ಸಿಂಧು, ಶ್ರೀಕಾಂತ್‌ ಗೆಲುವಿನ ಆರಂಭ

ವರ್ಲ್ಡ್ ಟೂರ್‌ ಬ್ಯಾಡ್ಮಿಂಟನ್‌ ಫೈನಲ್ಸ್‌

Team Udayavani, Dec 2, 2021, 5:00 AM IST

ಸಿಂಧು, ಶ್ರೀಕಾಂತ್‌ ಗೆಲುವಿನ ಆರಂಭ

ಬಾಲಿ (ಇಂಡೋನೇಶ್ಯ): “ಬಿಡಬ್ಲ್ಯುಎಫ್ ವರ್ಲ್ಡ್ ಟೂರ್‌ ಫೈನಲ್ಸ್‌ ‘ನಲ್ಲಿ ಪಿ.ವಿ. ಸಿಂಧು ಮತ್ತು ಕಿಡಂಬಿ ಶ್ರೀಕಾಂತ್‌ ಗೆಲುವಿನ ಆರಂಭ ಪಡೆದರು.

ಆರಂಭದಲ್ಲಿ ಕೆ. ಶ್ರೀಕಾಂತ್‌ ಫ್ರಾನ್ಸ್‌ನ ಟೋಮ ಪೊಪೋವ್‌ ಅವರನ್ನು ನೇರ ಗೇಮ್‌ಗಳಲ್ಲಿ ಮಣಿಸಿದರು. ಬಳಿಕ ಪಿ.ವಿ. ಸಿಂಧು ಡೆನ್ಮಾರ್ಕ್‌ನ ಲಿನ್‌ ಕ್ರಿಸ್ಟೋಫ್ಸೆನ್‌ ಅವರಿಗೆ ಆಘಾತವಿಕ್ಕಿದರು.

ಬುಧವಾರದ “ಬಿ’ ವಿಭಾಗದ 42 ನಿಮಿಷಗಳ ಕಾದಾಟದಲ್ಲಿ ಶ್ರೀಕಾಂತ್‌ 21-14, 21-16 ಅಂತರದಿಂದ ಪೊಪೋವ್‌ ಅವರನ್ನು ಪರಾಭವಗೊಳಿಸಿದರು.

ವಿಶ್ವದ ನಂ.33 ಆಟಗಾರನೆದುರು ವಿಶ್ವದ ಮಾಜಿ ನಂ.1 ಶಟ್ಲರ್‌ ಶ್ರೀಕಾಂತ್‌ ಎಚ್ಚರಿಕೆಯಿಂದಲೇ ಆಟ ಆರಂಭಿಸಿದರು. ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾದರು. ದ್ವಿತೀಯ ಗೇಮ್‌ನ ಆರಂಭದಲ್ಲಿ 1-4ರ ಹಿನ್ನಡೆಯಲ್ಲಿದ್ದರೂ ಅಷ್ಟೇ ಬೇಗ ಲಯ ಸಾಧಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ:ಕತ್ರಿನಾ-ವಿಕ್ಕಿ ಮದುವೆ ಆಹ್ವಾನಿತರಿಗೆ ಇದೆಯಂತೆ ಟಫ್ ರೂಲ್ಸ್‌

ಥಾಯ್ಲೆಂಡಿನ 3 ಬಾರಿಯ ಜೂನಿಯರ್‌ ವಿಶ್ವ ಚಾಂಪಿಯನ್‌ ವಿತಿದ್ಸರಣ್‌ ಅವರನ್ನು ಕೆ. ಶ್ರೀಕಾಂತ್‌ ಮುಂದಿನ ಪಂದ್ಯದಲ್ಲಿ ಎದುರಿಸಲಿದ್ದಾರೆ.

“ಎ’ ವಿಭಾಗದಲ್ಲಿ ಕಾಣಿಸಿಕೊಂಡಿರುವ ಪಿ.ವಿ. ಸಿಂಧು ಡೆನ್ಮಾರ್ಕ್‌ನ ಲಿನ್‌ ಕ್ರಿಸ್ಟೋಫ್ಸೆನ್‌ ಅವರನ್ನು 21-14, 21-16 ಅಂತರದಿಂದ ಪರಾಭವಗೊಳಿಸಿದರು. 2018ರ ಚಾಂಪಿಯನ್‌ ಆಗಿರುವ ಸಿಂಧು ಅವರ ಮುಂದಿನ ಎದುರಾಳಿ ಜರ್ಮನಿಯ ವ್ಯೋನ್‌ ಲೀ.

ಅಶ್ವಿ‌ನಿ-ಸಿಕ್ಕಿ ಪರಾಭವ
ವನಿತಾ ಡಬಲ್ಸ್‌ ವಿಭಾಗದ ಮೊದಲ ಪಂದ್ಯದಲ್ಲಿ ಅಶ್ವಿ‌ನಿ ಪೊನ್ನಪ್ಪ-ಎನ್‌. ಸಿಕ್ಕಿ ರೆಡ್ಡಿ ಪರಾಭವಗೊಂಡರು. “ಬಿ’ ವಿಭಾಗದ ಮುಖಾಮುಖೀಯಲ್ಲಿ ಭಾರತೀಯ ಜೋಡಿಯನ್ನು ಜಪಾನಿನ ದ್ವಿತೀಯ ಶ್ರೇಯಾಂಕಿತ ಜೋಡಿಯಾದ ನಾಮಿ ಮತ್ಸುಯಾಮಾ-ಚಿಹರು ಶಿದಾ 21-14, 21-18 ಅಂತರದಿಂದ ಹಿಮ್ಮೆಟ್ಟಿಸಿದರು. “ಎ’ ವಿಭಾಗದ ಪುರುಷರ ಡಬಲ್ಸ್‌ನ ಮೊದಲ ಪಂದ್ಯದಲ್ಲಿ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ ಅವರನ್ನು ಡೆನ್ಮಾರ್ಕ್‌ನ ಕಿಮ್‌ ಆ್ಯಸ್ಟ್ರಪ್‌-ಆ್ಯಂಡರ್ ರಾಸು¾ಸೆನ್‌ 21-16, 21-5 ಅಂತರದಿಂದ ಪರಾಭವಗೊಳಿಸಿದರು.

 

ಟಾಪ್ ನ್ಯೂಸ್

ಪಂದ್ಯ ಗೆಲ್ಲಲು ವಿಚಿತ್ರ ನಿರ್ಧಾರ ಕೈಗೊಂಡ ಕೋಚ್: ಇದು ತಪ್ಪು ಎಂದ ನೆಟ್ಟಿಗರು! ವಿಡಿಯೋ ನೋಡಿ

ಪಂದ್ಯ ಗೆಲ್ಲಲು ವಿಚಿತ್ರ ನಿರ್ಧಾರ ಕೈಗೊಂಡ ಕೋಚ್: ಇದು ತಪ್ಪು ಎಂದ ನೆಟ್ಟಿಗರು! ವಿಡಿಯೋ ನೋಡಿ

shivaraj kumar

ಶಕ್ತಿಧಾಮದ ಮಕ್ಕಳೊಂದಿಗೆ ಶಿವಣ್ಣ ಗಣರಾಜ್ಯೋತ್ಸವ ಆಚರಣೆ

ಮೂವರಿಂದ ಪದ್ಮ ಪ್ರಶಸ್ತಿ ತಿರಸ್ಕಾರ; ಗುಲಾಂ ನಬಿ ಆಜಾದ್‌ಗೆ ಪದ್ಮ ಗೌರವ

ಮೂವರಿಂದ ಪದ್ಮ ಪ್ರಶಸ್ತಿ ತಿರಸ್ಕಾರ; ಗುಲಾಂ ನಬಿ ಆಜಾದ್‌ಗೆ ಪದ್ಮ ಗೌರವ

ನನಗೆ ಸಚಿವ ಸ್ಥಾನ ಬೇಕೇ ಬೇಕು: ಪಟ್ಟು ಹಿಡಿದ ಉಪ ಸ್ಪೀಕರ್ ಆನಂದ್ ಮಾಮನಿ

ನನಗೆ ಸಚಿವ ಸ್ಥಾನ ಬೇಕೇ ಬೇಕು: ಪಟ್ಟು ಹಿಡಿದ ಉಪ ಸ್ಪೀಕರ್ ಆನಂದ್ ಮಾಮನಿ

CM @ 2

ನಾಳೆ‌ ಬೊಮ್ಮಾಯಿ ಸರಕಾರಕ್ಕೆ 6 ತಿಂಗಳು : ಮುಂದೆ ಸಾಲು ಸಾಲು ಸವಾಲು

siddaramaiah

ಸಿದ್ದುಗೆ ಹೈಕಮಾಂಡ್ ಟಕ್ಕರ್ : ಮೇಲ್ಮನೆ ವಿಪಕ್ಷ ನಾಯಕತ್ವದ ಹಿಂದೆ ಲೆಕ್ಕಾಚಾರ

Gurgaon man arrested bought 5 Mercedes cars in 3 Years

ಹೀಗೊಂದು ಹಗರಣ: ಮೂರು ವರ್ಷದಲ್ಲಿ ಐದು ಮರ್ಸಿಡಿಸ್ ಕಾರು ಖರೀದಿ ಮಾಡಿದಾತನ ಬಂಧನ!



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಂದ್ಯ ಗೆಲ್ಲಲು ವಿಚಿತ್ರ ನಿರ್ಧಾರ ಕೈಗೊಂಡ ಕೋಚ್: ಇದು ತಪ್ಪು ಎಂದ ನೆಟ್ಟಿಗರು! ವಿಡಿಯೋ ನೋಡಿ

ಪಂದ್ಯ ಗೆಲ್ಲಲು ವಿಚಿತ್ರ ನಿರ್ಧಾರ ಕೈಗೊಂಡ ಕೋಚ್: ಇದು ತಪ್ಪು ಎಂದ ನೆಟ್ಟಿಗರು! ವಿಡಿಯೋ ನೋಡಿ

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ವೆಸ್ಟ್ ಇಂಡೀಸ್ ಸರಣಿ: ಹಲವು ಅಚ್ಚರಿಗಳೊಂದಿಗೆ ತಂಡ ಪ್ರಕಟ; ರೋಹಿತ್ ನಾಯಕ

ಆಟಗಾರನಾಗಿ ಕಣಕ್ಕಿಳಿದ ಕ್ರಿಕೆಟ್‌ ಕೋಚ್‌!

ಆಟಗಾರನಾಗಿ ಕಣಕ್ಕಿಳಿದ ಕ್ರಿಕೆಟ್‌ ಕೋಚ್‌!

ಐಪಿಎಲ್‌ ನಡೆಸಲು ದಕ್ಷಿಣ ಆಫ್ರಿಕಾ ಭರ್ಜರಿ ಸೌಲಭ್ಯ!

ಐಪಿಎಲ್‌ ನಡೆಸಲು ದಕ್ಷಿಣ ಆಫ್ರಿಕಾ ಭರ್ಜರಿ ಸೌಲಭ್ಯ!

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

ಬೆಂಗಳೂರು ಟಾರ್ಪೆಡಾಸ್‌ಗೆ ರಂಜಿತ್‌ ಸಿಂಗ್‌ ನಾಯಕ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಪಂದ್ಯ ಗೆಲ್ಲಲು ವಿಚಿತ್ರ ನಿರ್ಧಾರ ಕೈಗೊಂಡ ಕೋಚ್: ಇದು ತಪ್ಪು ಎಂದ ನೆಟ್ಟಿಗರು! ವಿಡಿಯೋ ನೋಡಿ

ಪಂದ್ಯ ಗೆಲ್ಲಲು ವಿಚಿತ್ರ ನಿರ್ಧಾರ ಕೈಗೊಂಡ ಕೋಚ್: ಇದು ತಪ್ಪು ಎಂದ ನೆಟ್ಟಿಗರು! ವಿಡಿಯೋ ನೋಡಿ

11edigas

ಗಂಗಾವತಿ: ಈಡಿಗ ಸಮಾಜದಿಂದ ಪ್ರತಿ ಊರಲ್ಲೂ ನಾರಾಯಣ ಗುರುಗಳ ಪೂಜೆ, ಗೌರವ

accident

ಬೀಚ್‌ನಲ್ಲಿ ಸ್ಟ್ರೀಟ್ ಫುಡ್ ಅಂಗಡಿಗೆ ನುಗ್ಗಿದ ಕಾರು: ಮಹಿಳೆ ಸಾವು, ಐವರು ಗಂಭೀರ

10center

ಗ್ರಾಮ ಒನ್‌ ಕೇಂದ್ರದ ಲಾಭ ಪಡೆಯಿರಿ: ಶಾಸಕ ಖಾಶೆಂಪುರ

9muncipal

ಪುರಸಭೆ ಆಡಳಿತ ವಿರುದ್ಧ ಶಾಸಕರ ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.