ಆಸ್ಟ್ರೇಲಿಯನ್ ಓಪನ್: ಸೆಮಿಫೈನಲ್‌ಗೆ ಕ್ಷಣಗಣನೆ ಆರಂಭ
Team Udayavani, Jan 25, 2023, 11:19 PM IST
ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯ ಸೆಮಿಫೈನಲ್ ಕ್ಷಣಗಣನೆ ಮೊದಲ್ಗೊಂಡಿದೆ. ಗುರುವಾರ ವನಿತಾ ವಿಭಾಗದ ಮುಖಾಮುಖಿ ಏರ್ಪಡಲಿದ್ದು, ಶುಕ್ರವಾರ ಪುರುಷರ ಸಿಂಗಲ್ಸ್ ಸ್ಪರ್ಧೆ ಸಾಗಲಿದೆ.
ವನಿತೆಯರ ಮೊದಲ ಸೆಮಿಫೈನಲ್ ಎಲೆನಾ ರಿಬಾಮಿನಾ- ವಿಕ್ಟೋರಿಯಾ ಅಜರೆಂಕಾ ನಡುವೆ, ದ್ವಿತೀಯ ಪಂದ್ಯ ಲಿನೆಟ್-ಅರಿನಾ ಸಬಲೆಂಕಾ ನಡುವೆ ನಡೆಯಲಿದೆ.
ಪುರುಷರ ವಿಭಾಗದಲ್ಲಿ ಕರೆನ್ ಕಶನೋವ್-ಸ್ಟೆಫನಸ್ ಸಿಸಿಪಸ್ ಎದುರಾಗಲಿದ್ದಾರೆ. ಇನ್ನೊಂದು ಸ್ಪರ್ಧೆ ನೊವಾಕ್ ಜೊಕೋವಿಕ್-ಟಾಮಿ ಪೌಲ್ ನಡುವೆ ಏರ್ಪಡಲಿದೆ.
ಜೊಕೋಗೆ ಸುಲಭ ಗೆಲುವು
4ನೇ ಶ್ರೇಯಾಂಕದ ನೊವಾಕ್ ಜೊಕೋವಿಕ್ ರಷ್ಯಾದ 5ನೇ ಶ್ರೇಯಾಂ ಕಿತ ಟೆನಿಸಿಗ ಆ್ಯಂಡ್ರೆ ರುಬ್ಲೇವ್ ಅವರನ್ನು 6-1, 6-2, 6-4 ನೇರ ಸೆಟ್‌ಗಳಿಂದ ಪರಾಭವ ಗೊಳಿಸಿದರು. ಇನ್ನೆರಡು ಪಂದ್ಯಗಳನ್ನು ಗೆದ್ದರೆ ಜೊಕೋವಿಕ್ “ಮೆಲ್ಬರ್ನ್ ಪಾರ್ಕ್’ನಲ್ಲಿ 10ನೇ ಟ್ರೋಫಿ ಎತ್ತಲಿದ್ದಾರೆ.
ಜೊಕೋವಿಕ್ ಎದುರಾಳಿ ಆಗಿರುವ ಅಮೆರಿಕದ ಟಾಮಿ ಪೌಲ್ ಅವರಿಗೆ ಇದು ಮೊದಲ ಆಸ್ಟ್ರೇಲಿಯನ್ ಓಪನ್ ಸೆಮಿಫೈನಲ್. ಆಲ್ ಅಮೆರಿಕನ್ ಸೆಣಸಾಟದಲ್ಲಿ ಅವರು ಬೆನ್ ಶೆಲ್ಟನ್ ವಿರುದ್ಧ 7-6 (6), 6-3, 5-7, 6-4 ಅಂತರದಿಂದ ಗೆದ್ದು ಬಂದರು.
ವನಿತಾ ವಿಭಾಗ
ವನಿತಾ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ವಿಕ್ಟೋರಿಯಾ ಅಜರೆಂಕಾ ಮತ್ತು ಎಲೆನಾ ರಿಬಾಕಿನಾ ಗೆದ್ದು ಬಂದರು.
ಎರಡು ಬಾರಿಯ ಚಾಂಪಿಯನ್ ಅಜರೆಂಕಾ ಅಮೆರಿಕದ ಜೆಸ್ಸಿಕಾ ಪೆಗುಲಾ ಅವರನ್ನು 6-4, 6-1ರಿಂದ ಮಣಿಸಿದರು. ಎಲೆನಾ ರಿಬಾಕಿನಾ 6-2, 6-4ರಿಂದ ಜೆಲೆನಾ ಒಸ್ಟಾಪೆಂಕೊ ಆಟಕ್ಕೆ ತೆರೆ ಎಳೆದರು.
ಪೋಲೆಂಡ್‌ನ ಮಾಗಾ ಲಿನೆಟ್ ತಮ್ಮ ಕನಸಿನ ಓಟವನ್ನು ಮುಂದು ವರಿಸಿ ಮೊದಲ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್‌ಗೆ ಲಗ್ಗೆ ಇರಿಸಿದರು. ಅವರು ಮಾಜಿ ನಂ.1 ಆಟಗಾರ್ತಿ ಕ್ಯಾರೋಲಿನಾ ಪ್ಲಿಸ್ಕೋವಾಗೆ 6-3, 7-5 ನೇರ ಸೆಟ್‌ಗಳ ಆಘಾತವಿಕ್ಕಿದರು. ಇದು ಪ್ಲಿಸ್ಕೋವಾ ವಿರುದ್ಧ ಲಿನೆಟ್ ಸಾಧಿಸಿದ ಸತತ 2ನೇ ಗೆಲುವು. ಮೊದಲ ಜಯ ಕಳೆದ ವರ್ಷದ “ಬಿಲ್ಲಿ ಜೀನ್ ಕಪ್’ನಲ್ಲಿ ಒಲಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಹೊಸ ಸೇರ್ಪಡೆ
ಮಹಿಳಾ ಅಧಿಕಾರಿಯಿಂದ ಡಾಕ್ಟರ್ ಗೆ ಮಸಾಜ್! ಫೋಟೊ- ವಿಡಿಯೋ ವೈರಲ್
ದುರಂತ ಅಂತ್ಯ:ನ್ಯೂಮೋನಿಯಾಕ್ಕೆ ಕಾದ ರಾಡ್ ನಿಂದ 3ತಿಂಗಳ ಹಸುಳೆಗೆ 51 ಬಾರಿ ಚುಚ್ಚಿ ಚಿಕಿತ್ಸೆ
ಬೆಂಗಳೂರಲ್ಲಿ ಮಲಯಾಳಂನ “ಕೋಲ್ಡ್ ಕೇಸ್” ಸಿನೆಮಾ ಹೋಲುವ ಪ್ರಕರಣ
ಹಿಟ್ & ರನ್’ಗೆ ಇಬ್ಬರ ಬಲಿ ಪ್ರಕರಣ! ‘ಮ್ಯಾಡ್ ಇನ್ ಕುಡ್ಲ’ ಕಾಮಿಡಿಯನ್ ಅರ್ಪಿತ್ ಬಂಧನ
ನಾದಿನಿಗೆ ದೈಹಿಕ, ವರದಕ್ಷಿಣೆ ಕಿರುಕುಳ: ಡ್ಯಾನ್ಸರ್ ಸ್ವಪ್ನ ಚೌಧರಿ, ಕುಟುಂಬದ ವಿರುದ್ಧ FIR