ನಾಲ್ಕನೇ ಟೆಸ್ಟ್ ಪಂದ್ಯ: ಟೀಂ ಇಂಡಿಯಾದಲ್ಲಿ ಇಬ್ಬರು ಹೊಸಮುಖ, ಮಯಾಂಕ್ ಗೂ ಅವಕಾಶ
ಬ್ರಿಸ್ಬೇನ್ ನಲ್ಲಿ ಆರಂಭಿಕ ಮುನ್ನಡೆ ಪಡೆದ ರಹಾನೆ ಪಡೆ
Team Udayavani, Jan 15, 2021, 7:52 AM IST
ಬ್ರಿಸ್ಬೇನ್: ಗಾಯಾಳುಗಳಿಂದ ತತ್ತರಿಸಿ ಹೋಗಿರುವ ಟೀಂ ಇಂಡಿಯಾ ಬಾರ್ಡರ್- ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಎರಡು ಹೊಸಮುಖಗಳೊಂದಿಗೆ ಕಣಕ್ಕಿಳಿದಿದೆ. ಹೊಸ ಸೆನ್ಸೇಶನ್ ನಟರಾಜನ್ ಮತ್ತು ವಾಷಿಂಗ್ಟನ್ ಸುಂದರ್ ಇಂದು ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರು.
ಗಾಬ್ಬಾ ಅಂಗಳದಲ್ಲಿ ಟಾಸ್ ಗೆದ್ದ ಆಸೀಸ್ ನಾಯಕ ಟಿಮ್ ಪೇನ್ ಬ್ಯಾಟಿಂಗ್ ಆಯ್ಕೆ ಮಾಡಿದರು. ಭಾರತದ ಅನನುಭವಿ ಬೌಲಿಂಗ್ ಎದುರು ರನ್ ರಾಶಿ ಹಾಕುವ ಪೇನ್ ಲೆಕ್ಕಾಚಾರವನ್ನು ಭಾರತದ ಬೌಲರ್ ಗಳನ್ನು ಆರಂಭದಲ್ಲೇ ತಲೆಕೆಳಗು ಮಾಡಿದರು. ಸತತ ವೈಫಲ್ಯ ಅನುಭವಿಸಿರುವ ವಾರ್ನರ್ ಮೊದಲ ಓವರ್ ನಲ್ಲೇ ಔಟಾದರು. ಮಾರ್ನಸ್ ಹ್ಯಾರಿಸ್ ಕೂಡಾ ಐದು ರನ್ ಗಳಿಸಿ ಔಟಾದರು.
ನಂತರ ಒಂದಾದ ಲಬುಶೇನ್ ಮತ್ತು ಸ್ಟೀವ್ ಸ್ಮಿತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೊದಲ ಸೆಶನ್ ಅಂತ್ಯಕ್ಕೆ ಆಸೀಸ್ ಎರಡು ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದೆ. ಸ್ಮಿತ್ 30 ರನ್ ಮತ್ತು ಲಬುಶೇನ್ 19 ರನ್ ಗಳಿಸಿ ಆಡುತ್ತಿದ್ದಾರೆ.
ಈ ಪಂದ್ಯಕ್ಕಾಗಿ ಭಾರತ ನಾಲ್ಕು ಬದಲಾವಣೆ ಮಾಡಿಕೊಂಡಿತು. ಗಾಯದಿಂದ ಹೊರಬಿದ್ದಿರುವ ವಿಹಾರಿ, ಜಡೇಜಾ, ಅಶ್ವಿನ್, ಬುಮ್ರಾ ಬದಲಿಗೆ ಮಯಾಂಕ್ ಅಗರ್ವಾಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್ ಮತ್ತು ಟಿ. ನಟರಾಜನ್ ಈ ಪಂದ್ಯದಲ್ಲಿ ಅವಕಾಶ ಪಡೆದರು.