ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರಿಗೆ ಭರ್ಜರಿ ವೇತನ
Team Udayavani, Aug 10, 2018, 6:10 AM IST
ಮುಂಬಯಿ: ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರ ವೇತನದಲ್ಲಿ ಭರ್ಜರಿ ಏರಿಕಾಯಾಗಿದೆ. ಬಿಸಿಸಿಐ ಆಡಳಿತಾಧಿಕಾರಿಗಳ ಅನುಮೋದನೆಯಂತೆ ಆಯ್ಕೆ ಸಮಿತಿ ಸದಸ್ಯರಿಗೆ 30 ಲಕ್ಷ ರೂ. ವೇತನ ಏರಿಕೆಯಾಗಿದ್ದರೆ, ಮುಖ್ಯಸ್ಥರಿಗೆ 20 ಲಕ್ಷ ರೂ. ಏರಿಕೆಯಾಗಿದೆ.
ಸದ್ಯ ಬಿಸಿಸಿಐ ಆಯ್ಕೆ ಸಮಿತಿ ಸದಸ್ಯರ ಸಂಖ್ಯೆ 3 ಮಾತ್ರ. ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ವೇತನ ಈಗ ವರ್ಷಕ್ಕೆ ಒಂದು ಕೋಟಿ ರೂ.ಗೆ ಮುಟ್ಟಿದೆ. ದೇವಾಂಗ್ ಗಾಂಧಿ ಹಾಗೂ ಸರಣ್ದೀಪ್ ಸಿಂಗ್ ವೇತನ 90 ಲಕ್ಷ ರೂ.ಗೇರಿದೆ. ಈ ಹಿಂದೆ ಬಿಸಿಸಿಐ ಆಯ್ಕೆ ಸಮಿತಿಯಲ್ಲಿ ಐವರು ಸದಸ್ಯರಿದ್ದರು. ಲೋಧಾ ಶಿಫಾರಸಿನ ಅನಂತರ ಮೂರಕ್ಕಿಳಿದಿದೆ.
ಇದೇ ವೇಳೆ ಕಿರಿಯರ ತಂಡದ ಆಯ್ಕೆ ಸಮಿತಿ ಹಾಗೂ ಮಹಿಳಾ ತಂಡದ ಆಯ್ಕೆ ಸಮಿತಿಯ ಸಂಭಾವನೆಯಲ್ಲೂ ಏರಿಕೆ ಮಾಡಲಾಗಿದೆ. ಕಿರಿಯರ ಆಯ್ಕೆ ಸಮಿತಿ ಸದಸ್ಯರ ವೇತನ 60 ಲಕ್ಷ ರೂ.ಗೇರಿದ್ದರೆ, ಅದರ ಮುಖ್ಯಸ್ಥರ ವೇತನ 65 ಲಕ್ಷ ರೂ. ಗೇರಿದೆ. ಮಹಿಳಾ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರ ವೇತನ 30 ಲಕ್ಷ ರೂ.ಗೆ ಮುಟ್ಟಿದೆ. ಸದಸ್ಯರ ವೇತನ 25 ಲಕ್ಷ ರೂ. ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್ ವಿರುದ್ಧ ಮುಖಾಮುಖಿ
RCB ; ರವಿವಾರ ಕೆಕೆಆರ್ ವಿರುದ್ಧ ಈಡನ್ನಲ್ಲಿ ಗೋ ಗ್ರೀನ್ ಗೇಮ್
Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್, ಸುಜೀತ್