
ಐಪಿಎಲ್ ನಿಂದ ತಪ್ಪಿಸಿಕೊಳ್ಳುತ್ತಾರಾ ಕೋಟಿ ವೀರ?: ಸ್ಪಷ್ಟನೆ ನೀಡಿದ ಗ್ರೀನ್
Team Udayavani, Jan 6, 2023, 8:35 AM IST

ಸಿಡ್ನಿ: ಆಸೀಸ್ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ಐಪಿಎಲ್‌ನಲ್ಲಿ ಬೌಲಿಂಗ್ ಮಾಡಲು ಸಾಧ್ಯವಿಲ್ಲ ಎಂಬ ವದಂತಿಗಳು ಹಬ್ಬಿವೆ. ಅದನ್ನು ಸ್ವತಃ ಗ್ರೀನ್ ನಿರಾಕರಿಸಿದ್ದಾರೆ. ನಾನು ಮುಂಬೈ ಇಂಡಿಯನ್ಸ್ ತಂಡದ ಪರ ಬೌಲಿಂಗ್, ಬ್ಯಾಟಿಂಗ್ ಮಾಡಲು ಪೂರ್ಣ ಸಿದ್ಧವಿದ್ದೇನೆ. ಇಂತಹ ವದಂತಿಗಳು ಎಲ್ಲಿಂದ, ಹೇಗೆ ಹಬ್ಬಿದವು ಎಂದು ಗೊತ್ತಿಲ್ಲ ಎಂದು ಗ್ರೀನ್ ಸ್ಪಷ್ಟಪಡಿಸಿದ್ದಾರೆ.
ಅವರು ಈ ಬಾರಿಯ ಹರಾಜಿನಲ್ಲಿ ಐಪಿಎಲ್ ಇತಿಹಾಸದಲ್ಲೇ 2ನೇ ಗರಿಷ್ಠ 17.5 ಕೋಟಿ ರೂ.ಗಳಿಗೆ ಮಾರಾಟ ವಾಗಿದ್ದಾರೆ. ಇತ್ತೀಚೆಗೆ ಪ್ರವಾಸಿ ದ. ಆಫ್ರಿಕಾ ವಿರುದ್ಧ ನಡೆದ 2ನೇ ಟೆಸ್ಟ್‌ನಲ್ಲಿ ಗ್ರೀನ್ ಕೈಬೆರಳಿಗೆ ಹೊಡೆತ ತಿಂದಿದ್ದರು.
ಇದನ್ನೂ ಓದಿ:ಹೊಸ ಸಂಸತ್ ಭವನದಲ್ಲಿ ಬಜೆಟ್ ಅಧಿವೇಶನ: ಸಂಸದರಿಗೆ ಸಿಗಲಿದೆ ಹೊಸ ಐಡಿ
ಇದೇ ಹಿನ್ನೆಲೆಯಲ್ಲಿ ಅವರು ಆಡುವುದಿಲ್ಲ, ಬೌಲಿಂಗ್ ಮಾಡುವುದಿಲ್ಲ ಎಂದೆಲ್ಲ ವದಂತಿಗಳು ಹಬ್ಬಿದ್ದವು.
ಟಾಪ್ ನ್ಯೂಸ್
