂ 27, ಜೊನಾಸೆನ್‌ 51ಕ್ಕೆ 3, ಪೆರ್ರಿ 41ಕ್ಕೆ 2). ಪಂದ್ಯಶ್ರೇಷ್ಠ: ನಿಕೋಲ್‌ ಬೋಲ್ಟನ್‌.

ಟಾಪ್ ನ್ಯೂಸ್

Manipur: ಬಂಡುಕೋರರ ಗುಂಡಿನ ದಾಳಿ: ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ

Manipur: ಬಂಡುಕೋರರ ಗುಂಡಿನ ದಾಳಿ: ಓರ್ವ ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

4-mangaluru

Mangaluru: ನೈತಿಕ ಪೊಲೀಸ್ ಗಿರಿ ತಡೆಗೆ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು ಸೂಚನೆ

asia cup 2023

Hybrid Model ಒಪ್ಪದ ಎಸಿಸಿ: ಏಷ್ಯಾ ಕಪ್ ಆಡದಿರಲು ಪಾಕಿಸ್ತಾನ ಚಿಂತನೆ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಫಹಾದ್‌ – ಸ್ವರಾ ಭಾಸ್ಕರ್‌ ದಂಪತಿ: Baby Bump ಫೋಟೋ ವೈರಲ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಫಹಾದ್‌ – ಸ್ವರಾ ಭಾಸ್ಕರ್‌ ದಂಪತಿ: Baby Bump ಫೋಟೋ ವೈರಲ್

pavitra lokesh and naresh starer matte maduve releasing on June 9

ಮದುವೆ ಓಡಾಟದಲ್ಲಿ ಪವಿತ್ರ-ನರೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

asia cup 2023

Hybrid Model ಒಪ್ಪದ ಎಸಿಸಿ: ಏಷ್ಯಾ ಕಪ್ ಆಡದಿರಲು ಪಾಕಿಸ್ತಾನ ಚಿಂತನೆ

WTC Final 2023: ತೆಂಡೂಲ್ಕರ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

WTC Final 2023: ತೆಂಡೂಲ್ಕರ್, ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ

French Open 2023: ಜೆಬ್ಯುರ್‌-ಹದಾದ್‌ ಮಯಾ ಮುಖಾಮುಖಿ

French Open 2023: ಜೆಬ್ಯುರ್‌-ಹದಾದ್‌ ಮಯಾ ಮುಖಾಮುಖಿ

WTC Final 2023;ಹೇಗಿದ್ದೀತು ಓವಲ್‌ ಟ್ರ್ಯಾಕ್‌? ಟೆಸ್ಟ್‌  ಫೈನಲ್‌ ಗೂ  ಮುನ್ನ ಒಂದು ಕುತೂಹಲ

WTC Final;ಹೇಗಿದ್ದೀತು ಓವಲ್‌ ಟ್ರ್ಯಾಕ್‌? ಟೆಸ್ಟ್‌  ಫೈನಲ್‌ ಗೂ ಮುನ್ನ ಒಂದು ಕುತೂಹಲ

Singapore Open Super 750; ಸಿಂಗಾಪುರದಲ್ಲಿ ಮಿಂಚಬೇಕಿದೆ ಸಿಂಧು

Singapore Open Super 750; ಸಿಂಗಾಪುರದಲ್ಲಿ ಮಿಂಚಬೇಕಿದೆ ಸಿಂಧು

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ

Manipur: ಬಂಡುಕೋರರ ಗುಂಡಿನ ದಾಳಿ: ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ

Manipur: ಬಂಡುಕೋರರ ಗುಂಡಿನ ದಾಳಿ: ಓರ್ವ ಬಿಎಸ್ಎಫ್ ಯೋಧ ಹುತಾತ್ಮ, ಇಬ್ಬರು ಯೋಧರಿಗೆ ಗಾಯ

ನಿರ್ವಹಣೆ ಕೊರತೆ: ಸೊರಗುತ್ತಿದೆ ಮಾಸ್ತಿ ಗ್ರಂಥಾಲಯ

ನಿರ್ವಹಣೆ ಕೊರತೆ: ಸೊರಗುತ್ತಿದೆ ಮಾಸ್ತಿ ಗ್ರಂಥಾಲಯ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಚಂಡಮಾರುತ: ಕರಾವಳಿಯಲ್ಲಿ ಭಾರಿ ಮಳೆ ಸಾಧ್ಯತೆ

ಹಾಲಿನ ದರ ಕಡಿತಕ್ಕೆ ಕಿಡಿ

ಹಾಲಿನ ದರ ಕಡಿತಕ್ಕೆ ಕಿಡಿ

tdy-13ಹಾಲು-ನೀರು ಹಗರಣ ಸಿಬಿಐ ತನಿಖೆಗೆ?

ಹಾಲು-ನೀರು ಹಗರಣ ಸಿಬಿಐ ತನಿಖೆಗೆ?