
ಡಿ.23ರಂದು ಕೊಚ್ಚಿಯಲ್ಲಿ ಐಪಿಎಲ್ ಹರಾಜು: ಬಿಸಿಸಿಐ
Team Udayavani, Nov 9, 2022, 9:07 PM IST

ನವದೆಹಲಿ: ಮುಂದಿನ ವರ್ಷದ ಐಪಿಎಲ್‌ಗಾಗಿ ಡಿ.23ರಂದು ಕೊಚ್ಚಿಯಲ್ಲಿ ಹರಾಜು ನಡೆಯಲಿದೆ ಎಂಬುದಾಗಿ ಬಿಸಿಸಿಐ ಪ್ರಕಟಿಸಿದೆ.
ಬೆಂಗಳೂರು, ನವದೆಹಲಿ, ಮುಂಬೈ, ಹೈದರಾಬಾದ್ ಮತ್ತು ಟರ್ಕಿಯ ಇಸ್ತಾನ್‌ಬುಲ್ ಕೂಡ ರೇಸ್‌ನಲ್ಲಿದ್ದವು. ಆದರೆ ಅಂತಿಮವಾಗಿ ಕೇರಳದ ಬಂದರು ನಗರಿ ಕೊಚ್ಚಿಯನ್ನು ಬಿಸಿಸಿಐ ಆಯ್ಕೆ ಮಾಡಿತು. ಇದು ಸಣ್ಣ ಮಟ್ಟದ ಹರಾಜು ಪ್ರಕ್ರಿಯೆಯಾಗಿದೆ.
ನ.15ರೊಳಗೆ ತಾವು ಉಳಿಸಿಕೊಳ್ಳುವ ಹಾಗೂ ಬಿಡುಗಡೆಗೊಳಿಸುವ ಕ್ರಿಕೆಟಿಗರ ಪಟ್ಟಿಯನ್ನು ಸಲ್ಲಿಸಬೇಕೆಂದು ಈಗಾಗಲೇ ಎಲ್ಲ ಫ್ರಾಂಚೈಸಿಗಳಿಗೆ ಸೂಚಿಸಲಾಗಿದೆ.
ಫ್ರಾಂಚೈಸಿಗಳು ಹರಾಜಿಗೆ ಬಳಸುವ ಮೊತ್ತದ ಕುರಿತು ಈಗಾಗಲೇ ಸ್ಪಷ್ಟ ಮಾಹಿತಿ ನೀಡಲಾಗಿದೆ. ಫ್ರಾಂಚೈಸಿಗಳ ಬಳಿ ಉಳಿದಿರುವ ಹಣಕ್ಕೆ ಹೆಚ್ಚುವರಿಯಾಗಿ 5 ಕೋಟಿ ರೂ. ನೀಡಲಾಗುವುದು.
ಟಾಪ್ ನ್ಯೂಸ್
