
ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿ: ಭಾರತ ತಂಡದಲ್ಲಿ ಉಮ್ರಾನ್ ಮಲಿಕ್
ಕೊಹ್ಲಿ, ರೋಹಿತ್ ಶರ್ಮಾ ಸೇರಿ ಹಿರಿಯರಿಗೆ ವಿಶ್ರಾಂತಿ
Team Udayavani, May 22, 2022, 5:57 PM IST

ಮುಂಬಯಿ: ಬಿಸಿಸಿಐ ಭಾನುವಾರ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಗೆ ತಂಡವನ್ನು ಪ್ರಕಟಿಸಿದ್ದು, ಉಮ್ರಾನ್ ಮಲಿಕ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಕೆ ಎಲ್ ರಾಹುಲ್ ಅವರು ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ.
ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ಶಮಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಉತ್ತಮ ಪ್ರದರ್ಶನ ನೀಡಿದ ನಂತರ ದಿನೇಶ್ ಕಾರ್ತಿಕ್ ಟಿ 20 ತಂಡಕ್ಕೆ ಮರಳಿದ್ದಾರೆ. ಐಪಿಎಲ್ 15 ರ ಲೀಗ್ ಹಂತದಲ್ಲಿ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಕುಲದೀಪ್ ಯಾದವ್ ಸ್ವಲ್ಪ ಸಮಯದ ನಂತರ ತಂಡಕ್ಕೆ ಮರಳಿದ್ದಾರೆ.
ಈ ಐಪಿಎಲ್ ನಲ್ಲಿ ಉಮ್ರಾನ್ ಮಲಿಕ್ 13 ಪಂದ್ಯಗಳಿಂದ 21 ವಿಕೆಟ್‌ಗಳನ್ನು ಪಡೆದು ಎಲ್ಲರ ಗಮನ ಸೆಳೆದಿದ್ದಾರೆ.
ತಂಡ ಇಂತಿದೆ: ಕೆಎಲ್ ರಾಹುಲ್ (ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ( ಉಪನಾಯಕ ,ವಿ.ಕೀ) ದಿನೇಶ್ ಕಾರ್ತಿಕ್ (ವಿ.ಕೀ), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ವೈ ಚಾಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್ , ಆರ್ ಬಿಷ್ಣೋಯ್, ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್
ಪಂದ್ಯದ ವೇಳಾಪಟ್ಟಿ
ಜೂನ್ 09 ರಂದು ದೆಹಲಿಯಲ್ಲಿ ಸರಣಿಯ ಮೊದಲ ಟಿ 20 ಪಂದ್ಯ ನಡೆಯಲಿದೆ. 12 ರಂದು ಕಟಕ್ ನಲ್ಲಿ 2 ನೇ ಪಂದ್ಯ, 14 ವಿಶಾಖಪಟ್ಟಣಂ ನಲ್ಲಿ ಮೂರನೇ ಪಂದ್ಯ, 17 ರಂದು ರಾಜಕೋಟ್ ನಲ್ಲಿ ನಾಲ್ಕನೇ ಪಂದ್ಯ ಮತ್ತು 19 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಸರಣಿಯ ಕೊನೆಯ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಸಂಜೆ 7 ಗಂಟೆಯಿಂದ ಆರಂಭವಾಗಲಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Games :ನೀರಜ್ ಚೋಪ್ರಾಗೆ ನಿರೀಕ್ಷಿತ ಚಿನ್ನ; ಪದಕಪಟ್ಟಿಯಲ್ಲಿ ಇತಿಹಾಸ

Pakistan: ನಮ್ಮ ನಿಧಾನಗತಿಯ ಫೀಲ್ಡಿಂಗ್‌ಗೆ ʼಹೈದರಾಬಾದ್ ಬಿರಿಯಾನಿʼ ಕಾರಣವೆಂದ ಪಾಕ್ ಆಟಗಾರ

Asian Games: ಚಿನ್ನಕ್ಕೆ ಗುರಿಯಿಟ್ಟ ಭಾರತದ ಆರ್ಚರಿ ತಂಡ; ಏಷ್ಯನ್ ಗೇಮ್ಸ್ ನಲ್ಲಿ ದಾಖಲೆ

Boxing: ಒಲಿಂಪಿಕ್ಸ್ ಅರ್ಹತೆ ಗಳಿಸಿದ ಲವ್ಲೀನಾ

World Cup: 44 ವರ್ಷಗಳ ಬಳಿಕ ವಿಶ್ವಕಪ್ ಗೆದ್ದ ಇಂಗ್ಲೆಂಡ್
MUST WATCH
ಹೊಸ ಸೇರ್ಪಡೆ

Bantwal; ಕಾರು ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ

Sirsi ; ಆಕಸ್ಮಿಕವಾಗಿ ಬಾವಿಗೆ ಬಿದ್ದು 2 ವರ್ಷದ ಮಗು ಮೃತ್ಯು

Delhi; ಹುಡುಕಾಟದ ನಂತರ ಆಪ್ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿದ ಇಡಿ

Mumbaiಮೂರು ಪಕ್ಷಗಳ ಸರಕಾರವಿದ್ದರೂ ಬಿಜೆಪಿಯ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ: ಫಡ್ನವೀಸ್

Asian Games :ನೀರಜ್ ಚೋಪ್ರಾಗೆ ನಿರೀಕ್ಷಿತ ಚಿನ್ನ; ಪದಕಪಟ್ಟಿಯಲ್ಲಿ ಇತಿಹಾಸ