ಕೊಹ್ಲಿಯನ್ನು ಜೋಕ್ ಎಂದ ಡಕೆಟ್ಗೆ ಅವಮಾನ
Team Udayavani, Mar 11, 2019, 1:44 AM IST
ನವದೆಹಲಿ: ಸಮಕಾಲೀನ ಕ್ರಿಕೆಟ್ ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯನ್ನು ಜೋಕ್ ಎಂದ ಇಂಗ್ಲೆಂಡ್ನ ಟೆಸ್ಟ್ ಬ್ಯಾಟ್ಸ್ಮನ್ ಬೆನ್ ಡಕೆಟ್ ವಿರುದ್ಧ ಅಭಿಮಾನಿಗಳು ತಿರುಗಿಬಿದ್ದಿದ್ದಾರೆ. ಹೆಸರಿನಲ್ಲೇ ಡಕ್ ಹೊಂದಿರುವ ಈ ಕ್ರಿಕೆಟಿಗನಿಗೆ 66 ಅಂತಾರಾಷ್ಟ್ರೀಯ ಶತಕ ಬಾರಿಸಿರುವ ಕೊಹ್ಲಿ ವಿರುದ್ಧ ಮಾತನಾಡಲು ಯಾವ ಯೋಗ್ಯತೆಯಿದೆ ಎಂದು ಹರಿಹಾಯ್ದಿದ್ದಾರೆ. ಕ್ರಿಕೆಟ್ ಶೌಟ್ಸ್ ಎಂಬ ಅಭಿಮಾನಿಗಳ ವೆಬ್ ಸೈಟ್ ತನ್ನ ಟ್ವೀಟರ್ ಖಾತೆಯನ್ನು ಕೊಹ್ಲಿ ಬಗ್ಗೆ ಪ್ರತಿಕ್ರಿಯೆ ಆಹ್ವಾನಿಸಿತ್ತು. ಅದಕ್ಕಾಗಿ ವಿರಾಟ್ ಕೊಹ್ಲಿ ಅಂದರೆ ಎಂದು ಕೇಳಿ ಪ್ರತಿಕ್ರಿಯೆಗೆ ಉಳಿದ ಜಾಗವನ್ನು ಖಾಲಿ ಬಿಟ್ಟಿತ್ತು. ಅದಕ್ಕೆ ಡಕೆಟ್, ಜೋಕ್ ಎಂದು ಪ್ರತಿಕ್ರಿಯಿಸಿದ್ದರು. ಅವರು ಯಾವ ಅರ್ಥದಲ್ಲಿ ಹೀಗೆ ಹೇಳಿದ್ದಾರೆನ್ನುವುದು ಖಚಿತವಾಗಿಲ್ಲ. ಆದರೆ ಅಭಿಮಾನಿಗಳು ಅವರಿಗೆ ಚೆನ್ನಾಗಿ ನೀರಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್