ಪ್ರೊ ಕಬಡ್ಡಿ: ಡೆಲ್ಲಿ – ಬಂಗಾಲ ಪಂದ್ಯ ಟೈ
Team Udayavani, Dec 8, 2022, 10:21 PM IST
ಹೈದರಾಬಾದ್: ಗುರುವಾರ ನಡೆದ ದಬಾಂಗ್ ಡೆಲ್ಲಿ-ಬಂಗಾಲ ವಾರಿಯರ್ಸ್ ನಡುವಣ ಪ್ರೊ ಕಬಡ್ಡಿ ಪಂದ್ಯ ರೋಚಕವಾಗಿ ಟೈಗೊಂಡಿದೆ.
ಪಂದ್ಯ ಮುಗಿದಾಗ ಇತ್ತಂಡಗಳು ತಲಾ 46 ಅಂಕ ಗಳಿಸಿದ್ದವು. ಡೆಲ್ಲಿ ಪರ ನಾಯಕ ನವೀನ್ ಕುಮಾರ್ ಮಿನುಗಿದರು. ಅವರು 26 ದಾಳಿಗಳಲ್ಲಿ 16 ಅಂಕ ಪಡೆದರು. ದೀಪಕ್ ರಕ್ಷಣೆಯಲ್ಲಿ ಮಿನುಗಿದರು. ಎದುರಾಳಿಯನ್ನು ಕೆಡವಿಕೊಳ್ಳಲು ನಡೆಸಿದ 6 ಯತ್ನಗಳಲ್ಲಿ 3 ಬಾರಿ ಯಶಸ್ವಿಯಾಗಿ 5 ಅಂಕ ಪಡೆದರು.
ಬಂಗಾಲ ಪರ ಮಣಿಂದರ್ ಸಿಂಗ್ ಅದ್ಭುತ ದಾಳಿ ನಡೆಸಿದರು. 21 ಯತ್ನಗಳಲ್ಲಿ 18 ಅಂಕ ಪಡೆದರು. ಇನ್ನೊಬ್ಬ ದಾಳಿಗಾರ ಶ್ರೀಕಾಂತ್ ಜಾಧವ್ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.